ಮಂಜೇಶ್ವರ – ತೌಡುಗೋಳಿ ರಸ್ತೆಯು ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸುವ, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಲಾ-ಕಾಲೇಜು, ಹಾರ್ಬರ್ ಆಫೀಸ್ ಜನಸಾಮಾನ್ಯರು ಸೇರಿದಂತೆ ಅತೀ ಹೆಚ್ಚು ಜನ ಬಾಹುಲ್ಯವಿರುವ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಜಂಕ್ಷನ್‌ನಲ್ಲಿ ಅತ್ಯಗತ್ಯವಾಗಿರುವ, ಫೂಟ್ ಓವರ್ ಬ್ರಿಡ್ಜ್ ಸ್ಥಾಪನೆಗಾಗಿ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆಯಾದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.
ಹೋರಾಟ ಸಮಿತಿಯ ನೇತೃತ್ವದಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಸಂಬಂಧ ಪಟ್ಟ ಇಲಾಖೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಆದಾಗ್ಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ತಳೆದಿರುವುದು ಅತ್ಯಂತ ದೌರ್ಭಾಗ್ಯಕರ ಸಂಗತಿ.
ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ತುರ್ತಾಗಿ ಪರಿಹಾರ ಕಂಡುಕೊಳ್ಳುವ ಸದುದ್ದೇಶದೊಂದಿಗೆ ನಾಗರಿಕರು. ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಿದ್ಯಾರ್ಥಿ ಒಕ್ಕೂಟಗಳು ಲಾ-ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಏಕದಿನ ಸೂಚನಾ ಮುಷ್ಕರ ಹಾಗೂ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು.
ಮುಷ್ಕರ ಸಹಿ ಅಭಿಯಾನದಲ್ಲಿ ಜನಪ್ರತಿನಿಧಿಗಳಾದ ಶ್ರೀಮತಿ ಜೀನ್ ಲವಿನಾ ಮೊಂತೆರೂ, ಮಹಮ್ಮದ್ ಸಿದ್ಧಿಕ್, ಯಾದವ ಬಡಾಜೆ,ಆಯಿಷತ್ ರುಬೀನಾ, ನೇತಾರರಾದ ಕೆ.ಆರ್ ಜಯಾನಂದ,ಪಿ.ಎಚ್ ಅಬ್ದುಲ್ ಹಮೀದ್,ಡಿ. ಎಂ.ಕೆ ಮೊಹಮ್ಮದ್,ಅಶ್ವಿನಿ ಯಂ.ಎಲ್,
ರಾಮಕೃಷ್ಣ ಕಡಂಬಾರು, ಶರೀಫ್ ಪಾವೂರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.