ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ

ಮಂಜೇಶ್ವರ : ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆಯು ಬದಿಯಡ್ಕ ವೀಣಾವಾದಿನಿ ಸಂಗೀತ ಪೀಠಮ್ ನಲ್ಲಿ ಸಂಘಟನೆಯ ಅಧ್ಯಕ್ಷ ರವಿ ನಾಯ್ಕಪ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಡಿ ವೈ ಎಸ್ಪಿ ಡಾಕ್ಟರ್ ವಿ ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ವೇದಿಕೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆಯ್ಕೆಯಾದ ಪತ್ರಕರ್ತರ ಕುಟುಂಬ ಸದಸ್ಯರಾದ ಅಶ್ವಥಿ ಅಶೋಕ್, ವಿದ್ಯಾಕುಮಾರಿ, ಪ್ರಿಯಾಂಕ, ಶ್ಯಾಂ ಪ್ರಸಾದ್ ಸರಳಿ, ಸುನೀನಾ ಹಾಗೂ ಕನ್ನಡಿಗ ರಾಮಪ್ಪ ಮಂಜೇಶ್ವರ ಎಂಬಿವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಎ. ಆರ್ ಸುಬ್ಬಯ್ಯ ಕಟ್ಟೆ, ಗಂಗಾಧರ ತೆಕ್ಕೆ ಮೂಲೆ, ಶ್ರೀಕಾಂತ್ ನೆಟ್ಟಣಿಗೆ, ರಾಘವ ಚೇರಾಲ್, ಪ್ರೊಫೆಸರ್ ಎ ಶ್ರೀನಾಥ್ , ಜಯಪ್ರಕಾಶ್ ನಾರಾಯಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!