ಉಡುಪಿ: ಗಣರಾಜ್ಯೋತ್ಸವ ದಿನದಂದೇ ಯೋಧನಿಗೆ ಅವಮಾನ- ವ್ಯಾಪಕ ಆಕ್ರೋಶ

ಉಡುಪಿ: ದೇಶಕ್ಕಾಗಿ ಹೋರಾಡಿದ ನಿವೃತ್ತ ಸೈನಿಕನಿಗೆ ಗಣರಾಜ್ಯೋತ್ಸವ ದಿನದಂದೇ ಅವಮಾನಪಡಿಸಿದ ಘಟನೆ ಬ್ರಹ್ಮಾವರ ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ನಡೆದಿದೆ. ಸಾಸ್ತಾನ ಟೋಲ್ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ನೀಡಲಾಗುವ ಟೋಲ್‌ ವಿನಾಯಿತಿ ಪತ್ರವನ್ನು ತೋರಿಸಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ನಿವೃತ್ತ ಸೈನಿಕ ಶ್ಯಾಮರಾಜ್ ಅವರು ವಿಡಿಯೋ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಶ್ಯಾಮರಾಜ್ ಅವರು ಇವಿ-21ನೇ ಪ್ಯಾರಾ ಸ್ಪೆಷಲ್…

Read More

ತಂದೆಗೆ ಚೂರಿಯಿಂದ ಇರಿದು, ಬಳಿಕ ಕೋವಿಯಿಂದ ಗುಂಡು ಹಾರಿಸಿಕೊಂಡು ಮಗ ಆತ್ಮಹತ್ಯೆ

ಕಡಬ: ಕ್ಷುಲ್ಲಕ ಕಾರಣಕ್ಕೆ ತಂದೆಯೊಂದಿಗೆ ಜಗಳವಾಡಿದ ಮಗನೊಬ್ಬ, ತಂದೆಗೆ ಚೂರಿಯಿಂದ ಇರಿದು ಬಳಿಕ ತಾನೂ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಅವರ ಪುತ್ರ, ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಮೋಕ್ಷ ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ತಂದೆ ವಸಂತ ಅಮೀನ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲತಃ ಕೇರಳದವರಾದ ವಸಂತ ಅಮೀನ್…

Read More

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ ಭಾಗಶಃ ಹಾನಿ ಉಂಟಾಗಿದೆ, ಅತೀವೇಗದ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುತ್ತಾರೆ.

Read More

ಜನವರಿ 26ರಿಂದ ಬೃಹತ್ ಕಮ್ಯುನಿಟಿ ಫೆಸ್ಟ್ , ಸಪ್ತ ದಿನಗಳ ಕ್ರೀಡಾ ಕೂಟ, ಉದ್ಯೋಗ ಮೇಳ, ರಕ್ತದಾನ ಶಿಬಿರ ಹಾಗೂ ಫುಡ್ ಫೆಸ್ಟ್ ಮೆರುಗಿಗೆ ಕಡಲ ನಗರಿ ಉಳ್ಳಾಲ ಸಾಕ್ಷಿ…. !

ಮಂಗಳೂರು:ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ವತಿಯಿಂದ ನಗರದ ಉಳ್ಳಾಲದಲ್ಲಿ ಏಳು ದಿನಗಳ ಕಾಲ ಬೃಹತ್ ಕಮ್ಯುನಿಟಿ ಫೆಸ್ಟ್ ನಡೆಯಲಿದೆ. ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜನವರಿ 26ರಿಂದ ಫೆ:01 ರ ತನಕ ಏಳು ದಿನಗಳ ವಿವಿಧ ಕ್ರೀಡಾಕೂಟಗಳ ಜೊತೆಗೆ ಉದ್ಯೋಗ ಮೇಳ, ರಕ್ತದಾನ ಶಿಬಿರ ಹಾಗೂ ಆಹಾರ ಮೇಳ ನಡೆಯಲಿದ ಎಂದು ಸಂಸ್ಥೆಯ ರಾಜ್ಯ ಅಧ್ಯಕ್ಷರಾದ ಸಿರಾಜ್ ಎರ್ಮಾಳ್ ತಿಳಿಸಿದರು. ಅವರು ಖಾಸಗಿ ಮಾಲ್ ನಲ್ಲಿ ನಡೆಸಿದ…

Read More

ಮಂಜೇಶ್ವರ ಶಾಸಕ ಮುಟ್ಟಿದೆಲ್ಲ… ಮಂಜೇಶ್ವರದ ಜನತೆಗೆ ವಿರುದ್ಧವಾಗುತ್ತಿದೆ: ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ

