ಕಾಞಂಗಾಡ್ ಜಿಲ್ಲಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿಯೊಬ್ಬ ಪರಾರಿಯಾಗಲು ಯತ್ನ

ಮಂಜೇಶ್ವರ : ಜಿಲ್ಲೆಯ ಕಾಞಂಗಾಡ್ ಜಿಲ್ಲಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿಯೊಬ್ಬ ಪರಾರಿಯಾಗಲು ಯತ್ನಿಸಿದ್ದಾನೆ.ಬದಿಯಡ್ಕ ಪೊಲೀಸರು ದಾಖಲಿಸಿದ ಕಳವು ಪ್ರಕರಣದ ಆರೋಪಿ ನೆಲ್ಲಿಕಟ್ಟೆ ಆಮೂಸ್ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುವ ಟಿ.ಎಂ. ಅಬ್ದುಲ್ ಸುಹೈಲ್ ಎಂಬಾತನ ವಿರುದ್ಧ ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೈಲು ಸುಪರಿಂಟೆಂಡೆಂಟ್ ನೀಡಿದ ದೂರಿನಂತೆ, ಶುಕ್ರವಾರ ಸೆಲ್‌ನಿಂದ ಹೊರಬಂದ ಆರೋಪಿ ಮರಳಿ ಜೈಲಿಗೆ ಪ್ರವೇಶಿಸುವ ಸಂದರ್ಭ ಅಡುಗೆ ಕೋಣೆಯ ಮೇಲ್ಭಾಗಕ್ಕೆ ಹತ್ತಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. 10 ಸಾವಿರ ರೂಪಾಯಿ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಸುಹೈಲ್ 2025 ಜುಲೈ 31ರಿಂದ ಜಿಲ್ಲಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದಾನೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!