ಇತಿಹಾಸ ಪಸಿದ್ದ ಮಂಜೇಶ್ವರ ವಾಮಂಜೂರು ಶ್ರೀ ಶಾಸ್ತವೇಶ್ವರ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಿದ್ಧತೆ ನಡೆಯುತ್ತಿದ್ದು ,ಸರಿ ಸುಮಾರು 17 ವರ್ಷಗಳ ಹಿಂದೆ ಕ್ಷೇತ್ರ ಜೀರ್ಣೋದ್ದಾರ ನಡೆದು ಬ್ರಹ್ಮ ಕಲಶ ನಡೆದಿತ್ತು .
ಇದೀಗ ಕ್ಷೇತ್ರ ಎದುರಿನಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಗೊಂಡ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಬೇಟಿಕೊಡುವವರಿಗೆ ಅವ್ಯವಸ್ಥೆ ಉಂಟಾಗಿದ್ದು ಮುಂದೆ ರಾಷ್ಟ್ರೀಯ ಹೆದ್ದಾರಿಯ ಸಮಾನ ಎತ್ತರಕ್ಕೆ ಏರಿಸಿ ಕ್ಷೇತ್ರವನ್ನು ಪುನರ್ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿದ್ದು ಈ ಬಗ್ಗೆ ಜೀರ್ಣೋದ್ದಾರ ಸಮಿತಿಯನ್ನು ರಚಿಸುವ ಸಲುವಾಗಿ ಊರ ಪರವೂರ ಭಕ್ತಾದಿಗಳನ್ನು ಕರೆದು ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಯಿತು.
ಈ ವಿಶೇಷ ಸಭೆಗೆ ಉದ್ಯಮಿ ರಘುನಾಥ್ ಸೋಮಯಾಜಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿವೃತ್ತ ಮುಕ್ಯೋಪಾದ್ಯಾಯರಾದ ಶ್ರೀಧರ ರಾವ್, ಸೇಸಪ್ಪ ಸಾಲ್ಯಾನ್ , ಪದ್ಮನಾಭ ಕಡಪ್ಪರ ,ಮೋಹನ್ ಶೆಟ್ಟಿ ,ಡಾ.ಅಶೋಕ್ ಕುಮಾರ್ ಹೊಳ್ಳ , ಜಯಪ್ರಕಾಶ ನಾರಾಯಣ್ ತೊಟ್ಟತೋಡಿ ,ನಾರಾಯಣ ಹೆಗ್ಡೆ , ಮುಂತಾದವರು ಉಪಸ್ಥಿತಿ ಇದ್ದರು