ಮಂಜೇಶ್ವರ : ಉತ್ತರ ಕೇರಳದ ತುತ್ತ ತುದಿಯಲ್ಲಿ ಸೌಹಾರ್ದತೆ ಹಾಗೂ ಶಾಂತಿಯ ಸಂದೇಶಕ್ಕೆ ಹೆಸರುವಾಸಿಯಾಗಿರುವ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿರುವ ಉದ್ಯಾವರ ಸಾವಿರ ಜಮಾಹತ್ ಅಸಯ್ಯದ್ ಶಹೀದ್ ವಲಿಯುಲ್ಲಾಯಿಯವರ ದರ್ಗಾದಲ್ಲಿ ಪಂಚವಾರ್ಷಿಕ ಉದಯಾಸ್ತಮಾನ ಉರೂಸ್ ಸಂಭ್ರಮಕ್ಕೆ ದಿನ ದಿತ್ಯ ಸಾವಿರಾರು ಭಕ್ತಾಭಿಮಾನಿಗಳ ಪ್ರವಾಹವೇ ಹರಿದು ಬರುತ್ತಿದೆ.
ಅಂಕಿಅಂಶಗಳ ಪ್ರಕಾರ ದಕ್ಷಿಣ ಭಾರತದ ಇಸ್ಲಾಮೀಯ ಸಂದೇಶ ಪ್ರಚಾರಕ್ಕೆ ಚಾಲನೆ ದೊರಕಿದ ಕ್ರಿ. ಶ 10 -11 ನೇ ಶತಮಾನಗಳ ಕಾಲಘಟ್ಟದಲ್ಲೇ ಇಂದು ಈಗ ಅಸ್ತಿತ್ವದಲ್ಲಿರುವ ಉದ್ಯಾವರದ ಪುರಾತನ ಜುಮಾ ಮಸೀದಿ ನಿರ್ಮಾಣವಾಗಿತ್ತೆಂ ಬಂದು ಪಂಡಿತರ ಅಭಿಪ್ರಾಯ.
ಆ ಸಮಯಗಳಲ್ಲಿ ಸಮುದ್ರ ಮಾರ್ಗದ ವ್ಯಾಪಾರ ಸಂಪರ್ಕಗಳು ಹಾಗೂ ದಅ್ವಾ ಕಾರ್ಯಗಳು ಈ ಪ್ರದೇಶದ ಸಾಮಾಜಿಕ–ಸಾಂಸ್ಕೃತಿಕ ಬದಲಾವಣೆಗಳಿಗೆ ಪ್ರಮುಖ ಕಾರಣಗಳಾಗಿದ್ದವೆಂದು ಹೇಳಲಾಗುತ್ತಿದೆ.
ಪ್ರವಾದಿಗಳ ಕಾಲದಲ್ಲೇ ಅದೇ ರೀತಿ ಅವರ ಸಹಾಬಿಗಳ ಕಾಲದಲ್ಲಿ ನಿರ್ಮಾಣಗೊಂಡಿರುವುದಾಗಿ ಹೇಳಲಾಗುತ್ತಿರುವ ಉದ್ಯಾವರ ಸಾವಿರ ಜಮಾಹತ್ ಜುಮಾ ಮಸೀದಿ ಸಾವಿರ ವರ್ಷಕ್ಕಿಂತಲೂ ಅಧಿಕ ಕಾಲದಿಂದ ನಮಾಝ್, ಕುರಾನ್ ಅಧ್ಯಯನ ಹಾಗೂ ಸಾಮಾಜಿಕ ಏಕತೆಯ ಕೇಂದ್ರವಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಆರಂಭದ ದಿನಗಳಲ್ಲಿ ಇದು ಒಂದು ಸಣ್ಣ ಜುಮಾಅತ್ ಮಸೀದಿ ಆಗಿತ್ತೆಂಬದಾಗಿ ಸ್ಥಳೀಯ ಇತಿಹಾಸ ದಾಖಲೆಗಳು ಹಾಗೂ ಮೌಖಿಕ ಪರಂಪರೆಗಳಿಂದ ವ್ಯಕ್ತವಾಗುತ್ತಿದೆ.
