ತುರ್ತಿ ಶ್ರೀ ವಿಷ್ಣುಮೂರ್ತಿ ವಯನಾಟುಕುಲವನ್ ಮಹಾ ಮಲರಾಯ ದೈವಸ್ಥಾನದ ತೈಯ್ಯಂಕೆಟ್ ಮಹೋತ್ಸವದ ಭಾಗವಾಗಿ ಭತ್ತದ ಕೃಷಿ ಕೊಯ್ಲು ಉತ್ಸವ

ಉಪ್ಪಳ : ತುರ್ತಿ ಶ್ರೀ ವಿಷ್ಣುಮೂರ್ತಿ ವಯನಾಟುಕುಲವನ್ ಮಹಾ ಮಲರಾಯ ದೈವಸ್ಥಾನದಲ್ಲಿ 2026 ಏಪ್ರಿಲ್ ತಿಂಗಳ 9 ರಿಂದ 12 ರ ತನಕ ನಡೆಯಲಿರುವ ಶ್ರೀ ವಯನಾಟ್ಟು ಕುಲವನ್ ತೈಯ್ಯಂಕೆಟ್ ಮಹೋತ್ಸವದ ಪೂರ್ವಭಾವಿಯಾಗಿ ಕೂವಂ ಅಲಕ್ಕಲ್ ಕಾರ್ಯಕ್ರಮ 2026 ಮಾರ್ಚ್ ತಿಂಗಳ 25 ರಂದು ನಡೆಯಲಿದ್ದು ಅದಕ್ಕೆ ಬೇಕಾಗಿರುವ ಭತ್ತದ ಕೃಷಿಯನ್ನು ಕೆಲವು ತಿಂಗಳ ಹಿಂದೆ ನೆಟ್ಟು ತರವಾಡಿನ ಪಕ್ಕದಲ್ಲಿ ಇರುವ ಗದ್ದೆಯಲ್ಲಿ ಇಂದು ಆ ಕಯ್ಲಾನ್ನು ಕೊಯ್ಯುವ ಭತ್ತದ ಕೃಷಿ ಕೊಯ್ಲು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಆಚಾರಪಟ್ಟವರು ,ಗುರಿಕಾರರು,ತರವಾಡಿನ ಹಿರಿಯರು,ಅಡ್ಕ ಕ್ಷೇತ್ರದ ಆಚಾರಪಟ್ಟವರು,ಪಟ್ಟತ್ತೂರು ಗುತ್ತಿನ ಮನೆಯವರು, ಸೇವಾ ಸಮಿತಿಯ ಪದಾಧಿಕಾರಿಗಳು, ಕನಿಲ ಶ್ರೀ ಭಗವತಿ ಕ್ಷೇತ್ರದ ಮಹಿಳಾ ಸಮಿತಿಯ ಪದಾಧಿಕಾರಿಗಳು, ಉಳ್ಳಾಲ ಭಗವತಿ ಕ್ಷೇತ್ರದ ಗುರಿಕಾರರು, ಪರಪ್ಪು ಕ್ಷೇತ್ರದ ಪ್ರಮುಖರಾದ ನಿಖಿಲ್, ಕ್ಷೇತ್ರದ ಆಡಳಿತ ಪದಾಧಿಕಾರಿಗಳು ಹಾಗು ಕುಟುಂಬಸ್ಥರ ಉಪಸ್ಥಿತಿಯಲ್ಲಿ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!