ಮಂಜೇಶ್ವರ / ಕಾಸರಗೋಡು: ಬೇಕಲ ಬೀಚ್ ಫೆಸ್ಟ್‌ನಲ್ಲಿ ನಿನ್ನೆ ರಾತ್ರಿ ನಡೆದ ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ತಲುಪಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ.
ಪೊಯಿನಾಚಿ ಪರಂಬ್ ಶಿವಮಂ ಹೌಸ್‌ನ ವೇಣುಗೋಪಾಲನ್ ನಾಯರ್ ರ ಪುತ್ರ ಎಂ. ಶಿವನಂದನ್ (19) ಸಾವನ್ನಪ್ಪಿದ ದುರ್ದೈವಿ. ಇವರು ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು.ಸ್ನೇಹಿತನೊಂದಿಗೆ ಶಿವನಂದನ್ ಪಳ್ಳಿಕ್ಕೆರೆ ಬೀಚ್‌ಗೆ ರೈಲ್ವೇ ಹಳಿ ಸಮೀಪದಲ್ಲಾಗಿ ನಡೆದು ಹೋಗುತ್ತಿರುವ ಮಧ್ಯೆ ಕಣ್ಣೂರು ಭಾಗದಿಂದ ಬಂದ ರೈಲು ಶಿವನಂದನ್‌ಗೆ ಢಿಕ್ಕಿ ಹೊಂದಿರುವುದಾಗಿ ಬೇಕಲ ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತ ಅಜೇಶ್‌ರ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ವೇಣುಗೋಪಾಲನ್ ಇದೇ ವೇಳೆ ವೇಡನ್‌ರ ಸಂಗೀತ ಕಾರ್ಯಕ್ರಮ ಸಂದರ್ಭ ದಲ್ಲಿ ಉಂಟಾದ ನೂಕುನುಗ್ಗಲು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಉಸಿರಾಟ ಸಾಧ್ಯವಾಗದೆ ಹಲವರು ಕುಸಿದು ಬೀಳುವುದರೊಂದಿಗೆ ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಬೇಕಲ ಬೀಚ್ ಫೆಸ್ಟ್‌ನಲ್ಲಿ ಉಂಟಾದ ನೂಕು ನುಗ್ಗಲಿನ ಹಿನ್ನೆಲೆಯಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಉಳಿದವರು ನಿಟ್ಟುಸಿರು ಬಿಟ್ಟಿದ್ದಾರೆ.