ಮೀಯಪದವು : ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ 41ನೇ ಪುಣ್ಯತಿಥಿ ಕಾರ್ಯಕ್ರಮ ಮೀಯಪದವಿನಲ್ಲಿ ಜರುಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಪುಷ್ಪಾರ್ಚನೆಗೈದರು.ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಪಿ. ಸೋಮಪ್ಪ ಮುಖ್ಯ ಪ್ರಭಾಷಣಗೈದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮುಖಂಡರುಗಳಾದ ಮೊಹಮ್ಮದ್ ಜೆ, ಜೋಕಿಂ, ಮೊಂತೇರೋ, ಹಮೀದ್ ಮೀಯಪದವು, ಫಿಲೋಮಿನಾ ಮೋಂತೇರೋ, ಪಳ್ಳಿಕುಂಞ ತಲೇಕಳ, ಫ್ರಾನ್ಸಿಸ್ ಡಿ’ಸೋಜಾ, ಮೊಹಮ್ಮದ್ ಶಾಫಿ ತಲೇಕೆಳ, ಡೆನ್ಸಿಲ್ ಡಿ’ಸೋಜಾ, ಶ್ವೇತಾ ಡಿ’ಸೋಜ, ಸೀತಾರಾಮ ಬೇರಿಕೆ, ಬೌತಿಸ್ ಡಿ’ಸೋಜ, ಹಂಝ ಈರೋಡಿ, ಹಮೀದ್ ಕಣಿಯೂರು, ಗಂಗಾಧರ ಕೆ ಪಡಿಪಿನಕೆರೆ, ಸುಧಾಕರ ಉಜಿರೆ ಮುಂತಾದವರು ಭಾಗವಹಿಸಿದ್ದರು.
ಇಂದಿರಾ ಗಾಂಧಿ ಅವರು ಉಕ್ಕಿನ ಮಹಿಳೆ, ದೇಶದ ಸಾಮಾಜಿಕ ಸಾಮರಸ್ಯ ಉಳಿವಿಗಾಗಿ ಮತೀಯ ರಾಜಕೀಯ ಶಕ್ತಿಗಳ ವಿರುದ್ಧ ಹೋರಾಡಿದವರು. ಸಾಮಾಜಿಕ ನ್ಯಾಯದಿಂದ ವಂಚಿತರಾದ ಬಡವರು, ಶೋಷಿತರು, ದಮನಿತರಿಗೆ ಧ್ವನಿಯಾದವರು ಎಂದು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಮತಿ ಕಮಲಾಕ್ಷಿ ಅವರು ಹೇಳಿದ್ದಾರೆ..ಅವರು ಮೀಯಪದವಿನಲ್ಲಿ ಜರುಗಿದ ಇಂದಿರಾಗಾಂಧಿ ಪುಣ್ಯತಿಥಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ಸಿನ ಹಿರಿಯ ಮುಖಂಡರೂ, ಮಾಜೀ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ. ಸೋಮಪ್ಪ ಮುಖ್ಯ ಪ್ರಭಾಷಣಗೈದು ಮಾತನಾಡಿ, ದೇಶದ ಏಕತೆಯ ದೃಷ್ಟಿಯಿಂದ ಅವರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲ ಕ್ರಾಂತಿ, ಜೀತ ಪದ್ಧತಿ ನಿರ್ಮೂಲನೆ, ರಾಜಧನ ರದ್ದತಿ, ಬಾಂಗ್ಲಾ ವಿಮೋಚನೆ, ಬ್ಯಾಂಕುಗಳ ರಾಷ್ಟ್ರೀಕರಣ, ಕೃಷಿ ಯೋಜನೆಗಳಿಗೆ ಆದ್ಯತೆ ನೀಡಿ ಜನ ಸಾಮಾನ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಬಡತನ, ಅಸಮಾನತೆ ನಿರ್ಮೂಲನೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದೇಶದ ಬೆಳವಣಿಗೆಗೆ ಇಂದಿರಾ ಗಾಂಧಿ ಸಹಕಾರಿಯಾದರು ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮುಖಂಡರುಗಳಾ ಮೊಹಮ್ಮದ್ ಜೆ, ಜೋಕಿಂ, ಮೊಂತೇರೋ, ಹಮೀದ್ ಮೀಯಪದವು, ಫಿಲೋಮಿನಾ ಮೋಂತೇರೋ, ಪಳ್ಳಿಕುಂಞ ತಲೇಕಳ, ಫ್ರಾನ್ಸಿಸ್ ಡಿ’ಸೋಜಾ, ಮೊಹಮ್ಮದ್ ಶಾಫಿ ತಲೇಕೆಳ, ಡೆನ್ಸಿಲ್ ಡಿ’ಸೋಜಾ, ಶ್ವೇತಾ ಡಿ’ಸೋಜ, ಸೀತಾರಾಮ ಬೇರಿಕೆ, ಬೌತಿಸ್ ಡಿ’ಸೋಜ, ಹಂಝ ಈರೋಡಿ, ಹಮೀದ್ ಕಣಿಯೂರು, ಗಂಗಾಧರ ಕೆ ಪಡಿಪಿನಕೆರೆ, ಸುಧಾಕರ ಉಜಿರೆ ಮುಂತಾದವರು ಭಾಗವಹಿಸಿದ್ದರು.