ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಯಾ ಬಜಾರ್ ಬಸ್ ನಿಲ್ದಾಣದ ಹೆಸರಿನಲ್ಲಿ ಬದಲಾವಣೆ .ಪ್ರಯಾಣಿಕರಲ್ಲಿ ಗೊಂದಲ.

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಯಾ ಬಜಾರ್ ಬಸ್ ನಿಲ್ದಾಣದ ಹೆಸರಿನಲ್ಲಿ ಬದಲಾವಣೆ ಮಾಡಿರುವುದು ಪ್ರಯಾಣಿಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ನಯಾ ಬಜಾರಿನ ಮಂಗಳೂರು ಕಡೆಗೆ ಸಂಚರಿಸುವ ರಸ್ತೆಯಲ್ಲಿರುವ ಬಸ್ ನಿಲ್ದಾಣಕ್ಕೆ ಮಂಗಲ್ಪಾಡಿ ಎಂಬ ಹೆಸರಿನಲ್ಲಿ ಫಲಕವನ್ನು ಸ್ಥಾಪಿಸಿರುವುದು ಪ್ರಯಾಣಿಕರ ಗೊಂದಲಕ್ಕೆ ಕಾರಣವಾಗಿದೆ.

ನಯಾಬಜಾರಿಗೆ ಹೊರಗಿನಿಂದ ಆಗಮಿಸುವ ಪ್ರಯಾಣಿಕರೂ, ಹೊಸದಾಗಿ ಬರುವ ಬಸ್ ಚಾಲಕರೂ ಈ ಸ್ಥಳವನ್ನು ಅರ್ಥಮಾಡಿಕೊಳ್ಳದೇ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹತ್ತಿರದಲ್ಲಿರುವ ಕೈಕಂಬ ಬಸ್ ನಿಲ್ದಾಣಕ್ಕೆ ತಲುಪಿದಾಗ ಮಾತ್ರವೇ ಅರ್ಥವಾಗುತ್ತಿದೆ. ನಯಾ ಬಜಾರ್ ಬಸ್ ನಿಲ್ದಾಣವನ್ನು ದಾಟಿ ಹೋಗಿರುವುದು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರಯಾಣಿಕರು ವಿಪರ್ಯಾಸಕ್ಕೊಳಗಾಗಿದ್ದಾರೆ. ನಯಾ ಬಜಾರಿನಿಂದ ಸುಮಾರು 150 ಮೀಟರ್ ದೂರದಲ್ಲಿ ಬಸ್ ನಿಲ್ದಾಣವನ್ನು ಸ್ಥಾಪಿಸಿರುವುದರಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ಈಗಲೂ ಹಿಂದೆ ಬಸ್ ಏರುತ್ತಿದ್ದ ಸ್ಥಳದಲ್ಲಿಯೇ ಬಸ್ ಕಾಯುತ್ತಿರುವ ಸ್ಥಿತಿ ಮುಂದುವರೆದಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಎಡವಟ್ಟಿನಿಂದ ಪ್ರಯಾಣಿಕರು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!