ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ಗ್ರಾಮದಲ್ಲಿರುವ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಸಂಪನ್ನ ಗೊಂಡಿತ್ತು. ಕೊನೆಯ ದಿನವಾದ ನಿನ್ನೆ ಪುಮಾರುತನ್, ರಕ್ತ ಚಾಮುಂಡಿ, ಭಗವತಿ, ವಿಷ್ಣು ಮೂರ್ತಿ, ಧೂಮಾವತಿ, ಗುಳಿಗ ಎಂಬೀ ದೈವಗಳು ಭಕ್ತರಿಗೆ ದರ್ಶನವನ್ನು ನೀಡಿತ್ತು. ಐತಿಹಾಸಿಕ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಸಾವಿರಕ್ಕೂ ಅಧಿಕ ಸಂಖ್ಯೆಯ ರಾಜ್ಯ ಅಂತರರಾಜ್ಯದ ಭಕ್ತರು ಶ್ರೀ ಸನ್ನಿಧಿಗೆ ಆಗಮಿಸಿದ್ದರು. ಭಕ್ತರಿಗೆ ದರ್ಶನವನ್ನು ನೀಡಿ ತನು ಮನವನ್ನು ಭಕ್ತಿಯ ಸಾಕ್ಷಾತ್ಕಾರದತ್ತ ಕೊಂಡು ಹೋದ ದಿವ್ಯ ತೇಜಸ್ಸಿನ ರೂಪ ಹೀಗಿದೆ.
ವಿಷ್ಣು ಮೂರ್ತಿ
ಭಗವತಿ
ಗುಳಿಗ
ರಕ್ತ ಚಾಮುಂಡಿ
ಧೂಮಾವತಿ
ಪುಮಾರುತನ್