CITU ಮಂಜೇಶ್ವರ ಏರಿಯಾ ಸಮಾವೇಶ

CITU ಮಂಜೇಶ್ವರ ಏರಿಯಾ ಸಮಾವೇಶ ಹೊಸಂಗಡಿ KSTA ಭವನದಲ್ಲಿ ನಡೆಯಿತು .CITU ಕಾಸರಗೋಡು ಜಿಲ್ಲಾ ಟ್ರೆಶರಾರ್ ತಂಬಾನ್ ನಾಯರ್ ಉದ್ಘಾಟಿಸಿದರು. CITU ಮಂಜೇಶ್ವರ ಏರಿಯಾ ಅಧ್ಯಕ್ಷರಾದ ಡಿ ಕಮಲಾಕ್ಷ ಅಧ್ಯಕ್ಷತೆ ವಹಿಸಿದರು .ಜಿಲ್ಲಾ ಕಾರ್ಯದರ್ಶಿ ಶೋಭಾ ಬಿ , ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ, ಏರಿಯಾ ಖಜಾಂಜಿ ಸತೀಶ್ ಎಲಿಯಾನ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಪ್ರಶಾಂತ್ ಕನಿಲ ವರದಿ ಮಂಡಿಸಿ, ಚರ್ಚೆ ಹಾಗೂ ಚರ್ಚೆಗೆ ಉತ್ತರ ನೀಡಿದ ಬಳಿಕ ನೂತನ ಅಧ್ಯಕ್ಷ ರಾಗಿ ಡಿ ಕಮಲಾಕ್ಷ, ಕಾರ್ಯದರ್ಶಿ ಸತೀಶ ಎಲಿಯಾನ, ಖಜಾಂಜಿಯಾಗಿ ಸರೋಜಾ, ಚಂದ್ರ ನಾಯ್ಕ್ , ನವೀನ್ ಕುಮಾರ್ ಟಿ ,ಉಪಾಧ್ಯಕ್ಷರಾಗಿ ಮಾಲತಿ ಉಮೇಶ್ ಅಟ್ಟೆಗೊಳಿ, ಉದಯ ಮುನ್ನೂರು ಜೊತೆ ಕಾರ್ಯದರ್ಶಿಯಾಗಿ ಒಟ್ಟು 25 ಮಂದಿಯ ಏರಿಯಾ ಸಮಿತಿಯನ್ನು ರಚಿಸಿ ಆಯ್ಕೆ ಮಾಡಲಾಯಿತು

SHARE
Loading spinner

Leave a Reply

Your email address will not be published. Required fields are marked *

error: Content is protected !!