ಪೊಲೀಸ್ ಮುಂದೆ ಹಾಡು ಹಾಡಿದ ಬಾಲಕ .ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದ ಒಂದು ನಿತ್ಯದ ಘಟನೆಯೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲಾಗಿದೆ. ಪೋಷಕರೊಂದಿಗೆ ಠಾಣೆಗೆ ಬಂದಿದ್ದ ಚಿಕ್ಕ ಬಾಲಕನೊಬ್ಬ ಪೊಲೀಸರ ಮುಂದೆ ಹಾಡಿದ ಹಾಡು ಕ್ಷಣಾರ್ಧದಲ್ಲಿ ವೈರಲ್ ಆಗಿ, ನೆಟ್ಟಿಗರ ಮನ ಗೆದ್ದಿದೆ.

ಉಪ್ಪಳದ ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಪ್ಪೈತೋಟದ ನಿವಾಸಿ ಅಶ್ರಫ್ ಅವರ ಪುತ್ರ ಹಾಗೂ ಬಂದ್ಯೋಡ್ ಕುನ್ನಿಲ್ ಶಾಲೆಯ ಯು ಕೆ ಜಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ರಾಹಿಂ ಮೊಹಮ್ಮದ್ ಸಹಲ್ ಎಂಬ ಈ ಬಾಲಕ ಸಾಮಾಜಿಕ ಜಾಲ ತಾಣದಲ್ಲಿ ಹೊಸ ಲಿಟಲ್ ಹೀರೋ ಆಗಿದ್ದಾನೆ.

ಪೋಷಕರು ದೂರೊಂದು ದಾಖಲಿಸುವ ಉದ್ದೇಶದಿಂದ ಠಾಣೆಗೆ ಆಗಮಿಸಿದ್ದ ವೇಳೆ ಸಹಲ್ ಕೂಡಾ ಅವರೊಂದಿಗೆ ಬಂದಿದ್ದ. ಪೊಲೀಸರೊಂದಿಗೆ ಆತ ಸಲಿಗೆಯಿಂದ ಮಾತನಾಡಿದಾಗ ಪೊಲೀಸ್ ಅಧಿಕಾರಿಯೊಬ್ಬ ಬಾಲಕನಲ್ಲಿ ಒಂದು ಹಾಡಿಗೆ ಬೇಡಿಕೆ ಇಟ್ಟಿದ್ದಾನೆ. ಈ ಸಂದರ್ಭ ಬಾಲಕ ಯಾವುದೇ ಸಂಕೋಚವಿಲ್ಲದೆ ಹಾಡೊಂದನ್ನು ಹಾಡಿದ. ಆ ಕ್ಷಣವನ್ನು ಅಲ್ಲಿದ್ದ ಪೊಲೀಸರು ಚಿತ್ರೀಕರಿಸಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲವನ್ನು ಸೃಷ್ಟಿಸಿದೆ.

ಚಿಕ್ಕ ಬಾಲಕನಾದರೂ ಸಹಲ್‌ನ ಧೈರ್ಯ, ಆತ್ಮವಿಶ್ವಾಸ ಹಾಗೂ ಚುರುಕುತನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು “ಚಿಕ್ಕ ವಯಸ್ಸಿನಲ್ಲೇ ಅದ್ಭುತ ಪ್ರತಿಭೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಮಂಜೇಶ್ವರ ಪೊಲೀಸರು ಕೂಡಾ ಈ ಕಿರಿಯ ಬಾಲಕನ ನಿರ್ಭೀತ ವ್ಯಕ್ತಿತ್ವವನ್ನು ಶ್ಲಾಘಿಸಿದ್ದಾರೆ. ಪೊಲೀಸ್ ಠಾಣೆ ಎಂಬ ಸ್ಥಳದಲ್ಲಿಯೇ ನಿರಾಳವಾಗಿ ಹಾಡು ಹಾಡಿದ ಸಹಲ್ ಇದೀಗ ಸ್ಥಳೀಯ ತಾರೆ ಆಗಿದ್ದಾನೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!