ಚಿನ್ನದ ದರ ಏರಿಕೆಯ ಹೊಡೆತ ಕಂಬಳಕ್ಕೂ: ಬಹುಮಾನ ಚಿನ್ನದ ವೆಚ್ಚದಿಂದ ಸಂಘಟಕರಿಗೆ ಭಾರ

ಮಂಗಳೂರು :ಚಿನ್ನದ ದರ ಏರಿಕೆಯ ಹೊಡೆತ ಕರಾವಳಿಯ ಕಂಬಳಕ್ಕೂ ತಟ್ಟತೊಡಗಿದೆ.ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಗುರುತಿಸುವಂತಹ ಕಂಬಳಕ್ಕೂ ಇದೀಗ ಚಿನ್ನದ ದರ ಏರಿಕೆಯ ನೇರ ಪರಿಣಾಮ ತಟ್ಟಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ನಾಗಾಲೋಟದಂತೆ ಏರಿಕೆಯಾಗುತ್ತಿದ್ದು, ಇದರ ಹೊರೆ ಕಂಬಳ ಕೂಟಗಳ ಮೇಲೂ ಹೆಚ್ಚಾಗಿದೆ. ಸದ್ಯ ಚಿನ್ನದ ದರ ಇಳಿಕೆಯ ಯಾವುದೇ ಲಕ್ಷಣಗಳು ಕಾಣಿಸದೇ ಇರುವ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಇನ್ನಷ್ಟು ಏರಿಕೆ ಸಂಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕಂಬಳ ಸಂಘಟಕರಿಗೆ ಬಹುಮಾನವಾಗಿ ನೀಡಬೇಕಾದ ಚಿನ್ನದ…

Read More

ಕುಂಬಳೆ ಎಕ್ಸೈಸ್ ದಾಳಿ: 130 ಟೆಟ್ರಾ ಪ್ಯಾಕ್ ಮದ್ಯದೊಂದಿಗೆ ಯುವಕ ಅರೆಸ್ಟ್

ಕುಂಬಳೆ : ಮಂಗಲ್ಪಾಡಿ ಅಡ್ಕ ಪ್ರದೇಶದಲ್ಲಿ 23.4 ಲೀಟರ್ ಕರ್ನಾಟಕ ವಿದೇಶಿ ಮದ್ಯದೊಂದಿಗೆ ಯುವಕನನ್ನು ಕುಂಬಳೆ ಎಕ್ಸೈಸ್ ರೇಂಜ್ ಪ್ರಿವೆಂಟಿವ್ ಅಧಿಕಾರಿ ಜಿಜಿನ್ ಎಂ.ವಿ. ಅವರು ಬಂಧಿಸಿದ್ದಾರೆ. ಬಂಧಿತನನ್ನು ಮಂಗಲ್ಪಾಡಿ ಅಡ್ಕ ಭಗವತಿ ನಗರ ನಿವಾಸಿ ಹರೀಶ್ ಎ. ಎಂದು ಗುರುತಿಸಲಾಗಿದೆ. ಅಡ್ಕ ಅಂಗನವಾಡಿ ಸಮೀಪ 180 ಮಿಲಿ ಗಾತ್ರದ 130 ಟೆಟ್ರಾ ಪ್ಯಾಕೆಟ್ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈ ದಾಳಿಯಲ್ಲಿ ಪ್ರಿವೆಂಟಿವ್ ಅಧಿಕಾರಿಗಳಾದ ಮೊಯ್ತೀನ್ ಸಾದಿಕ್, ಕಬೀರ್ ಹಾಗೂ ಸಿವಿಲ್…

