ಬೇಕೂರು:ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷಾಚರಣೆಯ ಪ್ರಯುಕ್ತ ಅಯೋಧ್ಯಶಾಖೆ ಬೇಕೂರಿನ ಸ್ವಯಂ ಸೇವಕರು ಭೇಟಿನೀಡಿ ಬೆಳಗ್ಗಿನ ಉಪಾಹಾರವನ್ನು ಆಶ್ರಿತರಿಗೆ ವಿತರಿಸಿದರು.ಭಾರತದ ಇತಿಹಾಸದಲ್ಲಿ 100ನೇ ವರ್ಷ ಆದ ಸಂಘದ ಧ್ಯೇಯದಂತೆ ಸೇವಾ ಮನೋಭಾವದ ಸದಾಶಯದ ಸುಂದರ ಕ್ಷಣವನ್ನು ಕಣ್ತುಂಬಿಸಿ ಕೊಳ್ಳುವ ಸಮಯ ನಮ್ಮಮುಂದಿನ ಪೀಳಿಗೆಗೆ ಮನದಟ್ಟು ಮಾಡುವ ಸಲುವಾಗಿ ಈ ಭೇಟಿ ನೀಡಲಾಯಿತು.
ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವ ಮಾತು ಕೇವಲ ನುಡಿಯಲ್ಲಿ ಇರದೆ ಕಾರ್ಯರೂಪದಲ್ಲಿ ತರುವ ಸುಂದರ ಉದ್ದೇಶ ಈ ಸಂಘದ ಸ್ವಯಂ ಸೇವಕರು ಮಾಡಿದ್ದು ಅಲ್ಲಿರುವ ಹಿರಿಯ ಮುದಿ ಜೀವಗಳಿಗೆ ಖುಷಿಯ ವಾತಾವರಣ ನಿರ್ಮಾಣ ಮಾಡಿತು. ನಾಗೇಶ್ ಕನ್ನಟಿಪಾರೆ, ಕೇಶವ ಕುಲಾಲ್ ಬೇಕೂರು,ಎನ್ ಕೆ ಕುಲಾಲ್ ಬೇಕೂರು,ಸದಾನಂದ ಕೆ ಆರ್, ಮಹೇಶ್ ಕುಲಾಲ್ ಬೇಕೂರು, ನಿತಿನ್ ಬೇಕೂರು, ಜೀವನ್ ಬೇಕೂರು, ಸಂತೋಷ್ ಬೇಕೂರು, ಉಪಸ್ಥಿತರಿದ್ದರು.
ಶ್ರೀ ಡಾ.ಉದಯಕುಮಾರ್ ನೂಜಿ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಸಾಯಿ ಸೇವಾ ಪ್ರತಿಷ್ಠಾನ ದೈಗೋಳಿ ಇವರನ್ನು ಭೇಟಿ ಮಾಡಿ ಆಶ್ರಮದ ಉಗಮ ಮತ್ತು ಉದ್ದೇಶಗಳ ಮಾಹಿತಿ ಗಳನ್ನು ಸಂದರ್ಶನದ ಮೂಲಕ ಅರಿತುಕೊಳ್ಳಲಾಯಿತು. ಗೋಶಾಲೆಯ ಸುಂದರ ಚಿತ್ರಣ ಮನದಾಳದಲ್ಲಿ ಮತ್ತೆ ಸೇವೆಯನ್ನು ಮಾಡುವಂತೆ ಸತ್ಯ ಸಾಯಿ ಬಾಬಾರವರ ಆದರ್ಶ ಚಿಂತನೆಗಳಿಗೆ ಸ್ಪೂರ್ತಿಯಾದಂತೆ ಭಾಸವಾಗುವಾಗುತ್ತಿತ್ತು.ಅಲ್ಲಿರುವ ಸದ್ಭಕ್ತ ಸೇವೆಯನ್ನು ಮಾಡುವ ಕಾರ್ಯಕರ್ತರ ನೈಜ ಕಾರ್ಯ ಮುದಿತನದ ಮಾನಸಿಕ ನೆಮ್ಮದಿಯನ್ನು ನೀಡುವ ಮನೋಬಲ ದೇವರ ದಯಾಶೀರ್ವಾದವೇ ಎನ್ನುವಂತೆ ಈ ಸೇವೆಯಿಂದ ಮನದಟ್ಟಾಯಿತು.ಹಿರಿಯರ ಪಾದ ಸೇವೆಯಿಂದ ದೇವರ ದರ್ಶನದ ದಾರಿ ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ಬರಬೇಕಾದರೆ ಇಂತಹ ಸೇವಾಶ್ರಮಕ್ಕೆ ಭೇಟಿ ನೀಡುವುದು ಸೂಕ್ತವಾಗಿದೆ ಎಂದು ಮಾಹಿತಿಗಾರರು ತಿಳಿಸಿಕೊಟ್ಟರು.