ಸರ್ಕಾರಿ ಲೋವರ್ ಪ್ರೈಮರಿ ಶಾಲೆ (GLPS) ಬಡಾಜೆಯ 2025-26 ನೇ ಸಾಲಿನ ವಾರ್ಷಿಕ ಕ್ರೀಡೋತ್ಸವ.

ಬಡಾಜೆ: ಸರ್ಕಾರಿ ಲೋವರ್ ಪ್ರೈಮರಿ ಶಾಲೆ (GLPS) ಬಡಾಜೆಯ 2025-26 ನೇ ಸಾಲಿನ ವಾರ್ಷಿಕ ಕ್ರೀಡೋತ್ಸವವನ್ನು ಶಾಲಾ ಮೈದಾನದಲ್ಲಿ ಉತ್ಸಾಹಭರಿತವಾಗಿ ಆಚರಿಸಲಾಯಿತು. ಬೆಳಗ್ಗೆ 10.30 ಗಂಟೆಗೆ ಅಬ್ದುಲ್ ರಹಿಮಾನ್ ಮಜ್ಮ ಧ್ವಜಾರೋಹಣ ಮಾಡುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು

ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಣಾಕ್ಷಿ ಟೀಚರ್ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ವಾರ್ಡ್ ಸದಸ್ಯರಾದ ಯಾದವ್ ಬಡಾಜೆ, ಪಿಟಿಎ ಅಧ್ಯಕ್ಷ ಯಾಕೂಬ್, ನೂರನೇ ವರ್ಷದ ಸಮಿತಿಯ ಅಧ್ಯಕ್ಷ ರಝಾಕ್ ಕಿಟ್ಟಗುಂಡಿ, ಕಾರ್ಯದರ್ಶಿ ಮುಸ್ತಫಾ ಕೋಡಿ, ಯವರು ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪಾಲಕರು ಹಾಗೂ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕ್ರೀಡೋತ್ಸವಕ್ಕೆ ಇನ್ನಷ್ಟು ವಿಜೃಂಭಣೆಯುಂಟುಮಾಡಿತು.

50 ಮೀ., 100 ಮೀ. ಓಟ, ರಿಲೇ ರೇಸ್, ಸ್ಟ್ಯಾಂಡಿಂಗ್ ಬ್ರೋಡ್ ಜಂಪ್, ಲಾಂಗು ಜಂಪ್, ಬಾಲ್ ತ್ರೋ, ಬಾಲ್ ಕಲೆಕ್ಷನ್ ರೇಸ್ ಇತ್ಯಾದಿ ಸ್ಪರ್ಧೆಗಳು ಕ್ರೀಡೋತ್ಸವದ ಭಾಗವಾಗಿ ನಡೆಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ ಈ ಸ್ಪರ್ಧೆಗಳಿಗೆ ಶಿಕ್ಷಕರಾದ ಫೌಸಿಯಾ, ನಳಿನಿ, ಅಶ್ವಿನಿ, ಸೌಮ್ಯ ಅವರ ಮುಂಚೂಣಿ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ರಹೀಂ ಪುಚ್ಛತ್ ವಯಲ್ ಸ್ವಾಗತ ಭಾಷಣ ಮಾಡಿದರು. ಹರಿಣಾಕ್ಷಿ ಟೀಚರ್ ಧನ್ಯವಾದ ಅರ್ಪಿಸಿದರು. ಶಿಕ್ಷಕ ಅಶೋಕ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.

ಸಂಜೆಯ ಸಮಾರೋಪ ಸಮಾರಂಭದಲ್ಲಿ ಸಿದ್ಧೀಕ್ ಚೌಕ್ಕಿ, ಇಬ್ರಾಹಿಂ ಹಾಜಿ, ಬಷೀರ್ ಬಡಾಜೆ, ಕಬೀರ್ ಅಶ್ರಫ್ ಜಮಾಲ್, ಫಾತಿಮತ್ ಸುನೈಫ್, ಖಲೀಲ್ ಜಮಾಲ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಧನ್ಯವಾದದೊಂದಿಗೆ ಕ್ರೀಡೋತ್ಸವ ಸಂಪನ್ನ ಗೊಂಡಿತು

SHARE
Loading spinner

Leave a Reply

Your email address will not be published. Required fields are marked *

error: Content is protected !!