ಮಂಗಳೂರು ಮಿನಿ ಬಾಂಗ್ಲಾ ಆಗುವ ಮೊದಲು ಎಚ್ಚೆತ್ತುಕೊಳ್ಳಿ ಎಂದು ಪ್ರಚೋದನಕಾರಿ ವಾಟ್ಸಾಪ್‌ ಪೋಸ್ಟ್ ಮಾಡಿದ ಇಬ್ಬರ ವಿರುದ್ಧ ಎಫ್‌ಐಆರ್

ಮಂಗಳೂರು ಮಿನಿ ಬಾಂಗ್ಲಾ ಆಗುವ ಮೊದಲು ಎಚ್ಚೆತ್ತುಕೊಳ್ಳಿ ಎಂದು ಪ್ರಚೋದನಕಾರಿ ವಾಟ್ಸಾಪ್‌ ಪೋಸ್ಟ್ ಮಾಡಿದ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಮಂಗಳೂರು ಮಿನಿ ಬಾಂಗ್ಲಾ ಆಗುವ ಮೊದಲು ಎಚ್ಛೆತ್ತುಕೊಳ್ಳಿ ಹಿಂದುಗಳೇ ಎಂದು ವ್ಯಕ್ತಿಯ ವಾಟ್ಸಾಪ್‌ ಪೋಸ್ಟ್ ಪೋಸ್ಟ್ ವೈರಲ್ ಆಗಿದ್ದು ಇದೀಗ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಂಗಳೂರಿನ ರಾವ್ ಅಂಡ್ ರಾವ್ ಸರ್ಕಲ್ ರಿಕ್ಷಾ ಸ್ಟಾಂಡ್ ಹಿಂದೆ ಬಂಗಾಳಿ ಕ್ಯಾಂಟೀನ್ ಎಂದು ಬೋರ್ಡ್ ಹಾಕಿ ಅದರ ಅಕ್ಕ ಪಕ್ಕ ಕೆಲವು ಅನಧಿಕೃತ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತ…

Read More

ಅತ್ತಾವರ ಅರಸು ಮುಂಡಂತಾಯ ದೈವಸ್ಥಾನದಲ್ಲಿ ₹21 ಲಕ್ಷ ವೆಚ್ಚದ ಇಂಟರ್ಲಾಕ್ ಕಾಮಗಾರಿಗೆ ಗುದ್ದಲಿ ಪೂಜೆ

ಪವಿತ್ರ ಕಾರ್ಣಿಕ ಕ್ಷೇತ್ರ ಅತ್ತಾವರ ಅರಸು ಮುಂಡಂತಾಯ ದೈವಸ್ಥಾನದಲ್ಲಿ ಮಂಗಳೂರಿನ ನೆಚ್ಚಿನ ಶಾಸಕರಾದ ವೇದ ವ್ಯಾಸ ಕಾಮತ್ ಅವರ ಶಾಸಕರ ಅನುದಾನದಲ್ಲಿ 21 ಲಕ್ಷ ವೆಚ್ಚದಲ್ಲಿ ನೂತನವಾಗಿ ಇಂಟರ್ಲಾಕ್ ಅಳವಡಿಸುವ ಕಾರ್ಯಕ್ರಮದ ಗುದ್ದಲಿ ಪೂಜೆಯು ಇಂದು ದೈವಸ್ಥಾನದ ವಟಾರದಲ್ಲಿ ನಡೆಯಿತು . ದೈವಸ್ಥಾನದ ಅನುವಂಶಿಕ ಆಡಳಿತ ಮುಖ್ಯಸ್ಥರಾದ ವಿದ್ಯಾಧರ ಕೆ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು .ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ವೇದವ್ಯಾಸ್ ಕಾಮತ್, ಮಾಜಿ ಕಾರ್ಪೊರೇಟರ್ ದಿವಾಕರ್ ಪಾಂಡೇಶ್ವರ . ಮೋಹನ್ ಕುಮಾರ್ ,ಗೋಪಾಲಕೃಷ್ಣ ಭಟ್…