ಮಂಜೇಶ್ವರ ಶಾಸಕ. ಮುಟ್ಟಿದೆಲ್ಲ… ಮಂಜೇಶ್ವರದ ಜನತೆಗೆ ವಿರುದ್ಧವಾಗುತ್ತಿದೆ……ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.ಕರ್ನಾಟಕ ಕಾಂಗ್ರೆಸ್ ಸರಕಾರದ ksrtc ಬಸ್ ದರ ಕಾಸರಗೋಡು ಜಿಲ್ಲೆಗೆ ಅಧಿಕ ಮಾಡಿದಾಗ… ಕರ್ನಾಟಕ ದ ತನ್ನದೇ ಮಿತ್ರ ಮಂತ್ರಿಗಳು ಶಾಸಕರನ್ನು, ಕರ್ನಾಟಕ ಸ್ಪೀಕರನ್ನು ಕಂಡು ಕರ್ನಾಟಕ ksrtc ಬಸ್ ದರ ಇಳಿಸಲಾಗದೆ…. ಕಾಂಗ್ರೆಸ್ ನೇತೃತ್ವ ದ ಕರ್ನಾಟಕ ಸರಕಾರದ ವಿರುದ್ಧ ಒಂದು ಮಾತು ಆಡಲಾಗದ ಮಂಜೇಶ್ವರ ಶಾಸಕ…ಅಸಹಾಯಕ ಸ್ಥಿತಿ ಎಂದು ಬಿಜೆಪಿ ಅಭಿಪ್ರಾಯ ಪಟ್ಟಿದೆ. ಕೇರಳ ಸಾರಿಗೆ…

Read More

ಮಲಬಾರಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತೀಯಾ ಸಮಾಜ ಬೇಡಿಕೆ

ಕುಂಬಳೆ: ಮಲಬಾರಿನ ಮೂರು ವಿಧಾನಸಭಾ ಕ್ಷೇತ್ರಗಳನ್ನು ತೀಯಾ ಸಮುದಾಯಕ್ಕೆ ಮೀಸಲಿರಿಸಬೇಕು, ಈಳವ ರಿಂದ ಪ್ರತ್ಯೇಕಿಸಿ ತೀಯ ಸಮಾಜವನ್ನು ಪ್ರತ್ಯೇಕ ಜಾತಿಯಾಗಿ ನೋಂದಾಯಿಸಬೇಕು,ಎನ್ನುವ ಬೇಡಿಕೆ ಮುಂದಿಟ್ಟು ತೀಯಾ ಕ್ಷೇಮ ಸಭಾ ಆಂದೋಲನ ಆರಂಭಿಸಿದೆ.ಹೋರಾಟದ ಭಾಗವಾಗಿ ಹಕ್ಕುಘೋಷಣಾ ಉತ್ತರ ವಲಯ ವಾಹನ ಪ್ರಚಾರ ಯಾತ್ರೆ ರವಿವಾರ ಕುಂಬಳೆಯಲ್ಲಿ ಆರಂಭಗೊಂಡಿತು. ಕುಂಬಳೆ ಶ್ರೀ ಸದ್ಗುರು ನಿತ್ಯಾನಂದ ಮಠದಲ್ಲಿ ವಿಶೇಷ ಪೂಜಾ ಸಂಕಲ್ಪಗಳಿಂದ ಪ್ರಾರ್ಥನೆ ಸಲ್ಲಿಸಿ ಹೊರಟ ಪ್ರಚಾರ ಯಾತ್ರೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು….

Read More

ಕುತ್ಯಾಳ ನವಜೀವನ ಸಮಿತಿ ಕೂಡ್ಲು ವತಿಯಿಂದ ಶ್ರಮದಾನ

ಕಾಸರಗೋಡು ಸಮೀಪದ ನಡುಹಿತ್ತಿಲು ಶ್ರೀ ರಕ್ತೇಶ್ವರಿ ದೇವಸ್ಥಾನ ಅಣಂಗೂರಿನಲ್ಲಿ ನಾಲ್ಕನೇ ವರ್ಷದ ಪುನರ್ ಪ್ರತಿಷ್ಠಾ , ವಾರ್ಷಿಕ ಮಹೋತ್ಸವ ಹಾಗೂ ಧರ್ಮನೇಮೋತ್ಸವ ಫೆಬ್ರವರಿ 6 , 7 , 8 ರಂದು ನಡೆಯಲಿದ್ದು . ಇದರ ಪೂರ್ವತಯಾರಿ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಕಾಸರಗೋಡು , ನವಜೀವನ ಸಮಿತಿಯಲ್ಲಿ ಒಂದಾದ ಕುತ್ಯಾಳ ನವಜೀವನ ಸಮಿತಿ ಕೂಡ್ಲು ವತಿಯಿಂದ ಶ್ರಮದಾನ ಸೇವೆಯು ನಿನ್ನೆ ನಡೆಯಿತ್ತು . ಈ ಸಂದರ್ಭದಲ್ಲಿ ಕಾಸರಗೋಡು ವಲಯದ ಮೇಲ್ವಿಚಾರಕರಾದ…

