ಮಂಜೇಶ್ವರ: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಉಪ್ಪಳ ಶಾಖೆ ವತಿಯಿಂದ ಎಸ್.ಎ.ಟಿ ಶಾಲೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಶೇಕಡ 60 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಿತು.
ಝೋನಲ್ ಬಿಸಿನೆಸ್ ಹೆಡ್ ಎಸ್.ಎಫ್. ಎಲ್ ಶ್ರೀಜಿತ್ ಏನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ.ಎಲ್ ,ಎಸ್.ಎ.ಟಿ ಶಾಲೆಯ ಮುಖ್ಯೋಪದ್ಯಾನಿ ಸುರೇಖಾ ಮಲ್ಯ ಹಾಗು ರೀಜನಲ್ ಬಿಸಿನೆಸ್ ಹೆಡ್ ಮ್ಯಾಥ್ಯು ಅಬ್ರಹಾಂ ಮಾತನಾಡಿ ಶುಭಕೋರಿದರು.
200 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು ಈ ಸಂದರ್ಭದಲ್ಲಿ ಮಕ್ಕಳ ಪೋಷಕರು , ಶ್ರೀರಾಮ್ ಫೈನಾನ್ಸ್ ಉಪ್ಪಳ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.