ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ನೆರವು,ಜೊತೆಗೆ ಯೋಗಕ್ಷೇಮ ವಿಚಾರಿಸಿದ ಲಂಚುಲಾಲ್ ಕೆ.ಎಸ್

ಸ್ವಾರ್ಥ ಹೆಚ್ಚುತ್ತಿರುವ ಮತ್ತು ಮಾನವೀಯತೆ ಮರೆಯಲಾಗುತ್ತಿರುವ ಕಾಲದಲ್ಲಿ, ಶಿಕ್ಷಣ ಬಯಸುವ ಮಗುವಿಗೆ ಶಿಕ್ಷಣ, ಕಂಕಣ ಕೂಡಿ ಬಂದಿರುವ ಮನೆಮಗಳಿಗೆ ಮದುವೆ, ಆರೋಗ್ಯದ ಸಮಸ್ಯೆಗಳನ್ನು ಹೊಂದಿರುವವನಿಗೆ ಚಿಕಿತ್ಸೆ ಇಂತಹ ಅನೇಕ ಮಹತ್ಕಾರ್ಯಗಳನ್ನು ಯಾವುದೇ ಪಲಾಷೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಮಾಡಿಕೊಂದು ಬಂದವರು ಶ್ರೀ ಲಂಚುಲಾಲ್ ಕೆ.ಎಸ್‌. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಕೇವಲ ಚಿಕಿತ್ಸೆ ವೆಚ್ಚಮಾತ್ರವಲ್ಲದೆ ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ಮಾಡುವುದು – ಜನರ ಗಮನ ಸೆಳೆಯಲು ಅಲ್ಲ, ಪ್ರಶಂಸೆಗಾಗಿ ಅಲ್ಲ, ಅದು ಅವರ ಹೃದಯದಿಂದ ಬಂದ ಕಾಳಜಿ.ಅವರು ಮಾಡಿದ…

Read More

ಕವಿ ಕಯ್ಯಾರರು

“ಬೆಂಕಿ ಬಿದ್ದಿದೆ ಮನೆಗೆ ಓಬೇಗ ಬನ್ನಿ “ಎಂದುಕರೆಕೊಟ್ಟ ಮಹಾನ್ ಚೇತನ.ಕನ್ನಡ ಸಾಹಿತ್ಯ ಲೋಕದ ಧೀಮಂತ ನಯನಗಡಿನಾಡ ಹೆಮ್ಮೆಯ ಕವಿಮನ. ಶೈಕ್ಷಣಿಕ ಕ್ಷೇತ್ರದಲ್ಲೂ ಮಹಾನ್ ಕ್ರಾಂತಿನಾಡು-ನುಡಿ, ಐಕ್ಯತೆ-ಪರಂಪರೆಯಲ್ಲೂ ಪ್ರೀತಿನುಡಿದಂತೆ ನಡೆದ ಅಪ್ಪಟ ಕನ್ನಡ ಪ್ರೇಮಿಸಾಧಿಸಿರುವಿರಿ ಕೃಷಿ ಕ್ಷೇತ್ರದಲ್ಲೂ ಪ್ರಗತಿನಿಮ್ಮ ಬದುಕು-ಬರಹಗಳೇ ನಮಗೆ ಸ್ಪೂರ್ತಿ. ಐಕ್ಯತೆಯ ಮಂತ್ರವ ‘ಐಕ್ಯಗಾನ’ದಿ ಪಸರಿಸಿದಿರಿಗಡಿನಾಡಿನ ಕಿಡಿಯಾಗಿ ಪ್ರಜ್ವಲಿಸಿದಿರಿದುಡಿತವೇ ನನ್ನ ದೇವರೆಂದು ಸಾರಿರುವಿರಿಕನ್ನಡಿಗರ ಮನೆ-ಮನದಿ ನೆಲೆಸಿರುವಿರಿ. ✍️ ಸುಜಿತ್.ಕುಮಾರ್, ಬೇಕೂರು.