Read More

ರಜತ ಸಂಭ್ರಮದಲ್ಲಿ ಕಾಸರಗೋಡಿನ ಕನ್ನಡ ಭವನನಾಡು – ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ ಜ.18ರಂದು

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ, ನಾಡು-ನುಡಿ ಹಬ್ಬ, ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಕಾರ್ಯಕ್ರಮವು ಇದೇ ಜ.18ರಂದು ನಡೆಯಲಿದೆ. ಬೆಳಗ್ಗೆ 7.30ರಿಂದ ಕಾಸರಗೋಡಿನ ವಿಶ್ವಕರ್ಮ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಧಾರ್ಮಿಕ ಮುಖಂಡರಾದ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸುವರು. ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ ವಾಮನ್…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕುರಿತು ಸುಳ್ಳು ಸುದ್ದಿಗಳಿಗೆ ಒಕ್ಕೂಟದಿಂದ ಸ್ಪಷ್ಟೀಕರಣ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕುರಿತು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪದಧಿಕಾರಿಗಳು ಸ್ಪಷ್ಟಿಕರಣ ನೀಡಿದ್ದಾರೆ.ದಿನಾಂಕ 12-01-2026 ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.)ದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಪ್ರಧಾನ ಕಛೇರಿಯಲ್ಲಿ ಪದಾಧಿಕಾರಿಗಳ ಸಭೆ ಜರಗಿಸಲಾಯಿತು.ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಮತ್ತು ಲೆಕ್ಕಪತ್ರಗಳ ನಿರ್ವಹಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದರ ಬಗ್ಗೆ ಖಂಡಿಸಲಾಯಿತು. ಪ್ರಧಾನ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿಯವರು…

Read More

ದೇವಸ್ಥಾನಕ್ಕೆ ಹೊರಟ ಬಾಲಕನ ಅಸಹಜ ಸಾವು: ತಲೆಗೆ ಮೂರು ಗಂಭೀರ ಗಾಯಗಳು, ಪ್ರಕರಣವನ್ನು ಕೊಲೆ ಎಂದು ದಾಖಲಿಸಿ ತನಿಖೆ

ಮಂಗಳೂರು : ಬೆಳ್ತಂಗಡಿ ಸಮೀಪ ದೇವಸ್ಥಾನಕ್ಕೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಓಡಿಲ್ನಳ ಗ್ರಾಮದ ಸಂಬೋಳ್ಯ ನಿವಾಸಿ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ.ಈ ವೇಳೆ ಬಾಲಕನ ತಲೆಗೆ ಮೂರು ಬಲವಾದ ಪೆಟ್ಟು ಬಿದ್ದಿರುವ ಗುರುತು ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಸಮಗ್ರ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಕುರಿತ ಮಾಹಿತಿಗಳು ಲಭ್ಯವಾಗುತ್ತಿದ್ದು, ಬಾಲಕನ ತಲೆಗೆ ಕತ್ತಿ ಅಥವಾ ಇನ್ಯಾವುದೋ ಆಯುಧದಿಂದ ಬಲವಾದ ಮೂರು ಹೊಡೆತಗಳು ಬಿದ್ದಿವೆ….