Read More

ನೋವು–ದುಃಖದ ಮಧ್ಯೆ ಮಯ್ಯತ್ ನಮಾಜ್: ಮಂಜೇಶ್ವರದಲ್ಲಿ ಇಬ್ಬರ ಅಂತಿಮ ವಿಶ್ರಾಂತಿ

ಮಂಜೇಶ್ವರ: ಮಂಜೇಶ್ವರದ ತೂಮಿನಾಡು ಹಿಲ್‌ಟಾಪ್‌ನಲ್ಲಿ ನಡೆದ ದಾರುಣ ಕುಟುಂಬ ಕಲಹದಲ್ಲಿ ಜೀವ ಕಳೆದುಕೊಂಡ ಜುಮೈಲ ಹಾಗೂ ಆಕೆಯ ಚಿಕ್ಕಪ್ಪ ಶೇಕುಂಞ ಅವರಿಗೆ ಕಣ್ಣೀರಿನೊಂದಿಗೆ ಅಂತಿಮ ವಿದಾಯ ದೊರೆಯಿತು. ನೋವು ಮತ್ತು ದುಃಖದಿಂದ ತುಂಬಿದ ವಾತಾವರಣದಲ್ಲಿ ಇಬ್ಬರನ್ನೂ ಬಂಗ್ರ ಮಂಜೇಶ್ವರ ಮುಯ್ಯುದ್ದೀನ್ ಜುಮಾ ಮಸೀದಿ ಖಬರ್‌ಸ್ಥಾನದಲ್ಲಿ ಅಂತಿಮ ವಿಶ್ರಾಂತಿಗೆ ಒಪ್ಪಿಸಲಾಯಿತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಂಗಳವಾರ ಸಂಜೆ ಮೃತದೇಹಗಳನ್ನು ತೊಮಿನಾಡಿನಲ್ಲಿರುವ ಮನೆಗೆ ತರಲಾಯಿತು. ಅಂತಿಮ ದರ್ಶನಕ್ಕಾಗಿ ಬಂಧುಗಳು, ಸ್ನೇಹಿತರು ಹಾಗೂ ಸ್ಥಳೀಯರು ಸೇರಿದಂತೆ…

Read More

ಕುಟುಂಬ ಕಲಹದ ಕರಾಳ ಅಧ್ಯಾಯ; ಮಂಜೇಶ್ವರದಲ್ಲಿ ಜುಮ್ಲಾ–ಶೇಕುಂಞ ದಫನ

ಮಂಜೇಶ್ವರ: ಮಂಜೇಶ್ವರ ತೊಮಿನಾಡು ಹಿಲ್‌ಟಾಪ್‌ನಲ್ಲಿ ದಾಂಪತ್ಯ ವೈಮನಸ್ಸು ಹಾಗೂ ಸೊತ್ತು ವಿಚಾರದ ಕಲಹದಿಂದ ಮೃತಪಟ್ಟ ಜುಮ್ಲಾ ಮತ್ತು ಆಕೆಯ ಚಿಕ್ಕಪ್ಪ ಶೇಕುಂಞ ಅವರ ಮೃತದೇಹಗಳನ್ನು ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಮಂಜೇಶ್ವರ ಮುಯ್ಯುದ್ದೀನ್ ಜುಮಾ ಮಸೀದಿ ಅಂಗಳದಲ್ಲಿ ದಫನ ಮಾಡಲಾಯಿತು. ಸೋಮವಾರ ಶೇಕುಂಞ ಅವರ ಮನೆಯಲ್ಲಿ ನಡೆದ ಹಲ್ಲೆಯ ವೇಳೆ ತಂದೆಯ ಇರಿತಕ್ಕೆ ಒಳಗಾದ ಜುಮ್ಲಾ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ…

Read More

ಕುಂಬಳೆ ಆರಿಕ್ಕಾಡಿ ಟೋಲ್ ಗೇಟ್ ನಿಲ್ಲಿಸಲು ಕೇಂದ್ರ ಸರಕಾರ ನಿರ್ಧಾರ,ಇದುವರೆಗೆ ಸ್ವೀಕರಿಸಿದ ಟೋಲ್ ಹಿಂತಿರುಗಿಸಬೇಕು: ಸಿಪಿಎಎಂ

