ನಮಾಜಿಗೆ ತೆರಳುತ್ತಿರುವ ಮಧ್ಯೆ ವಾಹನ ಢಿಕ್ಕಿ ಹೊಡೆದು ಪಂಡಿತ ಸಾವು

ಮಂಜೇಶ್ವರ : ತರವಾಡು ಮನೆಗೆ ಕಾರ್ಯಕ್ರಮಕ್ಕೆಂದು ತೆರಳಿದ ಪಂಡಿತರೊಬ್ಬರು ಮಸೀದಿಯಲ್ಲಿ ನಮಾಜಿಗಾಗಿ ತೆರಳುತ್ತಿರುವ ಮಧ್ಯೆ ವಾಹನ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.ಕಟ್ಟತ್ತಡ್ಕ ಮುಹಿಮ್ಮಾತ್ ನಗರದಲ್ಲಿ ವಾಸಿಸುವ ಅಬ್ದುಲ್ ಖಾದರ್ ಸಖಾಫಿ (54) ಸಾವನ್ನಪ್ಪಿದ ದುರ್ದೈವಿ.

ಆತೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮಸೀದಿಯಲ್ಲಿ ನಮಾಜಿಗಾಗಿ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಇವರಿಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಶವ ಶರೀರ ಕಟ್ಟತ್ತಡ್ಕದ ಮನೆಗೆ ತಲುಪಿದೆ. ಬಳಿಕ ಕಟ್ಟತ್ತಡ್ಕ ಮುಹಿಮ್ಮಾತ್ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!