ಮಂಗಳೂರಿನ ಡಾ.ಟಿ.ಎಂ.ಎ. ಪೈ ಕನ್ ವೆನ್ಶನ್ ಸೆಂಟರ್ ನಲ್ಲಿ ಫಿಲಾನಮಿಸ್ಟ್ ಅಂಚೆಚೀಟಿಗಳು ಮತ್ತು ನಾಣ್ಯಗಳ ಪ್ರದರ್ಶನ

ಮಂಗಳೂರು: ದೇಶದ ಪ್ರಮುಖ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಕಾರಾದ ಮಂಗಳೂರಿನ ಎಂ. ಪ್ರಶಾಂತ್ ಶೇಟ್ ಅವರಿಂದ ಫಿಲಾನಮಿಸ್ಟ್ ಅಂಚೆಚೀಟಿಗಳು ಮತ್ತು ನಾಣ್ಯಗಳ ಪ್ರದರ್ಶನ ಇಂದು ಮತ್ತು ನಾಳೆ ಮಂಗಳೂರಿನ ಡಾ.ಟಿ.ಎಂ.ಎ. ಪೈ ಕನ್ ವೆನ್ಶನ್ ಸೆಂಟರ್ ನಲ್ಲಿ ನಡೆಯುತ್ತಿದ್ದು ಇದು ಸಾರ್ವಜನಿಕರಿಗೆ ಉಚಿತ ಪ್ರವೇಶವಾಗಿದೆ . ಇತಿಹಾಸದ ಬಗ್ಗೆ ಆಸಕ್ತಿ ಉಳ್ಳವರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

ವಿಶೇಷತೆ

ಜಗತ್ತಿನಲ್ಲೇ ಮೊದಲ ಬಾರಿಗೆ ಬಳಕೆಗೆ ಬಂದ 17 ನೇ ಶತಮಾನದ ಆಫ್ರಿಕನ್ ನಾಣ್ಯ, ಚೀನಾ, ಜಪಾನ್ , ದಕ್ಷಿಣ ಏಷ್ಯಾ ನಾಣ್ಯಗಳು ಸೇರಿದಂತೆ 40ಕ್ಕೂ ಅಧಿಕ ದೇಶಗಳ ಅಪರೂಪದ 800ಕ್ಕೂ ಅಧಿಕ ನಾಣ್ಯಗಳು, ಇತಿಹಾಸದ ಮಹತ್ವ ಸಾರುವ 2 ಸಾವಿರಕ್ಕೂ ಅಧಿಕ ಅಂಚೆ ಚೀಟಿಗಳು, 1,500 ಪೋಸ್ಟ್ ಕಾರ್ಡ್ ಗಳು ಪ್ರದರ್ಶನದಲ್ಲಿರುತ್ತವೆ. ಗಾಜು, ಚಿಪ್ಪು, ಚಿನ್ನ, ಸಿರಾಮಿಕ್ , ವಜ್ರ, ಮೈಕ್ರೋಚಿಪ್ ಮೊದಲಾದವುಗಳ ಮೇಲೆ ಮುದ್ರಿತವಾದ ಅಂಚೆಚೀಟಿಗಳು, 1840ರ ಇಂಡೋ-ಪೋರ್ಚುಗೀಸ್ ಮೊದಲ ಅಂಚೆಚೀಟಿಗಳ ಅಪೂರ್ವ ಸಂಗ್ರಹ ಕೂಡ ಪ್ರದರ್ಶನ ಕಾಣಲಿದೆ. ಇವುಗಳ ಮೂಲಕ ಪ್ರಪಂಚದ ಇತಿಹಾಸ, ಮಹತ್ವದ ಘಟನೆಗಳನ್ನು ತಿಳಿದುಕೊಳ್ಳಬಹುದಾಗಿದೆ.

ಅಪರೂಪದ ನಾಣ್ಯ, ಅಂಚೆಚೀಟಿಗಳು ಪ್ರದರ್ಶನ: ಗಂಗಾ ರಾಜವಂಶದ 310 ಪ್ರಭೇದಗಳ ನಾಣ್ಯ ಸಂಗ್ರಹವನ್ನು ಪ್ರಶಾಂತ್ ಶೇಟ್ ಅವರು ಹೊಂದಿದ್ದು ಇದು ಯಾವುದೇ ವ್ಯಕ್ತಿಯ ಬಳಿ ಇರುವ ಅತಿದೊಡ್ಡ ಸಂಗ್ರಹವಾಗಿದೆ. 650 ಪ್ರಭೇದಗಳನ್ನು ಒಳಗೊಂಡಂತೆ 2,100 ಪ್ರಭೇದಗಳ ಬ್ರಿಟಿಷ್ ಇಂಡಿಯಾ ನಾಣ್ಯಗಳನ್ನು ನಾವು ಕಾಣಬಹುದು . ಇದು ಒಂದೇ ಸೂರಿನಡಿಗೆ ಇತಿಹಾಸವನ್ನು ಇಟ್ಟಂತೆ ಇದೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!