Read More

ಹನಿಮೂನ್ ಗೆ ತೆರಳಿದ ಜೋಡಿ ನಾಪತ್ತೆ ಪ್ರಕರಣ ಇನ್ನೂ ಕಗ್ಗಂಟಾಗಿದೆ

ಯುವಕ ಶವವಾಗಿ ಪತ್ತೆಯಾದರೂ, ಯುವತಿ ವಿಚಾರ ಇನ್ನೂ ಪ್ರಶ್ನೆಯಾಗಿ ಉಳಿದಿದೆ ಇಂದೋರ್ ನಲ್ಲಿ ಸಾರಿಗೆ ವ್ಯವಹಾರ ಮಾಡುತಿದ್ದ ರಘುವಂಶಿ ಫ್ಯಾಮಿಲಿ.ಮನೆಯ ಪುತ್ರ ರಾಧಾ ರಘುವಂಶಿಯ ವಿವಾಹವು ಸೋನಮ್ ಎನ್ನುವ ಯುವತಿಯೊಂದಿಗೆ ಮೇ 11 ರಂದು ವಿವಾಹವಾಗಿತ್ತು.ಎರಡೂ ಕುಟುಂಬದ ಒಪ್ಪಿಗೆಯಿಂದಲೇ ಈ ವಿವಾಹ ನೆರವೇರಿತ್ತು. ವಿವಾಹ ನಂತರ ಅನಿಮೂನ್ ಗೆಂದು ಮೊದಲು ಕಾಶ್ಮೀರಕ್ಕೆ ತೆರಳುವ ಆಲೋಚನೆ ಮಾಡಿದ್ದರು. ಪೆಹಲ್ ಗಾವ್ ಘಟನೆಯ ನಂತರ ತಮ್ಮ ತೀರ್ಮಾನದಲ್ಲಿ ಬದಲಾವಣೆ ಮಾಡಿಕೊಂಡು ಅಸ್ಸಾಂ ಗೆ ತೆರಳಲು ನಿರ್ಧರಿಸಿ ಮೇ 20 ರಂದು…

Read More

ಮಂಜೇಶ್ವರದೆಲ್ಲೆಡೆ ಸಂಭ್ರಮದ ಬಕ್ರೀದ್ ಹಬ್ಬ

ಮಂಜೇಶ್ವರ: ಮಂಜೇಶ್ವರದ ಎಲ್ಲೆಡೆ ಶನಿವಾರ ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ಈದುಲ್ ಅಝ್ಹಾ(ಬಕ್ರೀದ್) ಅನ್ನು ಆಚರಿಸಲಾಗುತ್ತಿದೆ. ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಮುಸ್ಲಿಮರು ಮಸೀದಿ, ಈದ್ದಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಸಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಹಾಗೂ ನೆರೆಮನೆ, ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡುಬಂತು. ತೂಮಿನಾಡು ಅಲ್ ಫತಾಃ ಜುಮಾ ಮಸೀದಿ, ಕುಂಜತ್ತೂರು ಮಸ್ಜಿದ್ ನೂರ್, ದಾರುಸ್ಸಲಾಂ ಸಲಫಿ ಮಸೀದಿ, ಕುಂಜತ್ತೂರು ಜುಮಾ ಮಸೀದಿ, ಉದ್ಯಾವರ ಜುಮಾ ಮಸೀದಿ, ಪೊಸೋಟು…

Read More

ಅಧಿಕಾರಿಗಳ ನಿರ್ಲಕ್ಷ್ಯ ಮಂಜೇಶ್ವರ ರೈಲ್ವೆ ನಿಲ್ದಾಣ ಸಮೀಪದ ಸುರುಮಾ ತೋಡುಅವ್ಯವಸ್ಥೆಯ ಆಗರ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪವಿರುವ ಸುರುಮ ತೋಡು ಮಳೆಗಾಲಕ್ಕೆ ಮುಂಚಿತವಾಗಿ ಪಂಚಾಯತು ಅಧಿಕೃತರು ಶುಚೀಕರಿಸಲು ಮುಂದಾಗದ ಹಿನ್ನೆಲೆಯಲ್ಲಿ ಈ ಸಲ ಸುರಿದ ಮೊದಲ ಮಳೆಗೆ ಮಳೆ ನೀರು ಹರಿದು ಹೋಗಲು ಸೂಕ್ತವಾದ ತೋಡಿನ ಅಥವಾ ಚರಂಡಿ ವ್ಯವಸ್ಥೆಯನ್ನು ಕಲ್ಪಿಸದ ಹಿನ್ನೆಲೆಯಲ್ಲಿ ಸಮೀಪ ಪ್ರದೇಶದ ಮನೆಗಳು ಪ್ರಾರ್ಥನಾ ಮಂದಿರಗಳಿಗೆ ನೀರು ನುಗ್ಗಿ ಭಾರೀ ನಾಶ ನಷ್ಟ ಸಂಭವಿಸಿದೆ. ಮಳೆಗಾಲಕ್ಕೆ ಮೊದಲೇ ಪಂಚಾಯಿತು ವತಿಯಿಂದ ನಡೆಸಬೇಕಾದ ಶುಚೀಕರಣ ನಡೆದಿಲ್ಲ ಎಂಬುದು ಇಲ್ಲಿಯ ಸ್ಥಳೀಯರ ಆರೋಪ. ಜೊತೆಯಾಗಿ ಈ ಪ್ರದೇಶದ…

