ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ “ಪೋಷಕರಿಗಾಗಿ ವಿಶೇಷ ಕಾರ್ಯಕ್ರಮ”

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರಾಗಿರುವ ಹೊಸಂಗಡಿಯ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪೋಷಕರ ಪಾತ್ರವನ್ನು ಒತ್ತಿ ಹಿಡಿಯುವ ಉದ್ದೇಶದಿಂದ “ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ” ಎಂಬ ವಿಷಯದಲ್ಲಿ ಶಾಲೆಯು “ಪೋಷಕರಿಗಾಗಿ ವಿಶೇಷ ಕಾರ್ಯಕ್ರಮ”ವನ್ನು ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು.

ಶಾಲೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಂಜತ್ತೂರು ದಾರುಸ್ಸಲಾಂ ಮಸೀದಿಯ ಖತೀಬ್ ಮೊಹಮ್ಮದಲಿ ಸಲಫಿ ಅವರು ಮುಖ್ಯ ಉಪನ್ಯಾಸಕವಾಗಿ ಭಾಗವಹಿಸಿ, ಪೋಷಕರು ಮಕ್ಕಳ ಜೀವನದಲ್ಲಿ ನೈತಿಕತೆ, ಶಿಸ್ತಿನುಡಿಗಳು ಹಾಗೂ ಶೈಕ್ಷಣಿಕ ಬೆಳೆವಣಿಗೆಗೆ ನೀಡಬಹುದಾದ ಮಹತ್ವದ ಕೊಡುಗೆಗಳನ್ನು ಕುರಿತು ವಿವರಿಸಿದರು. ಪೋಷಕರ ಪ್ರೇರಣೆಯಿಂದ ಮಕ್ಕಳಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ” ಎಂಬುದನ್ನು ಸುದೀರ್ಘವಾಗಿ ವಿವರಿಸಿದರು. ಪೋಷಕರು ದಿನಕ್ಕೆ ಕನಿಷ್ಠ 30 ನಿಮಿಷವಾದರೂ ಮಕ್ಕಳೊಂದಿಗೆ ಕಳೆಯುವುದು, ಅವರ ಓದಿನ ಮೇಲೆ ಗಮನಹರಿಸುವುದು, ಮತ್ತು ಸಕಾರಾತ್ಮಕ ಮಾತುಗಳ ಮೂಲಕ ಪ್ರೋತ್ಸಾಹ ನೀಡುವುದು ಅತ್ಯಂತ ಅಗತ್ಯ ಎಂದು ಹೇಳಿದರು.

ಶಾಲಾ ಚೇಯರ್ಮ್ಯಾನ್ ಅಬ್ದುಲ್ ರಹ್ಮಾನ್ ಅರಿಮಲ, ಮೊಹಮ್ಮದ್ ಕಲ್ಲಾಯಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಕೋಆರ್ಡಿನೇಟರ್‌ಗಳಾದ ಫಾತಿಮಾ ರೋಶ್ನಿ ಮತ್ತು ರಶೀದಾ ಹಾಗೂ ಅಧ್ಯಾಪಕರ ತಂಡ ಸಮಾರಂಭದ ಯಶಸ್ವೀ ಸಂಚಾಲನೆಗೆ ನೇತೃತ್ವ ನೀಡಿದರು.ಈ ಕಾರ್ಯಕ್ರಮವು ಪೋಷಕರು ಮತ್ತು ಶಿಕ್ಷಕರ ನಡುವಿನ ಸಮನ್ವಯವನ್ನು ಬಲಪಡಿಸಿ, ವಿದ್ಯಾರ್ಥಿಯ ಹಿತದೃಷ್ಟಿಯಿಂದ ಎಲ್ಲರಿಗೂ ಹೊಸ ಪ್ರೇರಣೆಯಾದಂತಾಯಿತು. ಮಕ್ಕಳ ಸಮಗ್ರ ಅಭಿವೃದ್ದಿಗೆ ಪೋಷಕರ ಸಕ್ರಿಯ ಪಾತ್ರ ಅತ್ಯಂತ ಅವಶ್ಯಕ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಯಶಸ್ವಿಯಾಗಿ ನೀಡಿತು.ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!