Headlines

ಜೋಡುಕಲ್ಲು ವಾಹನ ತಪಾಸಣೆ ವೇಳೆ ಭಾರೀ ಪ್ರಮಾಣದ ಎಂಡಿಎಂಎ ವಶ: ಇಬ್ಬರ ಬಂಧನ

ಮಂಜೇಶ್ವರ / ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್ ಹಾಗೂ ಮಂಜೇಶ್ವರ ಪೊಲೀಸರು ನಡೆಸಿದ ತಪಾಸಣೆಯಲ್ಲಿ 112 ಗ್ರಾಂ ಎಂಡಿಎಂಎ ಯೊಂದಿಗೆ ಇಬ್ಬರನ್ನು ಬಂಧಿಸಲಾಗಿದೆ.ಬಂದಿಯೋಡ್, ಕುಬಣೂರಿನ ಮೊಯ್ದೀನ್ ಕುಂಞಿ ಹಾಗೂ ಜೋಡ್‌ಕಲ್ಲು ನಿವಾಸಿ ಫಾರೂಕ್ ಮುಹಮ್ಮದ್ ಬಂಧಿತ ಆರೋಪಿಗಳು. ಮಾದಕ ವಸ್ತುಗಳನ್ನು ಸಾಗಿಸಲು ಬಳಸಿದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತಿ ಮೇರೆಗೆ ಸ್ಕ್ವಾಡ್ ಮತ್ತು ಮಂಜೇಶ್ವರ ಎಸ್‌ಐ ಕೆ.ಆರ್. ಉಮೇಶ್ ನೇತೃತ್ವದ ಪೊಲೀಸರು ಇಂದು (ಗುರುವಾರ) ಮಧ್ಯಾಹ್ನ ಜೋಡ್‌ಕಲ್ಲು ಎಂಬಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ ಈ…

Read More

‘ಆಪರೇಷನ್ ವಿಜಯ್’ ಯಶಸ್ಸಿಗೆ ಯುವ ನಾಯಕತ್ವ, ಬೋಫೋರ್ಸ್ ಫಿರಂಗಿಗಳೇ ಪ್ರಮುಖ ಕಾರಣ: ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ

ಮಂಗಳೂರು: ಕಾರ್ಗಿಲ್ ಯುದ್ಧವು ಭಾರತೀಯ ಸೇನೆಯ ಶೌರ್ಯ, ಯುವ ನಾಯಕತ್ವ ಹಾಗೂ ಅತ್ಯುತ್ತಮ ಯುದ್ಧತಂತ್ರಕ್ಕೆ ಸಾಕ್ಷಿಯಾದ ಸಮರವಾಗಿದೆ. ಯುವ ಅಧಿಕಾರಿಗಳ ಮುಂಚೂಣಿ ನಾಯಕತ್ವ ಮತ್ತು ಬೋಫೋರ್ಸ್ ಫಿರಂಗಿಗಳ ಪರಿಣಾಮಕಾರಿ ಬಳಕೆಯೇ ಭಾರತದ ವಿಜಯಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು. ನಗರದ ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1984ರ ‘ಆಪರೇಷನ್ ಮೇಘದೂತ್’ ಬಳಿಕ ಭಾರತೀಯ ಸೇನೆ ಕಾರ್ಗಿಲ್ ಪ್ರದೇಶದ ಪ್ರಮುಖ ಶಿಖರಗಳನ್ನು…

Read More

ನೀಟ್ ಅಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ರಾಹುಲ್, ಪ್ರಿಯಾಂಕಾ ಬಂಧನ ಖಂಡಿಸಿದ ರಮಾನಾಥ ರೈ

ಮಂಗಳೂರು:ಲೋಕಸಭೆ ಅಧಿವೇಶನದ ವೇಳೆ ನೀಟ್ (NEET) ಪರೀಕ್ಷೆಯಲ್ಲಿನ ಅಕ್ರಮ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕಾಗಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಮತ್ತು ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಯಲ್ಲಿನ ಅಕ್ರಮದಿಂದ ದೇಶದ ಶಿಕ್ಷಣ…

Read More

‘ಆಪರೇಷನ್ ವಿಜಯ್’ ಯಶಸ್ಸಿಗೆ ಯುವ ನಾಯಕತ್ವ, ಬೋಫೋರ್ಸ್ ಫಿರಂಗಿಗಳೇ ಪ್ರಮುಖ ಕಾರಣ: ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ

ಮಂಗಳೂರು:ಕಾರ್ಗಿಲ್ ಯುದ್ಧವು ಭಾರತೀಯ ಸೇನೆಯ ಶೌರ್ಯ, ಯುವ ನಾಯಕತ್ವ ಹಾಗೂ ಅತ್ಯುತ್ತಮ ಯುದ್ಧತಂತ್ರಕ್ಕೆ ಸಾಕ್ಷಿಯಾದ ಸಮರವಾಗಿದ್ದು, ಯುವ ಅಧಿಕಾರಿಗಳ ಮುಂಚೂಣಿ ನಾಯಕತ್ವ ಮತ್ತು ಬೋಫೋರ್ಸ್ ಫಿರಂಗಿಗಳ ಪರಿಣಾಮಕಾರಿ ಬಳಕೆಯೇ ಭಾರತದ ವಿಜಯಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು. ನಗರದ ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಗಿಲ್ ಯುದ್ಧದ ಹಿನ್ನೆಲೆ ವಿವರಿಸಿದ ಅವರು, ಕಾರ್ಗಿಲ್ ಲಡಾಖ್‌ನಲ್ಲಿರುವ ಸುರು ನದಿಯ ತಟದಲ್ಲಿರುವ ಪಟ್ಟಣವಾಗಿದ್ದು, ಶ್ರೀನಗರ–ಲೇಹ್ ರಾಷ್ಟ್ರೀಯ…

Read More

ಹಾರಾಡಿ ರಸ್ತೆ ಕಾಮಗಾರಿ ಅವೈಜ್ಞಾನಿಕ: ಅರುಣ್ ಕುಮಾರ್ ಪುತ್ತಿಲ ಆರೋಪ

ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ರಸ್ತೆ ಕಾಂಕ್ರೀಟ್ ಮಾಡಲು ಒಂದು ತಿಂಗಳು ರಸ್ತೆ ಬಂದ್ ಮಾಡಿದರೂ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದಾರೆ ಎಂದು ಪುತ್ತಿಲ ಪರಿರವಾರ ಸೇವಾ ಟ್ರಸ್ಟ್ ನ ಸ್ಥಾಪಕ ಅರುಣ್‌ ಕುಮಾ‌ರ್ ಪುತ್ತಿಲ ಅವರು ಆರೋಪಿಸಿದ್ದಾರೆ. ಅವರು ಸಾರ್ವಜನಿಕರು ಈ ರಸ್ತೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮನಗಂಡು ಜು.22 ರಂದು ಸಂಜೆ ಹಾರಾಡಿ ರಸ್ತೆಗೆ ಭೇಟಿ ನೀಡಿದರು. ಸ್ಥಳೀಯರು ವಾಹನ ಸವಾರರ ಸಮಸ್ಯೆಗಳನ್ನು ಆಲಿಸಿದ ಅವರು ಸ್ಥಳದಿಂದಲೇ ಪೋನ್ ಮೂಲಕ ಇಲಾಖಾಧಿಕಾರಿಗಳು ಮತ್ತು ಗುತ್ತಿಗೆದಾರ ವಿಜಯಾನಂದ…

Read More

ವಿದ್ಯಾರ್ಥಿಗಳ ಧ್ವನಿ ಹತ್ತಿಕ್ಕುವ ಉದ್ದೇಶದಿಂದ ದೌರ್ಜನ್ಯ- ಪ್ರೊ. ಫಣಿರಾಜ್

ಉಡುಪಿ: ಹೊಸದಿಲ್ಲಿಯಲ್ಲಿ ನೀಟ್ ಹಗರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಸಹಬಾಳ್ವೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ), ಎಸ್‌ಐಒ ಹಾಗೂ ಉಡುಪಿ ಜಿಲ್ಲಾ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಹಳೆ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಹಬಾಳ್ವೆ ಸಂಘಟನೆಯ ಚಿಂತಕ ಪ್ರೊ. ಫಣಿರಾಜ್, ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲದೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲಿನ ಬದ್ಧತೆಯೂ…

