ಮಂಜೇಶ್ವರ : ಕುಂಬಳೆಯಲ್ಲಿ ಉಸ್ತಾದ್ ಮುಹಮ್ಮದ್ ಶಫೀಕ್ (32) ನಾಪತ್ತೆಯಾಗಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಬಂಬ್ರಾಣದ ಟುಂಬಿಯೋಡು ಹೌಸ್ನ ಅಬ್ದುಲ್ ರಶೀದ್ ಅವರ ಪುತ್ರ ಮುಹಮ್ಮದ್ ಶಫೀಕ್, ಡಿಸೆಂಬರ್ 21ರಂದು ರಾತ್ರಿ 8 ಗಂಟೆಗೆ ಬಂಬ್ರಾಣದ ಮಸೀದಿಗೆ ಹೋಗಲು ಮನೆಯಿಂದ ಹೊರಟಿದ್ದರು. ಆದರೆ ಅವರು ಮನೆಯ ಕಡೆಗೆ ಹಿಂತಿರುಗಿ ಬಾರದ ಬಗ್ಗೆ ಅವರ ಪತ್ನಿ ನಜ್ಜುನ್ನೀಸಾ ದೂರನ್ನು ಕೊಟ್ಟಿದ್ದಾರೆ.
ಪತ್ನಿಯ ದೂರಿನ ಮೇರೆಗೆ, ಕುಂಬಳೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದಕ್ಕೂ ಮುನ್ನ, ಗುರುತಿಸಲಾದ ವ್ಯಕ್ತಿಯ ಸ್ಕೂಟಿಯನ್ನು ಕುಂಬಳೆ ರೈಲು ನಿಲ್ದಾಣದ ಸುತ್ತಮುತ್ತ ಪತ್ತೆ ಹಚ್ಚಿದ್ದು, ಅದು ಪೋಲೀಸರ ವಶದಲ್ಲಿದೆ.
Tried ktslots1 the other day. Pretty standard stuff, you know? Some familiar titles. Might be worth a spin if you’re after something simple. Check them out at ktslots1.