ಕಾಲಾನುಗತವಾಗಿ ಅನೇಕ ಪುನರ್ ನಿರ್ಮಾಣ ಕಾರ್ಯಗಳು ನಡೆದರೂ, ಮಸೀದಿಯ ಮೂಲ ರಚನೆ ಅಂದಿನಂತೆ ಇಂದಿಗೂ ಅಚಲವಾಗಿದೆ. ಶತಮಾನಗಳಿಂದ ಇಲ್ಲಿ ಮೊಳಗುತ್ತಿರುವ ಅಝಾನ್ ಧ್ವನಿ, ತಲೆಮಾರುಗಳ ನಂಬಿಕೆಯ ಜೀವಂತ ಸಾಕ್ಷಿಯಾಗಿದೆ.
ಮಸೀದಿಗೆ ಹೊಂದಿಕೊಂಡಿರುವ ದರ್ಗಾ ಶರೀಫ್ ಈ ಪ್ರದೇಶದಲ್ಲಿ ಇಸ್ಲಾಮೀಯ ಮೌಲ್ಯಗಳನ್ನು ಪ್ರಸಾರ ಮಾಡಿದ ಮಹಾನ್ ಅಸಯ್ಯಿದ್ ಶಹೀದ್ ವಲಿಯುಲ್ಲಾಹಿ ಎಂದು ಕರೆಯಲ್ಪಡುವ ಪುಣ್ಯಾತ್ಮರ ವಿಶ್ರಾಂತಿ ಸ್ಥಳವೆಂದು ನಂಬಲಾಗುತ್ತದೆ. ಆ ಮಹಾತ್ಮರ ಜೀವನವು ದೇವಭಕ್ತಿ, ತ್ಯಾಗ ಮತ್ತು ಮಾನವೀಯತೆಯ ಉದಾತ್ತ ಮಾದರಿಯಾಗಿತ್ತೆಂಬುದು ವಿಶ್ವಾಸಿಗಳ ನಂಬಿಕೆ.
ಇಲ್ಲಿಯ ಹಿರಿಯರ ಹೇಳಿಕೆ ಪ್ರಕಾರ ಈ ದರ್ಗಾ ಶರೀಫ್ ಪ್ರದೇಶದ ಸಾಮಾಜಿಕ ಏಕತೆಗೆ ಮಹತ್ವದ ಪಾತ್ರ ವಹಿಸಿವೆ. ಜಾತಿ–ಧರ್ಮ–ವರ್ಗ ಭೇದವಿಲ್ಲದೆ ಈಗಲೂ ಭಕ್ತಾಭಿಮಾನಿಗಳು ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿ, ಶಾಂತಿ ಮತ್ತು ಆಶ್ವಾಸನೆ ಪಡೆಯುತ್ತಿದ್ದಾರೆ.
ಇಲ್ಲಿ ಅಂತ್ಯ ವಿಶ್ರಾಂತಿಯಲ್ಲಿರುವ ವಲಿಯುಲ್ಲಾ ಯಿಯವರ ಸ್ಮರಣಾರ್ಥವಾಗಿ ಆರಂಭಗೊಂಡ ಉದಯಾಸ್ತಮಾನ ಉರೂಸ್ ವಾರ್ಷಿಕೋತ್ಸವ ಪೂರ್ವಿಕರು ಸ್ಥಾಪಿಸಿದಂತೆ ಶತಮಾನಗಳಿಂದ ನಿರಂತರವಾಗಿ ನಡೆಯುತ್ತಿರುವ ಆತ್ಮೀಯ–ಸಾಂಸ್ಕೃತಿಕ ಮಹಾಸಂಗಮವಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ನಿಗದಿತ ದಿನಗಳಲ್ಲಿ ನಡೆಯುವ ಉರೂಸ್ಗೆ ದೂರದೂರಿನಿಂದಲೂ ಭಕ್ತರು ಆಗಮಿಸುತ್ತಿರುವುದು ಇಲ್ಲಿಯ ವಿಶೇಷತೆಯಾಗಿದೆ.
