ಮಂಜೇಶ್ವರ: ಮರಳು ಮಾಫಿಯಾಗಳ ಅಟ್ಟಹಾಸದ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಂತೆ ಮತ್ತೊಂದೆಡೆ ಮತ್ತೊಂದೆಡೆ ಮರಳು ಸಾಗಾಟ ದಂಧೆ ತೀವ್ರಗೊಂಡಿದೆ.
ಕಳೆದ ಮಧ್ಯ ರಾತ್ರಿಯೂ ಹೊಯ್ದೆ ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್ಐ ಶ್ರೀಜೇಶ್ ನೇತೃತ್ವದಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಮರಳು ತುಂಬಿದ ಎರಡು ಟಿಪ್ಪರ್ ಲಾರಿಗಳನ್ನು ವಶಡಿಸಲಾಗಿದೆ. ಒಂದು ಲಾರಿಯನ್ನು ಕುಂಬಳೆ ಅಂಡರ್ಪಾಸ್ನಿಂದ ಹಾಗೂ ಇನ್ನೊಂದು ಲಾರಿಯನ್ನು ಮೊಗ್ರಾಲ್ ಅಂಡರ್ಪಾಸ್ನಿಂದ ವಶಪಡಿಸಲಾಗಿದೆ.
ಪೊಲೀಸರನ್ನು ಕಂಡೊಡನೆ ಲಾರಿಗಳನ್ನು ಉಪೇಕ್ಷಿಸಿ ಚಾಲಕರು ಪರಾರಿಯಾಗಿದ್ದಾರೆ. ಬಳಿಕ ಮರಳು ಸಹಿತ ಲಾರಿಗಳನ್ನು ಕುಂಬಳೆ ಠಾಣೆಗೆ ತಲುಪಿಸಲಾಗಿದೆ. ಲಾರಿಗಳ ಆರ್.ಸಿ. ಮಾಲಕರನ್ನು ಪತ್ತೆಹಚ್ಚಿ ಅವರ ಮೂಲಕ ಚಾಲಕರನ್ನು ಗುರುತಿಸಿ ಬಂಧಿಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.