ಮಂಜೇಶ್ವರ: ಟೈಮಿಂಗ್ ವಿಷಯದಲ್ಲಿ ಬಸ್ ನೌಕರರ ಮಧ್ಯೆ ಮಾರಾಮಾರಿ ಟಿಕೆಟ್ ಉಪಕರಣ ಹಾಗೂ ಮೊಬೈಲ್ ಫೋನ್ ಕಿತ್ತೆಸೆದು ಬಿಸಾಡಿ ಹಾನಿಗೊಳಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಕುಂಬಳೆ ಬದಿಯಡ್ಕ ರಸ್ತೆಯಲ್ಲಿ ಬಸ್ ಶೆಲ್ಟರ್ ನಲ್ಲಿ ಈ ಘಟನೆ ನಡೆದಿದೆ.
ಕಾಸರಗೋಡು ಭಾಗದಿಂದ ಮಂಗಳೂರು ಕಡೆ ಸಂಚರಿಸುತಿದ್ದ ಬಸ್ಸು ಹಾಗೂ ಅದೇ ಭಾಗಕ್ಕೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸು ಕುಂಬಳೆಗೆ ತಲುಪಿದಾಗ ಸಾರಿಗೆ ಬಸ್ಸು ಚಾಲಕ ಖಾಸಗಿ ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ್ದಾನೆ. ಈ ಮಧ್ಯೆ ಟೈಮಿಂಗ್ ವಿಷಯಲ್ಲಿ ಎರಡೂ ಬಸ್ಸು ಸಿಬ್ಬಂದಿಗಳ ಮಧ್ಯೆ ಮಾರಾಮಾರಿ ನಡೆದಿದೆ.
ಈ ಮಧ್ಯೆ ಖಾಸಗಿ ಬಸ್ಸು ಚಾಲಕ ಕರ್ನಾಟಕ ಸಾರಿಗೆ ಬಸ್ಸು ನಿರ್ವಾಹಕನ ಕೈಯಲ್ಲಿದ್ದ ಟಿಕೆಟ್ ಉಪಕರಣ ಹಾಗೂ ಮೊಬೈಲ್ ಫೋನನ್ನು ಕಿತ್ತೆಗೆದು ಬಿಸಾಡಿ ಹಾನಿಗೊಳಿಸಿರುವ ಬಗ್ಗೆ ದೂರಲಾಗಿದೆ.
ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಕುಂಬಳೆ ಪೊಲೀಸರು ಎರಡೂ ಬಸ್ಸುಗಳನ್ನು ವಶಕ್ಕೆ ತೆಗೆದಿದ್ದಾರೆ.ಇದರಿಂದ ಈ ಎರಡು ಬಸ್ಗಳ ಪ್ರಯಾಣಿಕರು ಬೇರೆ ಬಸ್ಗಳಲ್ಲಿ ಸಂಚರಿಸಬೇಕಾಗಿ ಬಂತು.