ಮಂಜೇಶ್ವರ: ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಕೇರಳದ ತುತ್ತ ತುದಿಯಲ್ಲಿರುವ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳೀಯಾಡಳಿತ ಚುನಾವಣಾ ಕದನಕ್ಕೆ ವಿವಿಧ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿರುವ ಮಧ್ಯೆ ಎಸ್‌ಡಿಪಿಐ ಪಕ್ಷ ಮೊದಲ ಹಂತದ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮಂಜೇಶ್ವರದ ಕಚೇರಿಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
ಈ ಸಲ ಮಂಜೇಶ್ವರ ಪಂಚಾಯತಿನಲ್ಲಿ 3 ಹೊಸ ವಾರ್ಡ್‌ಗಳು ಸೇರಿಕೊಂಡಿದ್ದು, ಒಟ್ಟು 24 ವಾರ್ಡ್‌ಗಳಲ್ಲಿ ಪೈಪೋಟಿ ನಡೆಯಲಿದೆ. ಕಳೆದ ಚುನಾವಣೆಯಲ್ಲಿ 2 ವಾರ್ಡ್‌ಗಳನ್ನು ಗೆದ್ದಿದ್ದ ಎಸ್‌ಡಿಪಿಐ, ಈ ಬಾರಿ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ಕಣಕ್ಕಿಳಿಯುವ ತಯಾರಿಯಲ್ಲಿದೆ. ಪಕ್ಷದ ನೇತಾರರ ಪ್ರಕಾರ, ಕನಿಷ್ಠ 8 ವಾರ್ಡ್‌ಗಳಲ್ಲಿ ವಿಜಯ ಸಾಧ್ಯತೆ ಸ್ಪಷ್ಟವಾಗಿರುವ ಬಗ್ಗೆ ಎಸ್ ಡಿ ಪಿ ಐ ಕಾಸರಗೋಡು ಜಿಲ್ಲಾ ಕೌನ್ಸಿಲ್ ಸದಸ್ಯ ಅಶ್ರಫ್ ಬಡಾಜೆ ಎಸ್ ಡಿ ಪಿ ಐ ಮಂಜೇಶ್ವರದ ಕಚೇರಿಯಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. (byt 1st) ಕಳೆದ ಐದು ವರ್ಷಗಳಲ್ಲಿ ಎಸ್‌ಡಿಪಿಐ ಸದಸ್ಯರು ಸ್ಥಳೀಯ ಅಭಿವೃದ್ಧಿ ಕಾರ್ಯಗಳಲ್ಲಿ ತೋರಿದ ಚುರುಕು ಮತ್ತು ಜನಪರ ಸೇವೆ ಈ ಬಾರಿ ಪಕ್ಷಕ್ಕೆ ಶಕ್ತಿ ತುಂಬಲಿದೆಯೆಂಬ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದರು.ಮಂಜೇಶ್ವರ ಗ್ರಾಮ ಪಂಚಾಯತಿನ 7 ನೇ ವಾರ್ಡಿನಲ್ಲಿ ಅಬೂಬಕ್ಕರ್ ಸಿದ್ದೀಖ್, 9 ನೇ ವಾರ್ಡಿನಲ್ಲಿ ಶೆರೀಫ್ ಪಾವೂರು, 15 ನೇ ವಾರ್ಡಿನಲ್ಲಿ ಯಾಕೂಬ್ ಹಾಗೂ 21 ನೇ ವಾರ್ಡಿನಲ್ಲಿ ಹಾರಿಸ್ ಎಂಬಿವರು ಸ್ಪರ್ಧಾ ಕಣಕ್ಕೆ ಇಳಿಯಲಿದ್ದಾರೆಂದು ಅವರು ತಿಳಿಸಿದ್ದಾರೆ.
