ಮುಡಿಮಾರು ಪಾವೂರಿನಲ್ಲಿ ಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರು ಪೂಜೆ.

ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮುಡಿಮಾರು ಪಾವೂರು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರು ಪೂಜೆಯನ್ನು ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದ ವಠಾರದಲ್ಲಿ ಏರ್ಪಡಿಸಲಾಗಿತ್ತು.

ಈ ಸಭೆಗೆ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ಕೃಷ್ಣ ಶಿವ ಕೃಪ ಗುರುಗಳ ಸಂದೇಶಗಳನ್ನು ನೀಡಿದರು. ಅರಿಬೈಲು ಬರುವ ಜುಮಾದಿ ದೈವಸ್ಥಾನದ ಅರ್ಚಕರಾದ ಅರಸ ಪೂಜಾರಿ ಕುದುಕೋರಿ, ಮುಡಿಮಾರ್ ಮಲರಾಯ ಕ್ಷೇತ್ರದ ಅರ್ಚಕರಾದ ಚಂದ್ರಹಾಸ ಪೂಜಾರಿ ಮುಡಿಮಾರು,ಜಿಲ್ಲಾ ವೇದಿಕೆ ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಬಡಾಜೆ, ಕೋಶಾಧಿಕಾರಿ ರವೀಂದ್ರ ಪೂಜಾರಿ ಭಂಡಾರ ಮನೆ ಕಡಂಬಾರು, ಮುಂಡಪ್ಪ ಪೂಜಾರಿ ಕೆದುಂಬಾಡಿ, ಶಶಿಕಲಾ ಉದಯಕುಮಾರ್ ಅಳಪೆ, ಅಲ್ಲದೆ ವೇದಿಕೆಯ ನವೀನ್ ಮುಡಿಮಾರು, ಉಮೇಶ್ ಸುವರ್ಣ ಮುಡಿಮಾರ್, ಮುಂತಾದವರು ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷರಾದ ರವಿಮುಡಿಮಾರ್ ಸ್ವಾಗತಿಸಿ ಮಾಧವ ಪೂಜಾರಿ ಕುದುಕೋರಿ ಧನ್ಯವಾದ ಅರ್ಪಿಸಿದರು. ನಂತರ ಲಘು ಉಪಹಾರ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!