ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಗೆ ಡೆಸ್ಕ್ ಟಾಪ್ , ಪ್ರಿಂಟರ್ ನೀಡಿದ 24ನ್ಯೂಸ್ ಹಾಗೂ ಕೆ ಚಿಟ್ಟಿಲಪ್ಪಿಲ್ಲಿ ಸಂಸ್ಥೆ.

ಮಂಜೇಶ್ವರ : ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ 24ನ್ಯೂಸ್ ಹಾಗೂ ಕೆ ಚಿಟ್ಟಿಲಪ್ಪಿಲ್ಲಿ ಸಂಸ್ಥೆಯವರು ಶಾಲೆಗೆ ದೇಣಿಗೆಯಾಗಿ ನೀಡಿದ 8 ಡೆಸ್ಕ್ ಟಾಪ್ ಹಾಗೂ ಒಂದು ಪ್ರಿಂಟರ್ ಗಳ ಉದ್ಘಾಟನಾ ಸಮಾರಂಭ ಜರುಗಿತು.

ಕಾಸರಗೋಡು ಜಿಲ್ಲಾ ಕ್ರೈಂ ಬ್ರಾಂಚ್ ಡಿ. ವೈ. ಎಸ್. ಪಿ. ಶ್ರೀ ಟಿ. ಉತ್ತಮ್ ದಾಸ್ ಇವರು ಕಂಪ್ಯೂಟರ್‌ಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿದರು.

ಕುಂಜತ್ತೂರು ಶಾಲೆಯ ಪ್ರಾಂಶುಪಾಲರಾದ ಶ್ರೀ ಶಿಶು ಪಾಲನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ವಿದ್ಯಾರ್ಥಿಗಳಿಂದ ಲಹರಿ ವಿರುದ್ಧ ಪ್ರತಿಜ್ಞೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ 24 ನ್ಯೂಸ್ ಬ್ಯುರೋ ಕಾಸರಗೋಡಿನ ಪ್ರತಿನಿಧಿಯಾದ ಶ್ರೀ ಅರುಣ್ ಪಾರಕ್ಕಲ್ ಹಾಗೂ ಪತ್ರಕರ್ತ ಶ್ರೀ ಅಬ್ದುಲ್ ರಹಮಾನ್ ಉದ್ಯಾವರ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಮಹಮ್ಮದ್ ಅಶ್ರಫ್, ಎಸ್. ಎಂ. ಸಿ. ಸದಸ್ಯರು, ಪಿ.ಟಿ.ಎ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನಿತಾ ಸ್ವಾಗತಿಸಿದರು .ಶಿಕ್ಷಕ ಶ್ರೀ ದಿವಾಕರಬಲ್ಲಾಳ ವಂದಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!