ಉರೂಸ್ ಭಾಗವಾಗಿ ಹಮ್ಮಿಕೊಳ್ಳಲಾಗಿರುವ ಖತ್ಮುಲ್ ಕುರಾನ್, ದುವಾ ಮಜ್ಲಿಸ್, ಧಿಕ್ರ್, ಧಾರ್ಮಿಕ ಪಂಡಿತರ ಇತಿಹಾಸ–ಆತ್ಮೀಯ ಉಪನ್ಯಾಸಗಳು ಹಾಗೂ ಮೌಲೂದ್ ಅನ್ನದಾನ ಸೇರಿದಂತೆ ಉರೂಸ್ ಒಂದು ಆಚರಣೆ ಮಾತ್ರವಲ್ಲ ಇತಿಹಾಸ ಜಾಗೃತಿ ಮತ್ತು ಆತ್ಮೀಯ ಪುನರುಜ್ಜೀವನವನ್ನು ನೀಡುವ ವಾರ್ಷಿಕ ಘಟನೆಯಾಗಿ ರೂಪುಗೊಂಡಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಇಲ್ಲಿನ ಉರೂಸ್ ನೇರ್ಚೆ ಒಂದೇ ಸತ್ಯವನ್ನು ನೆನಪಿಸುತ್ತದೆ
ಕಾಲ ಬದಲಾಗಿದ್ದರೂ, ಆತ್ಮೀಯ ಮೌಲ್ಯಗಳು ಎಂದಿಗೂ ನಾಶವಾಗುವುದಿಲ್ಲ ಎಂಬುದಕ್ಕೆ ಸಾವಿರ ಜಮಾ ಅತ್ ದರ್ಗಾ ಶರೀಫ್ ಮಖಾಂ ಊರೂಸ್ ಸ್ಪಷ್ಟ ನಿದರ್ಶನವಾಗಿದೆ.
ಉತ್ತರ ಕೇರಳದ ಅತ್ಯಂತ ಪ್ರಸಿದ್ಧವಾದ ಉದ್ಯಾವರ ಸಾವಿರ ಜಮಾಅತ್ ಆವರಣದಲ್ಲಿ ಅಂತ್ಯವಿಶ್ರಾಂತಿ ಹೊಂದಿರುವ ಪವಿತ್ರಾತ್ಮರಾದ ‘ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ ಅವರ ನಾಮದೇಯದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉದಯಾಸ್ತಮ ನ ಉರೂಸ್ಗೆ ಬಹುಮಾನ್ಯರಾದ ಸಯ್ಯದ್ ಅತ್ತಾವುಲ್ಲ ತಂಘಲ್, ಸಯ್ಯದ್ ಯು ಕೆ ಸೈಫುಲ್ಲಾ ತಂಘಲ್, ಸಯ್ಯದ್ ಪೂಕುಂಞ ತಂಘಲ್, ಇಬ್ರಾಹಿಂ ಬಟರ್ ಫ್ಲೈ, ಪಳ್ಳಿ ಕುಂಞ ಹಾಜಿ, ಆಲಿ ಕುಟ್ಟಿ ನೇಶನಲ್, ಬಾವ ಹಾಜಿ ಹಾಗೂ ಎಸ್ ಎಂ ಬಶೀರ್ ರವರ ನೇತೃತ್ವದಲ್ಲಿ
ಡಿಸೆಂಬರ್ 19ಕ್ಕೆ ಚಾಲನೆ ದೊರಕಿತ್ತು. ಈಗಾಗಲೇ ಹಲವು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವ ಉರೂಸ್ ಸಮಾರಂಭದಲ್ಲಿ ಜನವರಿ 3ರಂದು ಬೆಳಿಗ್ಗೆ 10 ಗಂಟೆಗೆ ಸಾವಿರ ಜಮಾಹತ್ ಖಾಝಿ ಸಯ್ಯದ್ ಜಿಫ್ರಿ ಮುತ್ತು ಕೋಯ ತಂಘಲ್ ರವರ ನೇತೃತ್ವದಲ್ಲಿ ಅಲ್ ರಶಾದಿಯ ಮಹಿಳಾ ಕಾಲೇಜು ಲೋಕಾರ್ಪಣೆಗೊಳ್ಳಲಿದೆ. ಬಳಿಕ ಅಂದೇ ಸಂಜೆ 3 ಗಂಟೆಗೆ ಆರಂಭವಾಗುವ ಮಾನವ ಸೌಹಾರ್ದ ಸಮಾವೇಶದಲ್ಲಿ ಪ್ರಮುಖ ಮಾನವ ಹಕ್ಕು ಕಾರ್ಯಕರ್ತರು, ವಾಗ್ಮಿಗಳು ಹಾಗೂ ಧಾರ್ಮಿಕ–ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಈ ಬಗ್ಗೆ ಉರೂಸ್ ಕಮಿಟಿ ಚೇಯರ್ಮ್ಯಾನ್ ಸಯ್ಯದ್ ಸೈಫುಲ್ಲ ತಂಘಲ್ ಮಾತನಾಡಿ (Byt 1) : ಮಸೀದಿ ನಡೆದು ಬಂದ ದಾರಿಯ ಬಗ್ಗೆ ಕಿರು ಪರಿಚಯ ನೀಡಿದರು.
