ಕಾಸರಗೋಡು: ಶಬರಿಮಲೆ ದೇವಸ್ಥಾನದಲ್ಲಿ ನಡೆದ ಅಕ್ರಮ ಹಾಗು ಚಿನ್ನಾಭರಣ ಲೂಟಿಯ ಬಗ್ಗೆ ಸಿಬಿಐ ಸಹಿತ ಕೇಂದ್ರೀಯ ಏಜೆನ್ಸಿಯಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಬರಿಮಲೆಯಲ್ಲಿನ ಚಿನ್ನದ ಆಭರಣಗಳನ್ನು ರಾಜ್ಯ ಸರಕಾರದ ತಿಳುವಳಿಕೆಯಲ್ಲೇ ಕಳ್ಳಸಾಗಾಣಿಕೆ ಮಾಡಲಾಗಿದೆ ಎಂದೂ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ ಪಿ ಅಬ್ದುಲ್ಲ ಕುಟ್ಟಿ ಒತ್ತಾಯಿಸಿದರು .
ಶಬರಿಮಲೆ ಕ್ಷೇತ್ರದಲ್ಲಿ ನಡೆದ ಅಕ್ರಮ ಹಾಗು ಚಿನ್ನಾಭರಣ ಲೂಟ ವಿರೋಧಿಸಿ ಬಿಜೆಪಿ ಶಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ನಡೆದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡಿದರು – ಶಬರಿಮಲೆ ಕ್ಷೇತ್ರಕ್ಕೆ ಸಂಬಂಧಿಸಿ ಸರಕಾರ ನಿರಂತರವಾಗಿ ಆಚಾರ, ಅನುಷ್ಠಾನಗಳನ್ನು ಉಲ್ಲಂಘಿಸಿ ದೇವಸ್ಥಾನದಿಂದ ಕೊಳ್ಳೆ ಹೊಡೆಯುತ್ತಿದೆ. ಇಂತಹ ಪ್ರಕರಣಗಳು ಶಬರಿಮಲೆಗೆ ಮಾತ್ರ ಸೀಮಿತವಾಗಿಲ್ಲ ರಾಜ್ಯದ ಇತರ ದೇವಾಲಯಗಳಲ್ಲೂ ಕೊಳ್ಳೆ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ರಾಜ್ಯದ ದೇವಸ್ಥಾನಗಳಲ್ಲಿ ನಡೆದ ಲೂಟ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ದೇವಾಲಯಗಳ ಆಡಳಿತವನ್ನು ವಿಶ್ವಾಸಿಗಳ ಕೈಗಳಿಗೆ ನೀಡಬೇಕು. ಸರಕಾರದ ಅರಿವಿನೊಂದಿಗೆ ನಡೆದಿರುವ ಲೂಟಿಯ ಹಿನ್ನೆಲೆಯಲ್ಲಿ ಎಡಗಂಗ ಸರಕಾರ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ ಎಲ್ ಆಶ್ವಿನಿ ಅಧ್ಯಕ್ಷತೆ ವಹಿಸಿದರು. ಪಿ.ಆರ್ ಸುನಿಲ್ ಸ್ವಾಗತಿಸಿದರು ಆರಂಭದಲ್ಲಿ ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮಾರ್ಚ್ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಪೊಲೀಸರು ಬಾಂಕೇಡ್ ಸ್ಥಾಪಿಸಿ ಮಾರ್ಚ್ನ್ನು ತಡೆದರು. ಬಿಜೆಪಿ ಕಾರ್ಯಕರ್ತರು ಬಾರಿಕೇಡ್ ಮೇಲೇರಿ ಬಾರಿಕೇಡ ಆಚೆಗೆ ತೆಗಳಲು ಪ್ರಯತ್ನಿಸಿದಾಗ ಪೊಲೀಸರು ಜಲಫಿರಂಗಿ ಪ್ರಯೋಗ ಮಾಡಿದರು .