ಕಾಸರಗೋಡು: ಕಾಸರಗೋಡು ಜಿಲ್ಲೆಯ ಬೆದ್ರಡ್ಕ ರಾಮ್ ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನವಾಗಿ ಮಹಿಳಾ ಸಂಘ ರೂಪೀಕರಣಗೊಂಡಿತು. ಮೊಗ್ರಾಲ್ ಪುತ್ತೂರು ಪಂಚಾಯತಿನ 9 ನೇ ವಾರ್ಡು ಸದಸ್ಯೆ ಶ್ರೀಮತಿ ಪ್ರಮೀಳಾ ಮಜಲ್ ದೀಪ ಬೆಳಗಿಸಿ ರಾಮ್ ನಗರದ “ಸಿಂಧೂರ🔴 ಮಹಿಳಾ ಸಂಘ”ವನ್ನು ಉದ್ಘಾಟಿಸಿದರು.
ರಾಮ್ ನಗರ ರಾಮ್ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷ ಶ್ರೀ ಸಂದೇಶ್, ಕಾರ್ಯದರ್ಶಿ ಶ್ರೀ ಶರತ್, ಕೋಶಾಧಿಕಾರಿ ಶ್ರೀ ಸತೀಶ್ (ಸಚ್ಚಿ) ಉಪಸ್ಥಿತರಿದ್ದರು. ಶ್ರೀ ರಂಜು ರಾಮ್ ನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ನೂತನ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಸುಶ್ಮಿತಾಯತೀಶ್, ಕಾರ್ಯದರ್ಶಿಯಾಗಿ ಶ್ರೀಮತಿ ಸವಿತಾವಿನಾಯಕ, ಕೋಶಾಧಿಕಾರಿಯಾಗಿ ಶ್ರೀಮತಿ ಸಂಧ್ಯಾಜಯರಾಜ್ ಅವರನ್ನು ಆಯ್ಕೆಮಾಡಲಾಯಿತು. ರಾಮ್ ಫ್ರೆಂಡ್ಸ್ ಕ್ಲಬ್ಬಿನ ಸದಸ್ಯರು ಜತೆಗೂಡಿ ಕಾರ್ಯಕ್ರಮ ವಿಜಯಗೊಳಿಸಿದರು. ನೆರೆದವರಿಗೆ ಪಾನೀಯ, ಸಿಹಿತಿಂಡಿ ವಿತರಿಸಲಾಯಿತು.
ನೂತನವಾಗಿ ರೂಪೀಕರಣಗೊಂಡ ” ಸಿಂಧೂರ🔴 ಮಹಿಳಾ ಸಂಘ”ಕ್ಕೆ ರಾಮ್ ಫ್ರೆಂಡ್ಸ್ ನ ವತಿಯಿಂದ ಅಧ್ಯಕ್ಷರ ಮುಖಾಂತರ ಸಂಭಾವಣೆ ನೀಡಲಾಯಿತು.