ಮೀಂಜ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಸ್ಥಾಪಕ ಸದಸ್ಯರು ಮತ್ತು ಅರ್ಚಕರೂ ಆಗಿದ್ದ ಶಿವರಾಮ ಆಚಾರ್ಯ ಕೋಳ್ಯೂರುಪದವು ವಿಧಿವಶ

ಮೀಂಜ:- ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಸ್ಥಾಪಕ ಸದಸ್ಯರು ಮತ್ತು ಅರ್ಚಕರೂ ಆಗಿದ್ದ ಶಿವರಾಮ ಆಚಾರ್ಯ ಕೋಳ್ಯೂರುಪದವು (63 ) ಅಲ್ಪ ಕಾಲದ ಅಸೌಖ್ಯದಿಂದ ಡಿ.13 ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಮೀನಾಕ್ಷಿ ,ತಮ್ಮ ಶಂಕರ ಆಚಾರ್ಯ, ತಂಗಿ ದೇವಕಿ, ಮಗ ಸಂತೋಷ್,ಸೊಸೆ ಶ್ವೇತಾ, ಅಳಿಯ ಪದ್ಮನಾಭ,ಮೊಮ್ಮಗ ಗಾಯನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಕಿರಿಯ ಮಗ ಅಶೋಕ ಮತ್ತು ಮಗಳಾದ ನವ್ಯ ಇವರು ಅಕಾಲಿಕ ಮರಣಕ್ಕೀಡಾದ ಕಾರಣ ಈ ಮೊದಲೇ ಕಳೆದುಕೊಂಡಿದ್ದಾರೆ. ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಕೋಳ್ಯೂರುಪದವು,ಶ್ರೀ ಅರಸು ಕೃಪಾ ಗ್ಯಾರೇಜ್ ತಲಪಾಡಿ, ಭಾ.ಜ.ಪ.ಕೋಳ್ಯೂರು,ಸಂಘ ಪರಿವಾರ ಕೋಳ್ಯೂರು,ಸ್ಪಂದನ ಟ್ರಸ್ಟ್ ಕೋಳ್ಯೂರು,ಓಂಕಾರ್ ಫ್ರೆಂಡ್ಸ್ ಕೋಳ್ಯೂರು ತೀವ್ರ ಸಂತಾಪ ಸೂಚಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!