ಖಾಸಗಿ ಬಸ್ ಮಾಲಿಕರ ಸಂಕಷ್ಟ: ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ
ಕಾಸರಗೋಡು : ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ ಖಾಸಗಿ ಬಸ್ ಮಾಲೀಕರು ಎದುರಿಸುತ್ತಿರುವ ನಷ್ಟದ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರವು ಮಾಜಿ ಸಾರಿಗೆ ಆಯುಕ್ತ ಕೆ. ಪದ್ಮಕುಮಾರ್ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ. ತಿರುವನಂತಪುರದಲ್ಲಿ ಸಚಿವ ಸಿ.ಪಿ. ಜೋನ್ ಅವರು ಖಾಸಗಿ ಬಸ್ ಮಾಲೀಕರ ಸಂಘಟನೆಗಳೊಂದಿಗೆ ನಡೆಸಿದ ಸಭೆಯಲ್ಲಿ, ಬಸ್ ಮಾಲೀಕರ ಸಮಸ್ಯೆಗಳನ್ನು ಪರಿಹರಿಸಲು ಹಲವು ಕ್ರಮಗಳ ಭರವಸೆ ನೀಡಿದರು. ತೆರಿಗೆ ಪಾವತಿಯಲ್ಲಿ ಸರಳೀಕರಣ ಮತ್ತು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅನುಮತಿ…
