ವೀರಾಂಜನೇಯ ಫ್ರೆಂಡ್ಸ್ ಕ್ಲಬ್ ಬಂಬ್ರಾಣ ಕಬಡ್ಡಿ ತಂಡದ ನೂತನ ಸಮವಸ್ತ್ರ ಬಿಡುಗಡೆ ಸಮಾರಂಭ

ಕುಂಬಳೆ : ಕಾಸರಗೋಡು ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕ್ರೀಡಾ, ಸಾಂಕೃತಿಕ, ಜೀವಕಾರುಣ್ಯ, ವಿದ್ಯಾಭ್ಯಾಸ ರಂಗದಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿರುವ ಸಂಸ್ಥೆ ವೀರಾಂಜನೇಯ ಫ್ರೆಂಡ್ಸ್ ಕ್ಲಬ್ ಶಿವಾಜಿ ನಗರ ಬಂಬ್ರಾಣ ಇದರ ಕಬಡ್ಡಿ ತಂಡದ ನೂತನ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮ ಇಂದು ಬೆಳಗ್ಗೆ ಭಜನಾ ಮಂದಿರ ವಠಾರದಲ್ಲಿ ನಡೆಯಿತು.

ಇತ್ತೀಚಿಗೆ ಅಗಲಿದ ತಮ್ಮ ಸಂಸ್ಥೆಯ ಸದಸ್ಯ ಅಜಿತ್ ಬೆಜ್ಜ ಇವರ ಸವಿ ನೆನಪಿಗಾಗಿ ಈ ಸಮವಸ್ತ್ರವನ್ನು ತಯಾರಿಸಲಾಗಿದೆ. ದಿವಂಗತ ಅಜಿತ್ ಬೆಜ್ಜ ಅವರ ಸಹೋದರಿ ಶ್ರೀಮತಿ ವಿದ್ಯಾಶ್ರೀ ಅವರು ಕ್ಲಬ್ ಸದಸ್ಯರಿಗೆ ಹಸ್ತಾಂತರಿಸುವ ಮೂಲಕ ಸಮವಸ್ತ್ರ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷರಾದ ರವಿ ಆರ್. ಪಿ, ಮಂದಿರದ ಕಾರ್ಯದರ್ಶಿ ನವೀನ್ ಬತ್ತೆರಿ, ಮಂದಿರದ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಬತ್ತೆರಿ, ವೀರಾಂಜನೇಯ ಕ್ಲಬ್ಬಿನ ಅಧ್ಯರಾದ ಸಚಿನ್ ಬತ್ತೆರಿ, ಟೀಮ್ ಮ್ಯಾನೇಜರ್ ರಕ್ಷಿತ್ಎನ್ ಹಾಗು ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!