ಪುಚ್ಛತ್ ವಯಲ್: ಮುಹಿಯುದ್ದೀನ್ ಜುಮಾ ಮಸ್ಜಿದ್ ಆವರಣದಲ್ಲಿರುವ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ನಬಿ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.
ಕಾರ್ಯಕ್ರಮಕ್ಕೆ ಯಾಕೂಬ್ ಮಜ್ಮಾ ಅವರು ಅಧ್ಯಕ್ಷತೆ ವಹಿಸಿದ್ದರು. ಜಮಾಅತ್ ಖತೀಬ್ ಉಮರುಲ್ ಫಾರುಕ್ ಹನೀಫಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರವಾದಿ ಮುಹಮ್ಮದ್ (ಸ.ಅ) ಅವರ ಬದುಕು ಮತ್ತು ಸಂದೇಶಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಜಮಾಅತ್ ಕಾರ್ಯದರ್ಶಿ ಸಯ್ಯಿದ್ ಗುಡ್ಡ, ಖಜಾಂಚಿ ಅಬೂಬಕ್ಕರ್, ಈಸಾ ಹಾಜಿ, ಅಬ್ದುರ್ ರಹ್ಮಾನ್ ಮಜ್ಮಾ, ರಝಾಕ್XYZ ಮತ್ತು ಸಿದ್ದೀಖ್XYZ ಅವರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಫ್ಲವರ್ ಶೋ, ಸ್ಕೌಟ್, ದಫ್, ಬುರ್ದ, ಖಿರಾಅತ್, ಭಾಷಣ ಸ್ಪರ್ಧೆ ಮತ್ತು ಮದ್ಹ್ ಗೀತೆಗಳಂತಹ ಕಲಾ ಪ್ರದರ್ಶನಗಳು ಪ್ರೇಕ್ಷಕರನ್ನು ಆಕರ್ಷಿಸಿದವು. ಮಕ್ಕಳ ಅದ್ಭುತ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದವು.
ಕಲಾ ಕಾರ್ಯಕ್ರಮಗಳ ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಅಬೂಬಕ್ಕರ್ ಕೊಡಿ, ಹನೀಫ್ ಹಾಜಿ, ಮುಹಮ್ಮದ್ ಪುಚ್ಛತ್ ವಯಲ್, ಮತ್ತು ಬಾವ ಅವರು ಬಹುಮಾನಗಳನ್ನು ವಿತರಿಸಿದರು. ಸಮಾರಂಭದಲ್ಲಿ XYZ ಕ್ಲಬ್‌ನ ಸದಸ್ಯರಾದ ಲತೀಫ್, ಶಬೀರ್, ನಸೀಂ, ಸದ್ದಾಂ, ಮುಸ್ತಫಾ, ಬಶೀರ್, ಅಬ್ದುಲ್ ಖಾದರ್ (ಕುಂಜಿ), ಮತ್ತು ಹನೀಫ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರೋಪ ಭಾಷಣದಲ್ಲಿ ರಹೀಂ ಪುಚ್ಛತ್ ವಯಲ್ ಅವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. XYZ ಕ್ಲಬ್ ಸದಸ್ಯರು ಸಿದ್ಧಪಡಿಸಿದ್ದ ಸಂಜೆ ಚಹಾ ಮತ್ತು ತಿಂಡಿ ಎಲ್ಲರ ಗಮನ ಸೆಳೆಯಿತು, ಇದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಕಾರ್ಯಕ್ರಮಗಳು ಯಶಸ್ವಿಯಾಗಿ ಸಮಾಪ್ತಿಗೊಂಡವು.