Read More

ಮುಳ್ಳೇರಿಯಾ ದಲ್ಲಿ ನಿಯಂತ್ರಣ ತಪ್ಪಿದ ಕಾರು ಮಗುಚಿ 2 ವರ್ಷದ ಮಗು ದಾರುಣ ಮೃತ್ಯು

ಮಂಜೇಶ್ವರ : ಮುಳ್ಳೇರಿಯ ಕಾರ್ಲೇ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಗುಚಿ ಸಂಭವಿಸಿದ ಅಪಘಾತದಲ್ಲಿ ಎರಡು ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದೆ. ಬೆಳ್ಳಿಗೆಯ ಎಂ. ಹರಿದಾಸ್ – ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ ಸಾವನ್ನಪ್ಪಿದ ಮಗು. ಪೇಟೆಗೆ ತೆರಳಿ ಮರಳುತ್ತಿರುವ ಮನೆ ಸಮೀಪ ಕಾರು ಸ್ಟಾರ್ಟ್ ಆಗದ ಹಿನ್ನಲೆಯಲ್ಲಿ ಕಾರನ್ನು ತಳ್ಳುತ್ತಿರುವ ಮಧ್ಯೆ ಕಾರು ದಿಢೀರ್ ಮುಂದಕ್ಕೆ ಚಲಿಸಿದಾಗ ಮಗು ಕಾರಿನಡಿಗೆ ಸಿಲುಕಿ ಈ ದುರ್ಘ ಸಂಭವಿಸಿದೆ. ಘಟನೆಯಲ್ಲಿ ತಾಯಿ ಹೊರಗೆ ಎಸೆಯಲ್ಪಟ್ಟರೂ ಸಣ್ಣಪುಟ್ಟ ಗಾಯಗಳೊಂದಿಗೆ…

Read More

ಹಿರಿಯ ಕಾಂಗ್ರೆಸ್ ನಾಯಕ ಕೆಪಿಸಿಸಿ ಮಾಜಿ ಅಧ್ಯಕ್ಷ ತೆನ್ನಾಲ ಬಾಲಕೃಷ್ಣ ಪಿಳ್ಳೈ ಇನ್ನಿಲ್ಲ

ತಿರುವನಂತಪುರ: ಕೇರಳದ ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ಕೆಪಿಸಿಸಿ ಅಧ್ಯಕ್ಷ ತೆನ್ನಲ ಬಾಲಕೃಷ್ಣ ಪಿಳ್ಳೆ(95)ನಿಧನರಾದರು.ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜವಾಗಿ ಅವರು ವಿಧಿವಶರಾದರು. ಮೂರು ಬಾರಿ ರಾಜ್ಯಸಭಾ ಸಂಸದ, ಎರಡು ಬಾರಿ ಶಾಸಕ, ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಕಾಂಗ್ರೆಸ್ಸಿನ ವರ್ಚಸ್ವೀ, ಸೌಮ್ಯ ನಾಯಕನೆಂದು ಜನಪ್ರಿಯರು. ಕೊಲ್ಲಂ ಜಿಲ್ಲೆಯ ಶೂರನಾಡ್ ನಿವಾಸಿಯಾದ ಅವರು ಸಹಕಾರಿ ರಂಗದ ಜನಪ್ರಿಯ ನಾಯಕ. 1931ರಲ್ಲಿ ಶೂರನಾಡಿನ ತೆನ್ನಲ ಮನೆಯ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದ್ದ ಅವರು ತಿರುವನಂತಪುರ ಎಂ.ಜಿ.ಕಾಲೇಜಿನಿಂದ ಬಿಎಎಸ್ಸಿ ಪದವೀಧರನಾಗಿ ಶೂರನಾಡ್…

