ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದಲ್ಲಿ ವಾರ್ಷಿಕ ಶ್ರೀ ಮಲರಾಯ ಮತ್ತು ಗುಳಿಗ ನೇಮೋತ್ಸವ

ಪಾವೂರು:: ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದಲ್ಲಿ ವಾರ್ಷಿಕ ಶ್ರೀ ಮಲರಾಯ ಮತ್ತು ಗುಳಿಗ ನೇಮೋತ್ಸವವು ತಾರೀಕು 26 /12 /25 ರಂದು ಶುಕ್ರವಾರ ನಡೆಯಲಿದೆ .ಅಂದು ಬೆಳಿಗ್ಗೆ ಗಣ ಹೋಮ, ಶುದ್ಧ ಕಲಶ, ಮಹಾಪೂಜೆ ,ಅನ್ನ ಸಂತರ್ಪಣೆ ನಡೆದು ಮಧ್ಯಾಹ್ನ 2 ಗಂಟೆಗೆ ಶ್ರೀ ಮಲರಾಯ ನೇಮೋತ್ಸವವು ನಡೆಯಲಿದೆ. ನಂತರ ಸಂಜೆ ಐದು ಗಂಟೆಗೆ ಗುಳಿಗ ನೇಮೋತ್ಸವ ಆದನಂತರ ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಸ್ಥಳೀಯ ಮಕ್ಕಳಿಂದ ನೃತ್ಯಾವಳಿ, ನಂತರ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ವೇದಿಕೆಯಲ್ಲಿ ಸನ್ಮಾನ ಕಾರ್ಯಕ್ರಮವು ಶ್ರೀ ಕೃಷ್ಣ ಶಿವ ಕೃಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾವೂರು ಪೊಯೈ ಚಾಮುಂಡೇಶ್ವರಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಮನೋಹರ ಶೆಟ್ಟಿ ಕೆದುಂಬಾಡಿ, ಅಲ್ಲದೆ ಶ್ರೀ ಚಂದ್ರಹಾಸ ಪೂಜಾರಿ ಶ್ರೀ ಮಲರಾಯ ಕ್ಷೇತ್ರದ ಪ್ರಧಾನ ಅರ್ಚಕರು, ಶ್ರೀ ಅರಸ ಪೂಜಾರಿ ಕುದುಕೋರಿ ,(ದರ್ಶನ ಪಾತ್ರಿ ಧೂಮಾವತಿ ದೈವಸ್ಥಾನ ಅರಿಬೈಲು,) ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮುಡಿಮಾರು ಇದರ ಅಧ್ಯಕ್ಷರಾದ ಚಂದ್ರಹಾಸ ಕೆದುಂಬಾಡಿ, ಇವರು ಉಪಸ್ಥಿತರಿರುವರು. ಸಭೆಯಲ್ಲಿ ಗಡಿನಾಡ ಕಲಾ ನಿಧಿ ಕೃಷ್ಣ .ಜಿ .ಮಂಜೇಶ್ವರ, ಸು ಪ್ರಂ ಸೋ ಚಲನಚಿತ್ರದ ಭಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್, ಜೂನಿಯರ್ ರಾಷ್ಟ್ರೀಯ ಕಬ್ಬಡಿ ತಂಡದ ಸದಸ್ಯ (ಕರ್ನಾಟಕ )ಸುಮುಖ್ ತಚ್ಚಾನಿ ತಲಪಾಡಿ ,ಚರಿಷ್ಮಾ ರಾಕೇಶ್ ಅಂಚನ್ ಮುಡಿಮಾರ್ (ಜೂನಿಯರ್ ರಾಷ್ಟ್ರೀಯ ಕಬ್ಬಡಿ ತಂಡದ ಸದಸ್ಯೆ ಕೇರಳ) ಇವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ .ನಂತರ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮುಡಿಮಾರು ಇದರ ಪ್ರಯೋಜಕತ್ವದಲ್ಲಿ ಶಾರದ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ “” ಜೈ ಭಜರಂಗಬಲಿ “” ತುಳು ಸಾಮಾಜಿಕ ನೀತಿ ಬೋಧಕ ನಾಟಕ ನಡೆಯಲಿದೆ.

SHARE
Loading spinner

One thought on “ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದಲ್ಲಿ ವಾರ್ಷಿಕ ಶ್ರೀ ಮಲರಾಯ ಮತ್ತು ಗುಳಿಗ ನೇಮೋತ್ಸವ

Leave a Reply

Your email address will not be published. Required fields are marked *

error: Content is protected !!