ಕುಂಬಳೆ: ಕುಂಬಳೆ ಆರಿಕ್ಕಾಡಿ ಟೋಲ್ ಸಂಗ್ರಹ NH 66 ರಸ್ತೆಯಲ್ಲಿ ಯಾತ್ರೆ ಮಾಡುವವರಿಗೆ ಬಾರಿ ತೊಂದರೆ ಉಂಟು ಮಾಡಿದ್ದು,ಇದಕ್ಕೆದುರಾಗಿ ಸಿಪಿಐಎಂ ಹಾಗೂ ಜನಕೀಯ ಪ್ರತಿಭಟನಾ ಸಮಿತಿ ಹೋರಾಟ ಸಮರ ನಡೆಸಿದ್ದು ಬಿಜೆಪಿ ಸರಕಾರಕ್ಕೆ ಬಿಸಿ ಎಬ್ಬಿಸಿದೆ.ಈಗ ಈ ಟೋಲ್ ನಿಲ್ಲಿಸಲು ಆದೇಶ ಹೊರಡಿಸಿದ ಕೇಂದ್ರ ಬಿಜೆಪಿ ಸರಕಾರವು ಇದುವರೆಗೂ ಹಗಲು ರಾತ್ರಿ ಹೋರಾಟ ನಡೆಸಿದ ನಾಗರಿಕರ ಮೇಲೆ ದಾಖಲಿಸಿದ ಕೇಸು ,ಆರ್ಥಿಕ ನಷ್ಟಗಳನ್ನು ಕೂಡ ಪರಿಹರಿಸಬೇಕಾಗಿದೆ.ಇದುವರೆಗೂ ಸಂಗ್ರಹಿಸಿದ ಟೋಲ್ ಯಾತ್ರಿಕರಿಗೆ ಹಿಂತಿರುಗಿಸಲು ಕೇಂದ್ರ ಸರಕಾರ ತಯಾರಾಗಬೇಕೆಂದು ಸಿಪಿಐಎಂ…

Read More

ಕಾಸರಗೋಡು: ಕುಂಬಳೆ ಆರಿಕ್ಕಾಡಿ ಟೋಲ್ ಬೂತ್ ಕೇಂದ್ರ ಸರ್ಕಾರದಿಂದ ರದ್ದು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುಂಬಳೆ ಆರಿಕ್ಕಾಡಿ ಟೋಲ್ ಬೂತ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಕುರಿತು ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ ಲಭಿಸಿದ್ದು, ಸಂಬಂಧಿಸಿದ ಆದೇಶ ನಾಳೆ ಲಭ್ಯವಾಗಲಿದೆ ಎಂದು ಬಿಜೆಪಿ ಮುಖಂಡರಾದ ಕೆ. ಸುರೇಂದ್ರನ್ ಹಾಗೂ ಎಂ.ಎಲ್. ಅಶ್ವಿನಿ ಅವರು ತಿಳಿಸಿದ್ದಾರೆ. ಟೋಲ್ ಬೂತ್ ರದ್ದುಪಡಿಸಿರುವ ವಿಷಯ ತಿಳಿದ ಕೂಡಲೇ ಬಿಜೆಪಿ ಕಾರ್ಯಕರ್ತರು ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಕುಂಬಳೆಯಲ್ಲಿ ಸಂಭ್ರಮಾಚರಣೆ ನಡೆಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ, ವಿಜಯೋತ್ಸವದ…

Read More

ಹೊನ್ನಾವರದಲ್ಲಿ ಉಮೇಶ ಮುಂಡಳ್ಳಿ ಅವರಿಗೆ ಸನ್ಮಾನ

ಹೊನ್ನಾವರ: ತಾಲೂಕಿನ ಸ.ಹಿ.ಪ್ರಾ.ಶಾಲೆ ಹೊನ್ನಾವರ ನಂ.೨ ಶಾಲೆಯಲ್ಲಿ ಇಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಾಯಕ ಉಮೇಶ ಮುಂಡಳ್ಳಿ ಅವರನ್ನು ಸನ್ಮಾನಿಸಲಾಯಿತು. ಮೂರು ದಿನಗಳ ಕಾಲ ಶಾಲೆಯಲ್ಲಿ ಸಮಗ್ರ ಶಿಕ್ಷಣ ಸಾಮಾಜಿಕ ಪರಿಶೋಧನೆ ನಡೆಯುತ್ತಿದ್ದು ಪರಿಶೋಧನೆ ಯ ಕೊನೆಯ ದಿನವಾದ ಮಂಗಳವಾರ ಪರಿಶೋಧನಾ ವಿಭಾಗದ ಕಾರ್ಯಕ್ರಮ ವ್ಯವಸ್ಥಾಪಕರು ಸಾಹಿತಿಗಳು ಗಾಯಕರಾದ ಉಮೇಶ ಮುಂಡಳ್ಳಿ ಅವರನ್ನು ಶಾಲೆಯ ಪಾಲಕರು ಹಾಗೂ ಶಿಕ್ಷಕ ವೃಂದದವರು ಸೇರಿ ಸನ್ಮಾನಿಸಿ ಗೌರವಿಸಿದರು. ಪರಿಶೋಧನೆ ಅವದಿಯಲ್ಲಿ ಮುಂಡಳ್ಳಿ ಅವರು ಪಠ್ಯ ಪುಸ್ತಕ ದಲ್ಲಿ ಇರುವ…

