ಆಧ್ಯಾತ್ಮಿಕ ಶೋಷಣೆ ಹಾಗೂ ವಾಮಾಚಾರದ ವಿರುದ್ಧ ಎಚ್ಚರಿಕೆಯ ಕರೆಗಂಟೆ
ಮಂಜೇಶ್ವರ: ಕೆಎನ್‌ಎಂ ಜಿಲ್ಲಾ ಸಮಿತಿಯ ವತಿಯಿಂದ ಕಳೆದ ನಾಲ್ಕು ತಿಂಗಳಿನಿಂದ “ಆಧ್ಯಾತ್ಮಿಕ ಶೋಷಣೆ ಹಾಗೂ ವಾಮಾಚಾರದ ವಿರುದ್ಧ” ಎಂಬ ಕಾರ್ಯಸೂಚಿಯಂತೆ ಆಯೋಜಿಸಿದ್ದ ಅಭಿಯಾನದ ಸಮಾರೋಪ ಅಧಿವೇಶನವು ಮಾನವ ಸಂಪತ್ತು ಮತ್ತು ಘನತೆಯನ್ನು ಶೋಷಿಸುವ ಸುಳ್ಳು ಆಧ್ಯಾತ್ಮಿಕತೆಯ ಪ್ರತಿಪಾದಕರ ಹಾಗೂ ಕಪಟ ಮಂತ್ರವಾದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ ಎಲ್ಲಾ ಆಧ್ಯಾತ್ಮಿಕ ಶೋಷಣೆಗಳನ್ನು ಕೊನೆಗೊಳಿಸುವಂತೆ ಕರೆ ನೀಡಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ. ಉಣ್ಣೀನ್ ಕುಟ್ಟಿ ಮೌಲವಿ ಸಮಾರೋಪ ಸಮಾರಂಭ ಉದ್ಘಾಟಿಸಿದರು. ಆಧ್ಯಾತ್ಮಿಕ ಶೋಷಣೆ ದಿನೇ ದಿನೇ…