Read More

ಮಂಜೇಶ್ವರ: ವಿದ್ಯುತ್ ಕಂಬಕ್ಕೆ ತಾಗಿದ್ದ ಮರ ತೆರವು ವೇಳೆ ದುರ್ಘಟನೆ – ಕೂಲಿ ಕಾರ್ಮಿಕ ಸಾವು

ಮಂಜೇಶ್ವರ: ಕುಂಜತ್ತೂರು ತೂಮಿನಾಡು ಲಕ್ಷಂವೀಡು ಕಾಲನಿಯಲ್ಲಿ ವಿದ್ಯುತ್ ಕಂಬಕ್ಕೆ ತಾಗಿಕೊಂಡಿದ್ದ ಮರವೊಂದನ್ನು ಮುರಿದು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಭೀಕರ ದುರ್ಘಟನೆ ಸಂಭವಿಸಿದೆ. ಮರವನ್ನು ಕಡಿದು ತೆಗೆಯುತ್ತಿರುವ ಮಧ್ಯೆ ಅದರ ಪಕ್ಕದಲ್ಲೇ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನ ಮೇಲೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಕೂಲಿ ಕಾರ್ಮಿಕನನ್ನು ತಕ್ಷಣ ಚಿಕಿತ್ಸೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಮೃತ ಕಾರ್ಮಿಕನು ಉತ್ತರ ಪ್ರದೇಶ ಮೂಲದ ವಿರೇಂದ್ರ ಎಂದು ಗುರುತಿಸಲಾಗಿದೆ.ಘಟನೆಯ ಬಳಿಕ ವಾರ್ಡ್ ಸದಸ್ಯರಾದ…

Read More

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 200 ವರ್ಷ ಹಳೆಯ ಹನುಮಾನ್ ದೇವಾಲಯದಲ್ಲಿ ವಿಗ್ರಹಗಳ ಸುತ್ತ ನಿರಂತರ ಪ್ರದಕ್ಷಿಣೆ ನಡೆಸುತ್ತಿರುವ ನಾಯಿ; ಸ್ಥಳೀಯರಲ್ಲಿ ಅಚ್ಚರಿ

ಉತ್ತರ ಪ್ರದೇಶ : ಬಿಜ್ನೋರ್ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಾಯಿಯೊಂದು ದೇವಸ್ಥಾನದೊಳಗೆ ಹನುಮಾನ್ ಮತ್ತು ಮಾ ದುರ್ಗಾ ದೇವರ ವಿಗ್ರಹಗಳನ್ನು ನಿರಂತರವಾಗಿ ಸುತ್ತುತ್ತಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.ನಾಯಿಯು ಹಲವಾರು ಗಂಟೆಗಳ ಕಾಲ ನಿರಂತರವಾಗಿ ವಿಗ್ರಹಕ್ಕೆ ಪ್ರದಕ್ಷಿಣೆ ನಡೆಸುತ್ತಿರುವ ದೃಶ್ಯವು ಸ್ಥಳೀಯರನ್ನು ಆಶ್ಚರ್ಯಚಕಿತಗೊಳಿಸಿದೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ನಾಯಿ ಮೊದಲ ಮೂರು ದಿನಗಳ ಕಾಲ ಹನುಮಂತನ ವಿಗ್ರಹವನ್ನು ಸುತ್ತುತ್ತಿತ್ತು.ಬುಧವಾರ ಅದು ಮಾ ದುರ್ಗಾ ಮಾತೆಯ ವಿಗ್ರಹವನ್ನು ಸುತ್ತಲು ಪ್ರಾರಂಭಿಸಿತು. ನಾಯಿ ಯಾವುದೇ ಆಹಾರವನ್ನು ಸೇವಿಸದೆ, ನೀರನ್ನೂ ಕುಡಿಯದೆ…

Read More

ಉದ್ಯಾವರ ಮಂಜೇಶ್ವರ ಶ್ರೀ ಧೂಮವತಿ ಬಂಟ ದೈವಸ್ಥಾನದ ವಾರ್ಷಿಕೋತ್ಸವ ಜಾತ್ರೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ: ಶ್ರೀ ಧೂಮವತಿ ಬಂಟ ದೈವಸ್ಥಾನ ಉದ್ಯಾವರ ಮಂಜೇಶ್ವರ ಇದರ ಫೆಬ್ರವರಿ 21-2026ರಂದು ನಡೆಯುವ ವಾರ್ಷಿಕೋತ್ಸವದ ಜಾತ್ರೆ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ದೈವಸ್ಥಾನ ಅಧ್ಯಕ್ಷ ವಿಜಯ ಕುಮಾರ್ ಉಳ್ಳಾಲ್ ವಹಿಸಿದ್ದರು. ಗೌರವ ಅಧ್ಯಕ್ಷ ವಿಶ್ವನಾಥ್ ಉಚ್ಚಿಲ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು ಕಾರ್ಯಕ್ರಮದಲ್ಲಿ ದೈವಸ್ಥಾನ ಗುರಿಕಾರರಾದ ನಾರಾಯಣ ಗುರಿಕಾರ.ಉಪಾಧ್ಯಕ್ಷಪದ್ಮನಾಭ ಪೊಯ್ಯೇ. ಮಾದವ ಉದ್ಯಾವರ. ಖಜಾಂಚಿ ವಸಂತ ಉಚ್ಚಿಲ್. ಕನಿಲ ಶ್ರೀ ಭಗವತಿ ಕ್ಷೇತ್ರದ ಪುನರ್ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು. ರಾಘವ….