ಬಳಿಕ ಈ ಬಗ್ಗೆ ಮಸೀದಿ ಕಾರ್ಯದರ್ಶಿ ಎಸ್ ಎಂ ಬಶೀರ್ ಮಾತನಾಡಿ (Byt 2 ) ಉರೂಸ್ ಸಮಾರಂಭದ ಬಗ್ಗೆ ಕಿರು ಪರಿಚಯ ನೀಡಿದರು
ಬಳಿಕ ಈ ಬಗ್ಗೆ ಮಸೀದಿ ಮಾಜಿ ಕಾರ್ಯದರ್ಶಿ ಕಾದರ್ ಫಾರೂಕ್ ರವರು ಮಾತನಾಡಿ (byt 2) : ಮಸೀದಿಯ ಹಿನ್ನೆಲೆಯ ಬಗ್ಗೆ ಕಿರು ಪರಿಚಯ ನೀಡಿದರು
ಅಂದೇ ರಾತ್ರಿ 8:30ಕ್ಕೆ ನಡೆಯುವ ಸಮಾರೋಪ ಸಭೆಯನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮ ಅಧ್ಯಕ್ಷರೂ ಹಾಗೂ ಸಾವಿರ ಜಮಾಅತ್ ಸಂಯುಕ್ತ ಖಾಜಿಯೂ ಆಗಿರುವ ಸಯ್ಯಿದುಲ್ ಉಲಮ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳ್ ಉದ್ಘಾಟಿಸಲಿದ್ದಾರೆ. ಅದೇ ದಿನ ನಡೆಯುವ ಪ್ರಾರ್ಥನಾ ಮಜ್ಲಿಸಿಗೆ ಸಯ್ಯಿದ್ ಸುಹೈಲ್ ಸಖಾಫ್ ತಂಗಳ್ (ಮಡಕ್ಕರ) ನೇತೃತ್ವ ನೀಡಲಿದ್ದಾರೆ. ಕೇರಳದ ಅನುಗ್ರಹೀತಃ ಕುಮ್ಮನಂ ನಿಸಾಮುದ್ದೀನ್ ಅಝ್ಹರಿ ಮುಖ್ಯ ಭಾಷಣ ಮಾಡಲಿದ್ದಾರೆ.
ಡಿಸೆಂಬರ್ 4ರಂದು ಬೆಳಿಗ್ಗೆ ಪ್ರಭಾತ ನಮಾಜಿನ ನಂತರದಿಂದ ಅಸ್ತಮಾನದವರೆಗೆ ಲಕ್ಷಾಂತರ ಭಕ್ತರಿಗೆ ಅನ್ನದಾನ ಸಮರ್ಪಣೆಯೊಂದಿಗೆ ಉದಯಾಸ್ತಮಾನ ಉರೂಸ್ ಸಮಾಪ್ತಿಗೊಳ್ಳಲಿದೆ.