“ಪೀಸ್ ಟ್ಯಾಲೆಂಟ್ ಹಂಟ್” ಸಾಂಸ್ಕೃತಿಕ ಕಾರ್ಯಕ್ರಮ.

ಮಂಜೇಶ್ವರ : ಕಳೆದ ಸುಮಾರು 17 ವರ್ಷಗಳಿಂದ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆಯಿತ್ತಿರುವ ಹೊಸಂಗಡಿ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲಾ ವಿದ್ಯಾರ್ಥಿಗಳು ತಮ್ಮ ಅನೇಕ ಪ್ರತಿಭೆಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ “ಪೀಸ್ ಟ್ಯಾಲೆಂಟ್ ಹಂಟ್” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕಲೆಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಪ್ರಶಂಶೆಗೆ ಪಾತ್ರರಾದರು.


ಸಕಲ ಸಿದ್ಧತೆಗಳೊಂದಿಗೆ ಅದ್ದೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ಶೈಕ್ಷಣಿಕ ಕ್ಷೇತ್ರದ ಶಿಸ್ತು ಪಾಲನೆಯಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ತೀರ್ಪುಗಾರರ ಪರಿಶೀಲನೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಿನ್ನೆಸ್ ದಾಖಲೆಯಲ್ಲಿ ಸ್ಥಾನ ಪಡೆದಿರುವ ಶಾಲಾ ಪ್ರಾಂಶುಪಾಲ ಶ್ರೀಯುತ ಅಬ್ದುಲ್ ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಸಾಂಸ್ಕೃತಿಕ ಕಾರ್ಯಕ್ರಮ, ಕೇವಲ ಮನರಂಜನೆಗಾಗಿ ಅಲ್ಲದೆ, ನಮ್ಮ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಪ್ರತಿಬಿಂಬಿಸುವ ಒಂದು ಅಗ್ರಘಟ್ಟವಾಗಿದೆ. ಈ ಕಾರ್ಯಕ್ರಮ ನಮ್ಮ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು, ಅವರ ಕೌಶಲ್ಯಗಳನ್ನು ಹೆಚ್ಚು ಅಭಿವೃದ್ಧಿಪಡಿಸಲು ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಅತ್ಯಂತ ಪ್ರಮುಖವಾಗಿಯೂ ಪರಿಣಮಿಸುತ್ತದೆ. ಎಂದು ಹೇಳಿದರು.ಬಳಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಖುರಾನ್ ಪಠಣ ಸ್ಪರ್ಧೆ, ಭಾಷಣ, ಗಾಯನ, ನಾಟಕ, ಕವಿತೆ, ಚಿತ್ರಕಲೆ, ಕರಾಟೆ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿತು.

ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದ ಈ ಕಾರ್ಯಕ್ರಮವು ಮನರಂಜನೆಯ ಜೊತೆಯಾಗಿ ವಿದ್ಯಾರ್ಥಿಗಳಲ್ಲಿ ವಿಶೇಷ ಆಸಕ್ತಿ ಹಾಗೂ ಪ್ರೋತ್ಸಾಹವನ್ನು ಸೃಷ್ಟಿಮಾಡಿತು. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಕಲೆಯ ಪ್ರಾಮುಖ್ಯತೆ, ವೈವಿಧ್ಯಮಯ ಕೌಶಲ್ಯಗಳ ಮಹತ್ವ, ಹಾಗೂ ಸ್ಪರ್ಧಾತ್ಮಕ ಪರಿಸರದಲ್ಲಿ ಉತ್ಕೃಷ್ಟತೆಯನ್ನು ಹೇಗೆ ಸಾಧಿಸಬೇಕೆಂದು ಪ್ರಜ್ಞೆ ಮೂಡಿಸಿದೆ.ಒಟ್ಟಾರೆಯಾಗಿ, ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಕಲೆ ಮತ್ತು ಕೌಶಲ್ಯದ ಜೀವನದಲ್ಲಿ ಮಹತ್ವದ ಹೆಜ್ಜೆಯಾಯಿತು.ಕಾರ್ಯಕ್ರಮಕ್ಕೆ ಶಾಲಾ ಕೋರ್ಡಿನೇಟರುಗಳಾದ ಫಾತಿಮಾ ರೋಶ್ನಿ, ರಶೀದಾ ಹಾಗೂ ಅಧ್ಯಾಪಕರುಗಳು ನೇತೃತ್ವ ನೀಡಿದರು. ಈ ಸಂದರ್ಭ ಶಾಲಾ ಚೇಯರ್ಮ್ಯಾನ್ ಅಬ್ದುಲ್ ರಹ್ಮಾನ್ ಅರಿಮಲ, ಅಕೌಂಟ್ ಮ್ಯಾನೇಜರ್ ಮೊಹಮ್ಮದ್ ಕಲ್ಲಾಯಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!