ಕನಿಲ ಶ್ರೀ ಭಗವತೀ ಕ್ಷೇತ್ರಕ್ಕೆ ಭೇಟಿ ಕೊಟ್ಟ ಕೊಡುಗೈ ದಾನಿ ಶ್ರೀ ಸದಾಶಿವ ಶೆಟ್ಟಿ ಕನ್ಯಾನ.

ಮಂಜೇಶ್ವರ: ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಬರದಿಂದ ಸಾಗುತ್ತಾ ಇದ್ದು . ಇಂದು ಕೊಡುಗೈ ದಾನಿ ಬಡವರ ಬಂಧು ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಕೂಳೂರು ಅವರು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ . ಬರದಿಂದ ಸಾಗುತ್ತಿರುವ ಜೀರ್ಣೋದ್ದಾರ ಕೆಲಸವನ್ನು ವೀಕ್ಷಿಸಿ, ರೂಪುರೇಷೆ ನೋಡಿ ಕೆಲವೊಂದು ಸಲಹೆಯನ್ನು ನೀಡಿದರು.


ಈ ಸಂದರ್ಭದಲ್ಲಿ ಕ್ಷೇತ್ರ ಜೀರ್ಣೋದ್ದಾರ ಸಮಿತಿ ಮತ್ತು ಆಡಳಿತ ಸಮಿತಿಯಿಂದ ಸದಾಶಿವ ಶೆಟ್ಟಿಯವರಿಗೆ ಶಾಲು ಹೊದಿಸಿ ಫಲ ಪುಷ್ಪವನಿತ್ತು ಗೌರವಿಸಲಾಯಿತು.ಈ ಹಿಂದೆ ಜೀರ್ಣೋದ್ದಾರ ಆರಂಭಿಕ ದಿನದಲ್ಲೂ ಸದಾಶಿವ ಶೆಟ್ಟಿಯವರು ಕ್ಷೇತ್ರಕ್ಕೆ ಬೇಟಿಕೊಟ್ಟಿದ್ದು ಆಗಲೇ ತನ್ನಿಂದ ಆಗುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದರು ,ತ್ವರಿತ ಗತಿಯಲ್ಲಿ ಸಾಗುತ್ತಿರುವ ಕೆಲಸವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿದ್ದು ಅಲ್ಲದೆ ಆದಷ್ಟು ಬೇಗನೆ ಜೀರ್ಣೋದ್ದಾರ ಕಾರ್ಯಗಳು ಮುಗಿಯುವಲ್ಲಿ ಭಗವತೀ ಮಾತೆಯು ಕರುಣಿಸಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕಾರ್ನವರುಗಳು,ಆಚಾರಪಟ್ಟವರು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಸದಸ್ಯರು , ಆಡಳಿತ ಸಮಿತಿ ಅಧ್ಯಕ್ಷರು ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!