ಬೇಕೂರಿನಲ್ಲಿ ಪೈಪ್‌ಲೈನ್ ಸ್ಫೋಟ – ಮಿನಿ ಪ್ರವಾಹ, ಮನೆಗೆ ಹಾನಿ, ನೀರು ಸರಬರಾಜು ಸ್ಥಗಿತದ ಭೀತಿ
ಬೇಕೂರು: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ಬೇಕೂರಿನ ಜಲಸಂಪನ್ಮೂಲ ಘಟಕದಲ್ಲಿ ಇಂದು ಬೆಳಗ್ಗೆ ಭಾರೀ ಅವಘಡ ಸಂಭವಿಸಿದೆ. ಬೇಕೂರು ಮಿಲ್ ಸಮೀಪದಲ್ಲಿರುವ ಚೆಂಬರ್‌ನಲ್ಲಿ ಪೈಪ್‌ಲೈನ್ ತುಂಡಾಗಿ, ದೊಡ್ಡ ಪ್ರಮಾಣದ ನೀರು ಹೊರಹರಿದು ಮಿನಿ ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಇಂದು ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಸಂಭವಿಸಿದ್ದು, ಸ್ಥಳೀಯ ಸ್ಕ್ರಾಪ್ ಅಂಗಡಿ ಮಾಲೀಕ ಗಫೂರ್ ಅವರ ಮನೆಗೆ ನೀರು ನುಗ್ಗಿ, ಹಿತ್ತಲಿನಲ್ಲಿದ್ದ ಮರಗಿಡಗಳು ಹಾಗೂ ಅನೇಕ ವಸ್ತುಗಳು ಸಂಪೂರ್ಣ…
