ವರ್ಕಾಡಿ ಕೊಡ್ಲಮೊಗರಿನಲ್ಲಿ ಭಾರೀ ಗಾಂಜಾ ಬೇಟೆ. 116 ಕೆ ಜಿ ಗಾಂಜಾ ಹಾಗೂ ಮಿನಿ ಲಾರಿ ವಶ.

ಮಂಜೇಶ್ವರ : ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಕೊಡ್ಲಮೊಗರಿನಲ್ಲಿ ಭಾರೀ ಗಾಂಜಾ ಬೇಟೆ. 116 ಕೆ ಜಿ ಗಾಂಜಾ ಹಾಗೂ ಮಿನಿ ಲಾರಿಯೊಂದನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ. ಸುಳ್ಯಮೆ ಯಲ್ಲಿರುವ ಮನೆಯೊಂದರ ಶೆಡ್ ನಲ್ಲಿ ನಾಲ್ಕು ಗೋಣಿ ಚೀಲಗಳಲ್ಲಾಗಿ ತೆಗೆದಿರಿಸಲಾಗಿದ್ದ ರೀತಿಯಲ್ಲಿ ಗಾಂಜಾ ಪತ್ತೆ ಹಚ್ಚಲಾಗಿದೆ.

ಗಾಂಜಾ ಸಾಗಾಟ ಮಾಡಲು ಉಪಯೋಗಿಸಿದ್ದೆಂದು ಶಂಕಿಸಲಾಗುತ್ತಿರುವ ಮಿನಿ ಲಾರಿ ಶೆಡ್ ನ ಸಮೀಪದಲ್ಲಿ ನಿಲುಗಡೆಯಾಗಿತ್ತು.
ರಹಸ್ಯ ಮಾಹಿತಿಯಂತೆ ಎ ಎಸ್ಪಿ ನಂದ ಗೋಪಾಲ್ ರವರ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!