ಜಪಾನಿನ ಭಾರತೀಯ ರಾಯಭಾರಿಯಾಗಿ ಕಾಸರಗೋಡಿನ ಮಹಿಳೆ ನೇಮಕ .

ಕಾಸರಗೋಡು: ಕಾಸರಗೋಡಿನ ಮಹಿಳೆ ನಗ್ಮಾ ಮೊಹಮ್ಮದ್ ಮಾಲೀಕ್‌ರನ್ನು ಕೇಂದ್ರ ಸರಕಾರ ಜಪಾನಿನ ಭಾರತೀಯ ರಾಯಭಾರಿಯಾಗಿ ನೇಮಿಸಿದೆ.

ಈಕೆ ಕಾಸರಗೋಡು ಕೋಟೆ ರಸ್ತೆಯ ಮೊಹಮ್ಮದ್ ಹಬೀಬುಲ್ಲಾ-ಸುಲುಭಾನು ದಂಪತಿ ಪುತ್ರಿಯಾಗಿದ್ದಾರೆ. ತಂದೆ ಮೊಹಮ್ಮದ್ ಹಬೀಬುಲ್ಲಾರಿಗೆ ಕೇಂದ್ರ ಸರಕಾರದ ಓವರ್‌ಸ್‌ ಕಮ್ಯೂನಿಕೇಶನ್ ಇಲಾಖೆಯಲ್ಲಿ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಅವರು ವರ್ಷಗಳ ಹಿಂದೆ ತಮ್ಮ ಕುಟುಂಬದ ಸಹಿತ ದಿಲ್ಲಿಯಲ್ಲಿ ವಾಸವಾಗಿದ್ದರು. ದಿಲ್ಲಿಯಲ್ಲೇ ಜನಿಸಿದ ನಗ್ಮಾ ಮೊಹಮ್ಮದ್ ಮಾಲೀಕ್ ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜು ಮತ್ತು ಡೆಲ್ಲಿ ಸ್ಕೂಲ್ ಆಫ್‌ ಇಕಾನೋಮಿಕ್ಸ್‌ನಲ್ಲಿ ಶಿಕ್ಷಣ ಪಡೆದರು. ಇವರು ಇಂಗಿಷ್ ಸಾಹಿತ್ಯದಲ್ಲಿ ಪದವೀಧರೆ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಇವರು ಈ ಹಿಂದೆ ಪೋಲೆಂಡ್‌ನಲ್ಲಿ ಭಾರತೀಯ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಪ್ಯಾರಿಸ್ ಯುನೆಸ್ಕೋದ ಭಾರತೀಯ ಮಿಷನ್‌ನಲ್ಲಿ ಇವರು ಮೊದಲ ನೇಮಕಾತಿ ಪಡೆದಿದ್ದರು.

ಭಾರತದ ಮೊದಲ ಮಹಿಳಾ ಡೆಪ್ಯುಟಿ ಚೀಫ್ ಪ್ರೊಟೋಕಾಲ್ (ಸೆರೆಮೋನಿಯಲ್) ಆಗಿಯೂ ಇವರು ಈ ಹಿಂದೆ ಸೇವೆ ಸಲ್ಲಿಸಿದ್ದರು. ಬಳಿಕ 1991ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆಗೊಂಡರು. ಪ್ಯಾರೀಸ್‌ನಲ್ಲಿ ರಾಜ ತಾಂತ್ರಿಕ ಜೀವನ ಆರಂಭಿಸಿದ ಇವರು ಯುನೆಸ್ಕೋದಲ್ಲೂ ಸೇವೆ ಸಲ್ಲಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!