Read More

ಉಪ್ಪಳ ಬಪ್ಪಾಯತ್ತೋಟಿಯಲ್ಲಿ ಮದುವೆಗೆ ಸಿದ್ಧವಾಗಿದ್ದ ಮನೆಯಲ್ಲಿ ಭಾರೀ ಕಳ್ಳತನ; 23.5 ಪವನ್ ಚಿನ್ನ ನಾಪತ್ತೆ

ಉಪ್ಪಳ: ಬಪ್ಪಾಯತ್ತೋಟಿಯಲ್ಲಿ ಮದುವೆ ನಡೆಯಲು ಸಿದ್ಧವಾಗಿದ್ದ ಮನೆಯಲ್ಲಿ ಭಾರೀ ಕಳ್ಳತನ ನಡೆದಿದೆ.ಅಲಮಾರೆಯಲ್ಲಿ ಇಡಲಾಗಿದ್ದ 23.5 ಪವನ್ ತೂಕದ, ಅಂದಾಜು ₹23 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದಾಗಿ ದೂರು ದಾಖಲಾಗಿದೆ.ಜನವರಿ 15ರಂದು ಮಧ್ಯಾಹ್ನ 2 ಗಂಟೆಯಿಂದ ಜನವರಿ 21ರಂದು ಸಂಜೆ 6 ಗಂಟೆಯ ನಡುವಿನ ಯಾವುದೇ ಸಮಯದಲ್ಲಿ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಪ್ಪಾಯತ್ತೋಟಿಯ ರುಕ್ಸಾನ (44) ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಳವಾದ ಚಿನ್ನವು ರುಕ್ಸಾನ…

Read More

2026ನೇ ಸಾಲಿನ “ಪದ್ಮ ಪ್ರಶಸ್ತಿ” ಪ್ರಕಟ: ಕರ್ನಾಟಕದ ಅಂಕೇಗೌಡ, ಡಾ|ಸುರೇಶ್ ಹನಗವಾಡಿ, ಸುಶೀಲಮ್ಮ ಸೇರಿ ಒಟ್ಟು 131 ಮಂದಿ ಆಯ್ಕೆ.

ನವದೆಹಲಿ : 77ನೇ ಗಣರಾಜ್ಯೋತ್ಸವದ ಮುನ್ನ ದಿನದಂದು ಭಾರತ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪ್ರತಿಷ್ಠಿತ ಪದ್ಮ ಪ್ರಶಸ್ತಿ 2026 ಅನ್ನು ಘೋಷಿಸಿದೆ. ಸಾರ್ವಜನಿಕ ಸೇವೆ, ಕಲೆ, ಸಾಹಿತ್ಯ, ವಿಜ್ಞಾನ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ ಮತ್ತು ಇನ್ನೀತರ ಅಸಾಧಾರಣ ಮತ್ತು ವಿಶಿಷ್ಟ ಕೊಡುಗೆಗಳನ್ನು ನೀಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ,ಈ ವರ್ಷದ ಪದ್ಮ ಪ್ರಶಸ್ತಿಗೆ ಕೇಂದ್ರ ಸರ್ಕಾರವು ಭಾರತದ ಉದ್ದಗಲಕ್ಕೂ ಇರುವ ವಿವಿಧ ರೀತಿಯ ಪ್ರಚಾರವಿಲ್ಲದ ವೀರರನ್ನು ಗುರುತಿಸಿದೆ. ಇವರಲ್ಲಿ ಹಿಂದುಳಿದ ಮತ್ತು…

Read More

ಕನ್ನಡ ಭವನ ನೇತೃತ್ವದ : ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026. ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ.

ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ದಿನಾಂಕ 22.02.2026. ಭಾನುವಾರ ಬೆಳಿಗ್ಗೆ ಸಾಮೂಹಿಕ ಸಂಕೀರ್ತನೆ, 9.30 ಗೆ ಉದ್ಘಾಟನೆ ಗೊಳ್ಳಲಿರುವ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ರ ಸರ್ವಾಧ್ಯಕ್ಷರಾಗಿ, ಕರ್ನಾಟಕ ಸರಕಾರದ ಪ್ರತಿಷ್ಠಿತ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಕೂಡ್ಲು ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರಗಳಲ್ಲಿ ಅವಿರತ ದುಡಿಯುತ್ತಿರುವ ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು ಇವರು ಕಾಸರಗೋಡು…

Read More
error: Content is protected !!