ಮಂಜೇಶ್ವರ ಫೆಡ್ ಫಾರ್ಮರ್ ಪ್ರೊಡ್ಯೂಸರ್ ಕಂಪೆನಿಯ ಪ್ರಥಮ ವಾರ್ಷಿಕ ಮಹಾಸಭೆ.

ಮಂಜೇಶ್ವರ : ಮಂಜೇಶ್ವರ ಫೆಡ್ ಫಾರ್ಮರ್ ಪ್ರೊಡ್ಯೂಸರ್ ಕಂಪೆನಿಯ ಪ್ರಥಮ ವಾರ್ಷಿಕ ಮಹಾಸಭೆಯು ಉಪ್ಪಳ ಕೈಕಂಬ ಪಂಚಮಿ ಹಾಲ್ ನಲ್ಲಿ ಕಂಪೆನಿಯ ಚೆಯರ್ಮನ್ ಶ್ರೀ ಖಾದರ್ ಕೆ ಎಂ ರವರ ಅಧ್ಯಕ್ಷತೆಯಲ್ಲಿ ಜರಗಿತು.

ನಿರ್ದೇಶಕರಾದ ಶ್ರೀಮತಿ ಬೀಫಾತಿಮ್ಮ ವರದಿ ಮಂಡಿಸಿದರು. ಖರ್ಚು ವೆಚ್ಚಗಳ ಬಗ್ಗೆ ಹಾಗೂ ಆಡಿಟ್ ವರದಿಯ ಬಗ್ಗೆ ನಿರ್ದೇಶಕರಾದ ಶ್ರೀಮತಿ ಜ್ಯೋತಿಶ ವಿವರಿಸಿದರು.ಕಂಪೆನಿಯ ನೂತನ ಆಡಳಿತ ಸಮಿತಿಯ ಬಗ್ಗೆ ಹಾಗೂ ಆಡಿಟರ್ ನೇಮಕಾತಿ ಬಗ್ಗೆ ಕಂಪೆನಿ ಅಡ್ವೈಸರ್ ಶ್ರೀ ಅನಿಲ್ ಕುಮಾರ್ ವಿವರಿಸಿದರು.

ನಿರ್ದೇಶಕರಾದ ಶ್ರೀ ನಾಗೇಶ್ ವರ್ಕಾಡಿ, ಶ್ರೀ ಮೊಯಿದೀನ್ ಶೆಫೀಕ್, ಶ್ರೀ ಚಂದ್ರಹಾಸ ಶೆಟ್ಟಿ, ಶ್ರೀ ಅಶ್ರಫ್ ಕುಂಜತೂರ್, ಶ್ರೀ ಚಿದಾನಂದ, ಕಂಪೆನಿ ಸಿಇಒ ಶ್ರೀಮತಿ ಅಶ್ವತಿ ಭಾಗವಹಿಸಿದರು.ಸೆಕ್ರೆಟರಿ ರಾಮಚಂದ್ರ ಟಿ ಸ್ವಾಗತಿಸಿ ನಿರ್ದೇಶಕಿ ಶ್ರೀಮತಿ ಐರಿನ್ ಜೋಸ್ಪಿನ್ ವಂದಿಸಿದರು.

ಕಂಪೆನಿಯ ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಖಾದರ್ ಕೆ ಎಂ, ಜ್ಯೋತಿಶ, ರಾಜಶೇಖರ್ ಎನ್, ಐರಿನ್ ಜೋಸ್ಪಿನ್, ನಾಗೇಶ್ ಎಂ, ರಾಮಚಂದ್ರ ಟಿ, ಮೊಯಿದಿನ್ ಶೆಫಿಕ್,ಅನಿಲ್ ಕುಮಾರ್ ಡಿ, ಬೀಫಾತಿಮ್ಮ, ಅಶ್ರಫ್ ಕುಂಜಜತ್ತೂರು, ಚಿದಾನಂದ ಎಂಬವರನ್ನು ಆಯ್ಕೆ ಮಾಡಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!