ಜಿಲ್ಲಾ ಕಾರ್ಯಾಲಯ “ಪ್ರೇರಣಾ”ದ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 16ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ಮಂಜೇಶ್ವರ ಖಂಡ ಸಮಿತಿ ಜಿಲ್ಲಾ ಕಾರ್ಯಾಲಯ “ಪ್ರೇರಣಾ”ದ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಂಜೇಶ್ವರ ಖಂಡ ಸಮಿತಿಯ ಆಶ್ರಯದಲ್ಲಿ 16ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ದಿನಾಂಕ ಬಾನುವಾರದಂದು ವಿ.ಹಿಂ.ಪ ಜಿಲ್ಲಾ ಕಾರ್ಯಾಲಯ “ಪ್ರೇರಣಾ” ಹೊಸಂಗಡಿಯಲ್ಲಿ ಬ್ರಹ್ಮಶ್ರೀ ಬಡಾಜೆಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಗಳವರ ಪೌರೋಹಿತ್ಯದಲ್ಲಿ ಸಂಪನ್ನಗೊಂಡಿತು.
ಬೆಳಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ , ಮಹಾಮಂಗಳಾರತಿ, ಬಳಿಕ ಧಾರ್ಮಿಕ ಸಭೆಯು ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ವಿ.ಹಿ.ಪ ದ ಅಧ್ಯಕ್ಷರಾದ ಶ್ರೀ ತಾರಾನಾಥ್ ಅವರು ವಹಿಸಿದರು.ಬಳಿಕ ಶ್ರೀ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ,ವಜ್ರದೇಹಿ ಮಠ ಗುರುಪುರ “ನಮ್ಮ ಸಮಾಜ ಸದೃಢವಾಗಬೇಕು,ಹಿಂದುಗಳು ಒಟ್ಟಾಗಬೇಕು, ಹಿರಿಯರು ಮಾಡಿದ ನಮ್ಮ ಧರ್ಮಅನಂತ ಕಾಲ ಉಳಿಯಬೇಕು” ಎಂದು ಆಶೀರ್ವಚನ ನೀಡಿದರು .
ಸಭೆಯಲ್ಲಿ ದಿಕ್ಸುಜಿ ಭಾಷಣ ಮಾಡಿದ ದಕ್ಷಿಣ ಪ್ರಾಂತ್ ಪ್ರಮುಖ್ ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ “ಹಿಂದುಸಮಾಜವನ್ನು ಒಟ್ಟು ಮಾಡುವ ಜ್ಯಾತೀತ ಹಿಂದು ಸಮಾಜವನ್ನು ನಮ್ಮ ಹಿರಿಯರು ಮಾಡಿದ್ದಾರೆ ಆದುದರಿಂದಲೇ ಇದು ಚಲನ ಶೀಲಾ ಸಮಾಜ,ಬಾಂಗ್ಲಾದೇಶದಲ್ಲಿ ಹಿಂದುಗಳ ನರಹತ್ಯೆ ಯಾಗುತ್ತಿದೆ ಇದು ತೀರಾ ಖಂಡನೀಯ,ಮಂಜೇಶ್ವರದ ಹಿಂದು ಯುವಕರು ಎಚೆತ್ತುಕೊಳ್ಳಬೇಕು ಹಿಂದು ಸಮಾಜವನ್ನು ಸದೃಢಗೊಳಿಸಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕೇರಳ ಪ್ರಾಂತ ಬಿ.ಎಂ.ಎಸ್ ಉಪಾಧ್ಯಕ್ಷರು ಅಡ್ವಕೇಟ್ ಶ್ರೀ ಮುರಳೀಧರ್ ಕಾಸರಗೋಡು, ಹಿರಿಯ ಕಾರ್ಯಕರ್ತ ಉಳುವಾನ ಶಂಕರನಾರಾಯಣ ಭಟ್,ಪಡ್ಬಾನಾಭ ಕಡಪ್ಪುರ, ಅಡ್ವಕೇಟ್ ಕೆ.ಜೆ ನವೀನ್ ರಾಜ್ ಹೊಸಂಗಡಿ,ಅಭಿಲಾಷ್ ಬೆಂಗರೆ ಉಪಸ್ಥಿತರಿದ್ದರು . ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ ರಿತಿಕ್ ಮಾಡ ಧನ್ಯವಾದ ಸಮರ್ಪಿಸಿದರು.
ಬಳಿಕ ವಿವಿದ ಭಜನಾ ತಂಡಗಳಿಂದ ಕುಣಿತ ಭಜನೆ ನಡಯಿತು.