Read More

ಮುಸ್ಲಿಂ ಮಹಿಳೆಯರು ಇತಿಹಾಸದಲ್ಲಿ ಅಳಿಸಲಾಗದ ಸಾಧನೆಯನ್ನು ಮಾಡಿದ್ದಾರೆ : ಖ್ಯಾತ ಸಾಹಿತಿ ಡಾ. ಶರೀಫಾ ಕೆ

ಮಂಗಳೂರು:ಮುಸ್ಲಿಂ ಮಹಿಳೆಯರು ಇತಿಹಾಸದಲ್ಲಿ ಹಲವು ಸಾಧನೆಗಳಲ್ಲಿ ರಾಜ್ಯ ದೇಶದಲ್ಲೇ ಅಮೂಲಾಗ್ರವಾದ ಸಾಧನೆಯನ್ನು ಮಾಡಿದ್ದಾರೆ ಎಂದು ಖ್ಯಾತ ಸಾಹಿತಿ ಡಾ. ಶರೀಫಾ ಕೆ. ನಗರದ ಪುರಭವನದಲ್ಲಿ ಇಂದು ಆಯೋಜಿಸಿದ್ದ ಅನುಪಮ ಮಹಿಳಾ ಮಾಸಿಕದ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ವಿಶೇಷ ಸಂಚಿಕೆಯನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು . ನಮ್ಮ ಕಣ್ಣ ಮುಂದೆಯೇ ಅದೆಷ್ಟೋ ಪತ್ರಿಕೆಗಳು ನೆಲಕಚ್ಚಿರುವುದನ್ನು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರಿಗೆ ಮನೆಯಿಂದ ಹೊರಬರಲು ಅವಕಾಶ ವಿರಳವಾಗಿತ್ತು ಕಾಲಘಟ್ಟದಲ್ಲಿ, ಹಿಜಾಬ್ ಧರಿಸಿದ ಮಹಿಳೆಯ ನೇತೃತ್ವದಲ್ಲಿ ಅನೇಕ ಎಡರು-ತೊಡರುಗಳ…

Read More

ನಗ್ರಿ–ಮಿತ್ತಮಜಲು ₹1.3 ಕೋಟಿ ವೆಚ್ಚದ ಹೊಸ ಕಾಂಕ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತ

ಶ್ರೀ ಶಾರದಾ ಭಜನಾ ಮಂದಿರ ನಗ್ರಿ ಇಲ್ಲಿಂದ ಶ್ರೀ ಮಿತ್ತಮಜಲು ಕ್ಷೇತ್ರದ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು 1.3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೊಸ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸ್ಥಳೀಯರೊಂದಿಗೆ ವೀಕ್ಷಣೆ ನಡೆಸಿದ ಬಳಿಕ ಸಾರ್ವಜನಿಕರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು,ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ರಸ್ತೆ ಸಂಪರ್ಕವೂ ಒಂದಾಗಿದ್ದು, ಗ್ರಾಮದ ಮೂಲೆಮೂಲೆಗಳಿಗೆ ಸುಸಜ್ಜಿತವಾದ ರಸ್ತೆಯ ನಿರ್ಮಾಣ ಮಾಡಿ ಸಂಪರ್ಕ ಕಲ್ಪಿಸಿದರೆ ಗ್ರಾಮದ ಅಭಿವೃದ್ಧಿ…

Read More
error: Content is protected !!