Read More

ವಿಧವೆಯರನ್ನು ಮರುಮದುವೆಯಾಗುವುದೆಂದು ನಂಬಿಸಿ ವಂಚಿಸಿದಆರೋಪಿಯ ಬಂಧನ

ಕಾಸರಗೋಡು: ಮರು ಮದುವೆಗೆ ಬಯಸುತ್ತಿದ್ದ ವಿಧವೆ ಮಹಿಳೆಯರನ್ನು ಮದುವೆಯಾಗುವ ಭರವಸೆಯಿಂದ ಬಲೆಗೆ ಬೀಳಿಸಿ , ಅವರ ಜೊತೆ ಸುತ್ತಾಡಿ ಲೈಂಗಿಕವಾಗಿ ಬಳಸಿಕೊಂಡು ವಿಲಾಸಿ ಜೀವನ ನಡೆಸಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಕಾಸರಗೋಡು ವನಿತಾ ಪೋಲೀಸರು ಬಂಧಿಸಿದ್ದಾರೆ. ಕೇರಳದ ತೃಶ್ಶೂರು ಜಿಲ್ಲೆಯ ಕೈಪಮಂಗಲಂ ಕೂರಿಕಳ ನಿವಾಸಿ ಶೋಭಿ ಯಾನೆ ಪ್ರಶೋಬ್ (36)ಬಂಧಿತ ವ್ಯಕ್ತಿಯಾಗಿದ್ದಾನೆ. ಕಾಸರಗೋಡು ವನಿತಾ ಪೋಲೀಸ್ ಠಾಣಾ ವ್ಯಾಪ್ತಿಯ ಓರ್ವ ಮಹಿಳೆ ಜಿಲ್ಲಾ ಪೋಲೀಸ್ ವರಿಷ್ಠರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈತನ ಕುರಿತು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ….

Read More

ಸಂಪೂರ್ಣ ಹದಗೆಟ್ಟಿದ ವರ್ಕಾಡಿ ರಸ್ತೆ ಸ್ಥಳೀಯರ ಆಕ್ರೋಶ

ಮಂಜೇಶ್ವರ: ವರ್ಕಾಡಿ ಪಂಚಾಯತ್‌ ವ್ಯಾಪ್ತಿಯ 2 ಹಾಗೂ 15 ನೇ ವಾರ್ಡ್‌ಗಳಿಗೆ ಸೇರಿದ ಮುಡಿಮಾರ್ ಮತ್ತು ಸುಂಕದಕಟ್ಟೆಯನ್ನು ಹಾಗೂ ಕರ್ನಾಟಕದ ಗಡಿಯನ್ನು ಸುಲಭವಾಗಿ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದ್ದರೂ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಯಾರೂ ಇತ್ತ ಗಮನ ಹರಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಯನ್ನು ಅವಲಂಬಿಸಿ ಸುಮಾರು 250 ಕುಟುಂಬಗಳು ಇಲ್ಲಿ ವಾಸಿಸುತ್ತಿದೆ. ಈ ರಸ್ತೆ ಭಾರೀ ಶೋಚನೀಯಾವಸ್ಥೆಗೆ ತಲುಪಿದೆ. 15 ವರ್ಷಗಳ ಹಿಂದೆ ನಿರ್ಮಿಸಲಾದ ಈ ರಸ್ತೆಗೆ ಮರು ಡಾಮಾರೀಕರಣ ಮಾಡುವ ಎಲ್ಲಾ ಸಿದ್ಧತೆಗಳು…

Read More

ಪರಿಸರ ದಿನ

ಹಚ್ಚ ಹಸುರಿನ ನಡುವೆಮದುಮಗಳ ಸಿಂಗಾರದಂತೆಮಿನುಗುವಳು ಭೂದೇವಿ.ತಾನೂ ಬದುಕುವುದರೊಂದಿಗೆಇತರ ಜೀವಿಗಳಿಗೂಆಶ್ರಯತಾಣವಾಯಿತು ವೃಕ್ಷ. ಸುತ್ತಲಿನ ಪರಿಸರವುಮನುಜನಿಗೆ ವರವುಸ್ವಚ್ಛ ಪರಿಸರವೇಆರೋಗ್ಯದಾಯಕವು.ಪ್ರಕೃತಿಯು ಜೀವಿಗಳಿಗೆಅತಿ ಅಗತ್ಯವುನಾವು ಇಲ್ಲದಿರೆ ಇರುವುದುಪ್ರಕೃತಿಯುಪ್ರಕೃತಿಯು ಇಲ್ಲದಿರೆ ಮನುಜನಿಗೆಇರುವುದೇ ಉಳಿಗಾಲವು?ಇದನರಿತು ನಡೆದರೆಬದುಕು ಸುಂದರ ಪಯಣ.ಉಳಿಸೋಣ ಬೆಳೆಸೋಣಮರಗಿಡ ಬಳ್ಳಿಗಳಒಂದೇ ದಿನಕ್ಕಲ್ಲ ಪರಿಸರ ದಿನಪ್ರತಿದಿನವು ಇರಲಿಪರಿಸರ ಕಾಳಜಿಯು. ✍️..ಸುಜಿತ್ ಕುಮಾರ್ ಬೇಕೂರ್

Read More
error: Content is protected !!