ಶ್ರೀ ಅಯ್ಯಪ್ಪ ಸ್ವಾಮೀ ಕುಣಿತ ಭಜನಾ ತಂಡ ಬಾಯಿಕಟ್ಟೆ. ನೂತನ ಕುಣಿತ ಭಜನೆಯ ಭಕ್ತಿ ವಿಡಿಯೋ ಆಲ್ಬಮ್ ಸ್ವರ್ಣ ಸನ್ನಿಧಿ -(ಈ ಪುಣ್ಯ ಮಲೆ) ಟೈಟಲ್ ಹಾಗೂ ಟ್ರೈಲರ್ ಬಿಡುಗಡೆ

ಶ್ರೀ ಅಯ್ಯಪ್ಪ ಸ್ವಾಮೀ ಕುಣಿತ ಭಜನಾ ತಂಡ ಬಾಯಿಕಟ್ಟೆ ಪೈವಳಿಕೆ ಇವರ ನೂತನ ಕುಣಿತ ಭಜನೆಯ ಭಕ್ತಿ ವಿಡಿಯೋ ಆಲ್ಬಮ್ ಶೆಟ್ಟಿ ಅಜಯ್ ರಾಜ್ ಅವರ ಸಾಹಿತ್ಯ ಹಾಗೂ ರಾಗಸಂಯೋಜನೆಯಲ್ಲಿ ಸಂದೀಪ್ ಆರ್ ಬಲ್ಲಾಳ್ ಸಂಗೀತ ನೀಡಿರುವ ವಾಣಿ ಮಧ್ವ ,ಪ್ರಾಪ್ತಿ ಆರ್ ಶೆಟ್ಟಿ ಹಾಡಿರುವ ,ರಕ್ಷಿತ್ ಎಸ್.ಎನ್.ಸಿ ಛಾಯಾಗ್ರಹಣ ಮಾಡಿರುವ ಉದಯ ಬೇಕೂರು ,ಮನೋಹರ್ ವಾದ್ಯಪಡ್ಪು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸ್ವರ್ಣ ಸನ್ನಿಧಿ -(ಈ ಪುಣ್ಯ ಮಲೆ) ಟೈಟಲ್ ಹಾಗೂ ಟ್ರೈಲರ್ ಬಾಯಿಕಟ್ಟೆ ಅಯ್ಯಪ್ಪ ಮಂದಿರದ 18 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಂಡಿತು .

ಬಿಡುಗಡೆಯನ್ನು ಶಬರಿಮಲೆಯ ಮೆಲ್ಶಾಂತಿ ಪಿ. ಎನ್. ಮಹೇಶನ್ ನಂಬೋದಿರಿ 2023-2024 ಹಾಗೂ ಆನಂದ ಗುರುಸ್ವಾಮಿ ಅಯ್ಯಪ್ಪ ಮಂದಿರ ಹುಬ್ಬಳ್ಳಿ ಹಾಗೂ ಕೇರಳ ಕರ್ನಾಟಕ, ಮಹಾರಾಷ್ಟ್ರ ದ ಹಿರಿಯ 18 ಗುರು ಸ್ವಾಮಿಗಳ ದಿವ್ಯಹಸ್ತ ದಿಂದ ನೆರವೇರಿಸಿದರು.ಅತೀ ಶೀಘ್ರದಲ್ಲಿ ಸ್ವರ್ಣ ಸನ್ನಿಧಿ ಹಾಗೂ ತತ್ವ ಮಸಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಗೊಳ್ಳಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!