ರಾಷ್ಟ್ರವ್ಯಾಪಕವಾಗಿ ಆಯೋಜಿಸಲಾಗಿರುವ ಕೇಂದ್ರ ಸರಕಾರದ ಮತಕಳ್ಳತನದ ವಿರುದ್ಧ ಸಹಿ ಅಭಿಯಾನದ ಭಾಗವಾಗಿ ಮಂಜೇಶ್ವರ ಬ್ಲಾಕ್ ಮಟ್ಟದ ಅಭಿಯಾನ

ಮಂಜೇಶ್ವರ:ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ರಾಷ್ಟ್ರವ್ಯಾಪಕವಾಗಿ ಆಯೋಜಿಸಲಾಗಿರುವ ಕೇಂದ್ರ ಸರಕಾರದ ಮತಕಳ್ಳತನದ ವಿರುದ್ಧ ಸಹಿ ಅಭಿಯಾನದ ಭಾಗವಾಗಿ ಮಂಜೇಶ್ವರ ಬ್ಲಾಕ್ ಮಟ್ಟದ ಅಭಿಯಾನವನ್ನು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಉದ್ಘಾಟಿಸಿದರು.

ಪ್ರಜಾಪ್ರಭುತ್ವದ ಆಡಿಸ್ತಂಬವಾದ ಮತವನ್ನು ಶುದ್ಧವಾಗಿ ಸಂರಕ್ಷಿಸಬೇಕು. ಹಣ, ಸುಳ್ಳು ಭರವಸೆಗಳು, ಬೆದರಿಕೆಗಳು ಮುಂತಾದವುಗಳ ಮೂಲಕ ಜನರ ಮತವನ್ನು ಕಸಿದುಕೊಳ್ಳುವ ಬಿಜೆಪಿ ಪ್ರಜಾಪ್ರಭುತ್ವವನ್ನೂ ಜನರ ಭವಿಷ್ಯವನ್ನೂ ಮಾರುತ್ತಿದೆ,” ಎಂದು ಪಿ ಕೆ ಫೈಸಲ್ ಉದ್ಘಾಟನಾ ಭಾಷಣದಲ್ಲಿ ಹೇಳಿದರು.ಬ್ಲಾಕ್ ಅಧ್ಯಕ್ಷ ಡಿ.ಎಂ.ಕೆ. ಮೊಹಮ್ಮದ್ ಅಧ್ಯಕ್ಷತೆ ವಹಿಸಿದರು. ಮಾಜಿ ಡಿಸಿಸಿ ಹಕೀಂ ಕುನ್ನಿಲ್, ಸೇವಾದಳ ರಾಜ್ಯಾಧ್ಯಕ್ಷ ರಮೇಶನ್ ಕರುವಚ್ಚೇರಿ, ಎಂ.ಸಿ. ಪ್ರಭಾಕರನ್, ಹರ್ಷದ್ ವರ್ಕಾಡಿ, ಶಾಹುಲ್ ಹಮೀದ್, ಹನೀಫ್ ಪಡಿಂಜಾರ್, ಸತ್ಯನ್ ಉಪ್ಪಳ, ಫಾರುಖ್ ಶರಿಯಾ, ಅಡ್ವೊ. ಕರೀಂ ಪೂನ ಮತ್ತಿತರರು ಮಾತನಾಡಿದರು.

ಸಹಿ ಅಭಿಯಾನದಲ್ಲಿ ಮೊದಲ ಸಹಿ ಹಾಕಿ ಬ್ಲಾಕ್ ಅಧ್ಯಕ್ಷ ಡಿ.ಎಂ.ಕೆ. ಮೊಹಮ್ಮದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಂಡಲಾಧ್ಯಕ್ಷರಾದ ಪುರುಷೋತ್ತಮ ಹರಿಬೈಲ್, ಬಾಬು ಬಂದಿಯೊಡ್, ದಾಮೋದರನ್, ಬ್ಲಾಕ್ ಕಾಂಗ್ರೆಸ್ ಹುದ್ದೆದಾರರಾದ ಚಂದ್ರಶೇಖರ ಶೆಟ್ಟಿ, ಇಕ್ಬಾಲ್ ಕಲಿಯೂರ್, ಮಂಸೂರ್ BM, ಫ್ರಾನ್ಸಿಸ್ ಡಿಸೋಜ, ಗಣೇಶ್ ಪಾವೂರು, ಧರ್ಮನಗರ ಸೇರಿದಂತೆ ಹಲವು ಘಟಕ ಸಂಘಟನಾ ನಾಯಕರೂ ಪ್ರತಿನಿಧಿಗಳೂ ಪಾಲ್ಗೊಂಡರು.

SHARE
Loading spinner

Leave a Reply

Your email address will not be published. Required fields are marked *

error: Content is protected !!