ಈ ಸಂದರ್ಭ ಪಕ್ಷದ ಮಂಜೇಶ್ವರದ ಉಸ್ತುವಾರಿ ಅಧ್ಯಕ್ಷ ಅಬ್ದುಲ್ ಸಲಾಂ ರವರು ಮಾತನಾಡಿ (Byt 2) ಕಳೆದ 5 ವರ್ಷದ ಕಾಲಾವಧಿಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯಿತಿನ ಆರನೇ ವಾರ್ಡಿಗೆ ಎಸ್ ಡಿ ಪಿ ಐ ಯಿಂದ ಆಯ್ಕೆಯಾದ ಕುಲ್ಸುಮ್ಮ ತನ್ನ ವಾರ್ಡಿನ ಅಭಿವೃದ್ಧಿಗಾಗಿ ಒಂದು ಕೋಟಿ ಹತ್ತು ಲಕ್ಷ ರೂ ಬಿಡುಗಡೆ ಮಾಡಿಸಿ ಆರು ಕಾಂಕ್ರೀಟ್ ರಸ್ತೆ, ಡ್ರೈನೇಜ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದಾಗಿ ಅವರು ಹೇಳಿದರು.ಅದೇ ರೀತಿ ಎಸ್ ಡಿ ಪಿ ಐ ಪಕ್ಷದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಅಧ್ಯಕ್ಷ ಇಕ್ಬಾಲ್ ಪೊಸೋಟು ರವರು ಮಾತನಾಡಿ ( Byte 3) ಕಳೆದ 5 ವರ್ಷದ ಕಾಲಾವಧಿಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯಿತಿನ 8ನೇ ವಾರ್ಡಿನಿಂದ ಆಯ್ಕೆಯಾದ ಅಬೂಬಕ್ಕರ್ ಸಿದ್ದೀಖ್ ರೈಸ್ ಕಳೆದ 5 ವರ್ಷದ ಕಾಲಾವಧಿಯಲ್ಲಿ ಒಂದು ಕೋಟಿ 80 ಲಕ್ಷ ರೂ. ಬಿಡುಗಡೆ ಮಾಡಿಸಿ ಕೆ ಜೆ ಎಂ ನಿಂದ ಕಕ್ಕುಂಜೆ ತನಕ ಡ್ರೈನೇಜ್ ಹಾಗೂ ಕಾಂಕ್ರೀಟ್ ರಸ್ತೆ, ಎಸ್ಟಿ ಕಾಲನಿಗೆ ಕಾಂಕ್ರೀಟ್ ರಸ್ತೆ, ಮನೆ ರಿಪೇರಿ, ದಾರಿ ದೀಪ, ಎಸ್ ಇ ವಿದ್ಯಾರ್ಥಿಗಳಿಗೆ ಕಲಿಕಾ ಸೌಕರ್ಯ, ಮನೆಗಳಿಗೆ ವಾಟರ್ ಟ್ಯಾಂಕ್ ವಿತರಣೆ ಸೇರಿದಂತೆ ಹಲವು ಜನ ಪರ ಕಾರ್ಯಗಳನ್ನು ಮಾಡಿರುವುದಾಗಿ ಅವರು ತಿಳಿಸಿದರು.
ಮುಸ್ಲಿಂ ಲೀಗ್ ಹಾಗೂ ಬಿಜೆಪಿಯ ಅಧಿಕಾರದಿಂದ ಜನತೆ ಬೇಸೆತ್ತಿರುವ ಹಿನ್ನೆಲೆಯಲ್ಲಿ ಈ ಸಲದ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಗಳಿರುವುದಾಗಿ ನೇತಾರರರು ಮಾಹಿತಿ ನೀಡಿದ್ದಾರೆ. ಸ್ಥಳೀಯ ರಾಜಕೀಯ ವೀಕ್ಷಕರ ಪ್ರಕಾರ, ಮಂಜೇಶ್ವರ ಪಂಚಾಯತ್ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಉಂಟಾಗುವ ಸೂಚನೆಗಳು ಸ್ಪಷ್ಟವಾಗುತ್ತಿವೆ.
ಪತ್ರಿಕಾ ಗೋಷ್ಟಿಯಲ್ಲಿ ಮಂಡಲ ಕಾರ್ಯದರ್ಶಿ ಶಬೀರ್, ಮಂಜೇಶ್ವರ ಪಂಚಾಯತು ಚುನಾವಣಾ ಕನ್ವೀನರ್ ಶಂಶುದ್ಧೀನ್, ಹಾರಿಸ್ ಸುಬೈರ್ ಹಾಗೂ ರಿಯಾಸ್ ಕುನ್ನಿಲ್ ಉಪಸ್ಥಿತರಿದ್ದರು.