ಓಣಂ ಹಬ್ಬ ಸನಿಹ ಹಿನ್ನಲೆ ಬೆಂಗಳೂರು ಮತ್ತು ಕೇರಳ ನಡುವೆ ಹೆಚ್ಚುವರಿ 90 ಬಸ್ ಸಂಚಾರ.
ಬೆಂಗಳೂರು: ಓಣಂ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ಕೇರಳದ ನಡುವೆ ಸಂಚಾರ ಮಾಡುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಒಂದು ವಿಶೇಷ ಘೋಷಣೆ ಮಾಡಿದೆ . ಸೆಪ್ಟೆಂಬರ್ 2 ರಿಂದ 4 ರವರೆಗೆ ಬೆಂಗಳೂರಿನಿಂದ ಕೇರಳದ ವಿವಿಧ ಪ್ರಮುಖ ನಗರಗಳಿಗೆ 90 ಕ್ಕೂ ಅಧಿಕ ಬಸ್ ಸೇವೆಗಳನ್ನು ನಿಗಮ ನಿರ್ವಹಿಸಲು ತೀರ್ಮಾನಿಸಿದೆ. ಓಣಂ ಹಬ್ಬದ ಹಿನ್ನಲೆಯಲ್ಲಿ ಊರಿಗೆ ಹೊರಡುವ ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು, ಸುಗಮ ಸಂಚಾರವನ್ನು ಕಲ್ಪಿಸಲು ಈ ನಿಲುವನ್ನು ತೆಗೆದುಕೊಳ್ಳಲಾಗಿದೆ. ಈ ಹೆಚ್ಚುವರಿ…