ಮಂಜೇಶ್ವರ : ಆರ್ಥಿಕ ಸಂಕಷ್ಟವನ್ನು ಎದುರಿಸುತಿದ್ದ ದಂಪತಿಗಳು ವಿಷ ಸೇವಿಸಿ ಆತ್ಮಹತ್ಯೆ ಗೆಯ್ದ ಘಟನೆ ಮಂಜೇಶ್ವರ ಕಡಂಬಾರಿನಲ್ಲಿ ಸಂಭವಿಸಿದೆ.
ಕಡಂಬಾರು ಜಂಭದ ಪದವು ಅಯ್ಯಪ್ಪ ಮಂದಿರದ ಎದುರಿನಲ್ಲಿ ವಾಸವಾಗಿರುವ ಅಜಿತ್ ಹಾಗೂ ಈತನ ಪತ್ನಿ ಶ್ವೇತಾ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತಳು ಮಜೀರ್ಪಳ್ಳ ಬೇಕರಿ ಸಮೀಪದ ಸೈ೦ಟ್ ಮೇರಿಸ್ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರಿಗೆ ಮೂರು ವರ್ಷ ಪ್ರಾಯದ ಮಗುವೊಂದು ಇದ್ದು ಫೈನಾನ್ಸ್ ನಿಂದ ಸಾಲ ಪಡೆದು ತೊಂದರೆ ಗೊಳಗಾಗಿದ್ದರೆಂದು ತಿಳಿದು ಬಂದಿದೆ .
ಮಾಹಿತಿ ಅರಿತ ಸಮೀಪವಾಸಿಗಳು ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.ಆದರೂ ಇವರನ್ನು ಉಳಿಸಲು ಸಾಧ್ಯವಾಗಲಿಲ್ಲ .