ಕುಂಜತ್ತೂರಿನಲ್ಲಿ ಆಂಜನೇಯ ಅಲ್ಯೂಮಿನಿಯಂ ಹಾಗೂ ಹಾರ್ಡ್ವೇರ್ ಶುಭಾರಂಭ

ಕುಂಜತ್ತೂರಿನಲ್ಲಿ ಇಂದು ಆಂಜನೇಯ ಕಣ್ವ ತೀರ್ಥ ಸಂಸ್ಥೆಯ ಸಕ್ರಿಯ ಸದ್ಯಸರಾದ ಗಣೇಶ್ ಹಾಗೂ ಸೂರಜ್ ಅವರ ಮಾಲಕತ್ವದ ಆಂಜನೇಯ ಅಲ್ಯೂಮಿನಿಯಂ ಹಾಗೂ ಹಾರ್ಡ್ವೇರ್ ಶುಭಾರಂಭಗೊಂಡಿತು.

ಮಳಿಗೆಯನ್ನು ಶ್ರೀ ಸುಳಿಜನಾರ್ಧನ ದೇವಸ್ಥಾನ ಕಣ್ವತೀರ್ಥ ಅರ್ಚಕರಾದ ಶ್ರೀ ಮರಿ ಭಟ್ ಅವರು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ರಾಜ ಬೆಳ್ಚಪಾಡ ಮಾಡ, ಶ್ರೀ ತಿಮೀರಿ ಬೆಳ್ಚಪಾಡ, ಶ್ರೀ ಭಗವತಿ ಕ್ಷೇತ್ರ ಉದ್ಯಾವರ ಮಾಡದ ಅಚ್ಚಮಾರರು, ಗುರಿಕಾರರು ಆಚಾರ್ಯಪಟ್ಟವರು ದಿವ್ಯ ಉಪಸ್ಥಿತರಿದ್ದರು. ರಾಜಕೀಯ ನೇತಾರಾರಾದ ಶ್ರೀ ಹರಿಶ್ಚಂದ್ರ ಮಂಜೇಶ್ವರ, ಶ್ರೀ ಜಯಾನಂದ ಹೊಸಂಗಡಿ,ಶ್ರೀ ದಯಾಕರ ಮಾಡ, ಶ್ರೀ ಹರ್ಷಾದ್ ವರ್ಕಾಡಿ, ಅಶ್ವಿನಿ ಎಂ. ಎಲ್, ಶ್ರೀ ಪ್ರಶಾಂತ್ ಕಾಜವ,ಶ್ರೀ ರಾಮ್ ಮನೋಹರ್ ರೈ ತಲಪಾಡಿ, ಜಿಲ್ಲಾ ಪಂಚಾಯತ್ ಅಭ್ಯರ್ಥಿ ಶ್ರೀ ಅಶ್ವತ್ ಸಿ. ಲಾಲ್ಬಾಗ್ ಹಾಗೂ ಮಂಜೇಶ್ವರದ ಯುವ ನೇತಾರರು, ಧಾರ್ಮಿಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದು ಶುಭ ಹಾರೈಸಿದರು. ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ಕಾರ್ಯಕ್ರಮವನ್ನು ನಿರೂಪಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!