Read More

12 ವರ್ಷಗಳ ಹಿಂದಿನ ಕುಂಬಳೆ ದರೋಡೆ ಪ್ರಕರಣದ ಪ್ರಮುಖ ಆರೋಪಿ ಬಂಧನ

ಮಂಜೇಶ್ವರ : ಕುಂಬಳೆಯಲ್ಲಿ ಮನೆ ಯಜಮಾನ ಹಾಗೂ ಕುಟುಂಬವನ್ನು ಬಂಧಿಯನ್ನಾಗಿಸಿ 42 ಪವನ್ ಚಿನ್ನ ಮತ್ತು ಕಾಲು ಲಕ್ಷ ರೂಪಾಯಿ ದೋಚಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಲಾಗಿದೆ. ಕರ್ನಾಟಕ ಮೂಲದ ಸಂಭ್ಯ ಅಸೀಸ್ ಎಂಬ ಅಬ್ದುಲ್ ಅಸೀಸ್ (58) ಎಂಬಾತನನ್ನು ಕಾಸರಗೋಡು ಕ್ರೈಂ ಬ್ರಾಂಚ್ ತಂಡವು ಪುತ್ತೂರಿನಲ್ಲಿ ವಶಕ್ಕೆ ತೆಗೆದುಕೊಂಡಿದೆ. ​2012 ಡಿಸೆಂಬರ್ 22ರ ರಾತ್ರಿ ಈ ದರೋಡೆ ನಡೆದಿತ್ತು. ಕುಂಬಳ ಅನಿಲ್ ಕುಂಬ್ಳೆ ರಸ್ತೆಯ ವಾಸಿ, ಮಂಗಳೂರು ಟ್ರಾನ್ಸ್‌ಪೋರ್ಟ್ ಆಪರೇಟರ್ ರಾಜೇಶ್ ಶೆಣೈ (44)…

Read More

ಉಡುಪಿ: ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಉಡುಪಿ: ಆದಿ ಉಡುಪಿಯ ಮಧ್ವನಗರದಲ್ಲಿ ರಿಕ್ಷಾ ಚಾಲಕರೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತರನ್ನು ಆದಿಉಡುಪಿ ರಿಕ್ಷಾ ನಿಲ್ದಾಣದ ಸದಸ್ಯ ಸುರೇಂದ್ರ ಮಧ್ವನಗರ (42) ಎಂದು ಗುರುತಿಸಲಾಗಿದೆ. ಸರಳ ಸ್ವಭಾವದವರಾಗಿದ್ದ ಸುರೇಂದ್ರ ಅವರು ಸುಮಾರು ಒಂದು ವಾರದ ಹಿಂದಷ್ಟೇ ಹೊಸ ರಿಕ್ಷಾವನ್ನು ಖರೀದಿಸಿದ್ದರು. ಬುಧವಾರ ತಡರಾತ್ರಿ ಕುಟುಂಬದವರು ಮಲಗಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳು…

Read More

ರಾಮಮಂದಿರ ಕಾಣಿಕೆ ದುರ್ಬಳಕೆ ಆರೋಪ: ನೈತಿಕ ಹೊಣೆ ಪ್ರಧಾನಿ ಹೊರಬೇಕು – ಮಂಜುನಾಥ್ ಭಂಡಾರಿ

ಉಡುಪಿ: ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರೇ ಇಂದು ಭಕ್ತರು ಸಮರ್ಪಿಸಿದ ಕಾಣಿಕೆಗಳ ಹುಂಡಿಗೆ ಕೈ ಹಾಕಿದ್ದಾರೆ. ಇದರ ನೈತಿಕ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊರಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಆಗ್ರಹಿಸಿದರು. ನಗರದ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಯೋಧ್ಯೆಯ ಶ್ರೀರಾಮ ಮಂದಿರದಂತಹ ಧಾರ್ಮಿಕ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ದೇಶದ ರಾಜಕೀಯ ಚಿತ್ರಣವನ್ನು ಬದಲಾಯಿಸಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ರಾಮಮಂದಿರದ ಪ್ರತಿಷ್ಠಾಪನಾ ಪೂಜೆಯನ್ನು…

Read More

ಕಾರ್ಗಿಲ್ ವಿಜಯ ದಿವಸ: ಜು.26ರಂದು ಮಂಗಳೂರಿನಲ್ಲಿ T-55 ಯುದ್ಧ ಟ್ಯಾಂಕ್ ಅನಾವರಣ …!

ಮಂಗಳೂರು:ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜುಲೈ 26ರಂದು ನಗರದ ಕದ್ರಿ ಹಿಲ್ಸ್‌ನಲ್ಲಿರುವ ಯುದ್ಧ ಸ್ಮಾರಕದಲ್ಲಿ 1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ T-55 ಬ್ಯಾಟಲ್ ಟ್ಯಾಂಕ್‌ನ ಅನಾವರಣ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಪುಷ್ಪನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ (ಐಎಎಫ್) ವೆಟರನ್ ಶ್ರೀಕಾಂತ್ ಶೆಟ್ಟಿ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

Read More
error: Content is protected !!