Read More

ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಟೋಲ್ ಕೊನೆಗೂ ರದ್ದು….!

ಕುಂಬಳೆ: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಟೋಲ್ ಕೊನೆಗೂ ರದ್ದುಗೊಂಡಿದ್ದು, ಟೋಲ್ ವಿರೋಧಿ ಕ್ರಿಯಾ ಸಮಿತಿ ಮತ್ತು ಬಿಜೆಪಿ ಮುಖಂಡರು ಮಂಗಳವಾರ(ಫೆ.3) ಸಂಜೆ ಕುಂಬಳೆಯಲ್ಲಿ ಪ್ರತ್ಯೇಕ ವಿಜಯೋತ್ಸವ ನಡೆಸಿದರು. ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದು, ಲಿಖಿತ ಆದೇಶಕ್ಕೆ ಸಹಿ ಹಾಕಿದ್ದಾರೆ. ಇಂದು(ಫೆ.4) ಅಧಿಕೃತ ಪ್ರಕಟನೆ ಹೊರಬೀಳಲಿದೆ. ಸಚಿವ ನಿತಿನ್ ಗಡ್ಕರಿ ಅವರು ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷರನ್ನು ದೂರವಾಣಿ ಮೂಲಕ…

Read More

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

ಮಂಗಳೂರು: ದೇಶದ ಪ್ರತಿಷ್ಠಿತ ಕೆನರಾ ಬ್ಯಾಂಕ್ ಇದರ ಮಂಗಳೂರು ವೃತ್ತ ಕಾರ್ಯಾಲಯ – ಮಂಗಳೂರು ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿರು ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಮ ಕಾಸರಗೋಡು ಅವರನ್ನು ಶಾಖೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಹಿರಿಯ ಪ್ರಬಂಧಕ ಸುರೇಶ ಕುಮಾರ್ ಕುರುಬ ಅಧ್ಯಕ್ಷತೆ ವಹಿಸಿ,ಸನ್ಮಾನಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕವಿ,ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕೆನರಾ ಬ್ಯಾಂಕ್ ಎಂಪ್ಲಾಯಿಸ್…

Read More

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ರಾಜ್ಯ ಮಾಧ್ಯಮ ವಕ್ತಾರರಾಗಿ ಸುದೇಶ್ ಕುಮಾರ್ ಮಂಗಳೂರು ಆಯ್ಕೆ

ಮಂಗಳೂರು: ಕನ್ನಡ ನಾಡು–ನುಡಿ ಹಾಗೂ ಕನ್ನಡ ಶಿಕ್ಷಣದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ *‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’*ದ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಸುದೇಶ್ ಕುಮಾರ್ ಮಂಗಳೂರು ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಮಾಧ್ಯಮ ಶಾಲೆಗಳ ಸಬಲೀಕರಣ ಮತ್ತು ಸರ್ಕಾರಿ ಶಾಲೆಗಳ ಹಿತಸಂರಕ್ಷಣೆಯ ಉದ್ದೇಶದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಈ ಮಹತ್ವದ ಅಭಿಯಾನಕ್ಕೆ ಮಾಧ್ಯಮಗಳ ಸಮರ್ಪಕ ಸಹಕಾರ ಹಾಗೂ ಪರಿಣಾಮಕಾರಿ ಸಂವಹನ ಅಗತ್ಯವಿದ್ದು, ಸುದೇಶ್ ಕುಮಾರ್…

Read More
error: Content is protected !!