ಅಯ್ಯಪ್ಪ ಮಾಲಾಧಾರಿ ಯಾತ್ರೆ ವೇಳೆ ಹೃದಯಾಘಾತಕ್ಕೆ ಬಲಿ

ಉಳ್ಳಾಲ : ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸೋಮೇಶ್ವರದ ಪಿಲಾರು ದೇಲಂತಬೆಟ್ಟು ನಿವಾಸಿ ಚಂದ್ರಹಾಸ್ ಶೆಟ್ಟಿ (55) ಹೃದಯಾಘಾತದಿಂದ ನಿಧನರಾಗಿದ್ದಾರೆ.ಕೇರಳದ ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಚಂದ್ರಹಾಸ್ ಅವರು ಸಹಪಾಠಿ ಅಯ್ಯಪ್ಪ ಮಾಲಾ ವ್ರತಾಧಾರಿಗಳ ಜೊತೆ ಶನಿವಾರ ಅರ್ಕುಳ ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಚಂದ್ರಹಾಸ್ ಅವರು ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ ಕುಸಿದು ಬಿದ್ದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.ಚಂದ್ರಹಾಸ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ನಡೆಸಿ ಉಳ್ಳಾಲಕ್ಕೆ ತರಲು ಸ್ಪೀಕರ್ ಯು.ಟಿ.ಖಾದರ್…

Read More

ಕುಬಣೂರು ಶ್ರೀ ಪಿಲಿಚಾಮುಂಡಿ,ರಕ್ತೇಶ್ವರೀ ಹಾಗೂ ಗುಳಿಗ ದೈವಸ್ಥಾನದಲ್ಲಿ ವರ್ಷಾವಧಿ ನೇಮ ಜನವರಿ 26ಕ್ಕೆ

ಉಪ್ಪಳ : ಕುಬಣೂರು ಶ್ರೀ ಪಿಲಿಚಾಮುಂಡಿ,ರಕ್ತೇಶ್ವರೀ ಹಾಗೂ ಗುಳಿಗ ದೈವಸ್ಥಾನದಲ್ಲಿ ತಾರೀಕು 26-01-2026ನೇ ಸೋಮವಾರ ಶ್ರೀ ಪಿಲಿಚಾಮುಂಡಿ ದೈವದ ನೇಮ ಮತ್ತು ರಕ್ತೇಶ್ವರಿ,ಗುಳಿಗ ದೈವಗಳ ತಂಬಿಲ ಸೇವೆಯು ಕುಬಣೂರಾಯ ಕುಟುಂಬ ಮತ್ತು ಗ್ರಾಮಸ್ಥರ ಕೊಡುವಿಕೆಯೊಂದಿಗೆ ಬಹು ವಿಜ್ರಂಭಣೆಯಿಂದ ಜರಗಲಿರುವುದು. ಬೆಳಿಗ್ಗೆ ಗಂಟೆ 9ಕ್ಕೆ ಗಣಪತಿ ಹೋಮ ಮಧ್ಯಾಹ್ನ 2.00 ಗಂಟೆಗೆ ಕುಬಣೂರಾಯರ ಮನೆಯಿಂದ ಭಂಡಾರ ಹೊರಟು ಸಾಯಂಕಾಲ ಗಂಟೆ 4.00ರಿಂದ 5.00ರ ತನಕ ಭಜನೆ ,ಸಾಯಂಕಾಲ ಗಂಟೆ 5.00ರಿಂದ ದೈವದ ನೇಮ ನಡೆಯುವುದು

Read More

3.39 ಗ್ರಾಂ ಎಂಡಿಎಮ್‌ಎ ವಶ: ಮೂವರು ಯುವಕರ ಬಂಧನ; ಆಟೋ ಹಾಗೂ ಬುಲೆಟ್ ಜಪ್ತಿ

ಮಂಜೇಶ್ವರ: ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3.39 ಗ್ರಾಂ ಎಂಡಿಎಮ್‌ಎ (MDMA) ಸಾಗಾಟಕ್ಕೆ ಯತ್ನಿಸುತ್ತಿದ್ದ ಮೂವರು ಯುವಕರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಸಂಜೆ 6.15ರ ಸುಮಾರಿಗೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಸ್ಸೋಟ್–ಸತ್ಯದುಕ್ಕ–ಬಡಾಜೆ ಹಿಂದೂಸ್ತಾನ್ ಗ್ರೌಂಡ್ ಸಮೀಪ ನಡೆಸಿದ ತಪಾಸಣೆಯ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. KL-14 AD 9865 ಸಂಖ್ಯೆಯ ಆಟೋ ರಿಕ್ಷಾದ ಹಿಂಬದಿ ಸೀಟಿನಲ್ಲಿ ಮಾರಾಟ ಹಾಗೂ ವೈಯಕ್ತಿಕ ಬಳಕೆಗೆಂದು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದ…

Read More

ಪೈವಳಿಕೆ ಪಂಚಾಯತ್ ಸ್ಟ್ಯಾಂಡಿಂಗ್ ಸಮಿತಿ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಮುಸ್ಲಿಂ ಲೀಗ್ ಸದಸ್ಯೆಯ ಬೆಂಬಲ

ಪೈವಳಿಕೆ: ಇಂದು ನಡೆದ ಆರೋಗ್ಯ–ಶಿಕ್ಷಣ ಸ್ಟ್ಯಾಂಡಿಂಗ್ ಸಮಿತಿ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಸದಸ್ಯೆ ಮೈಮೂನತುಲ್ ಮಿಸ್ರಿಯಾ ಅವರು ಬಿಜೆಪಿ ಸದಸ್ಯೆ ಸುಮನ ಜಿ ಭಟ್ ಅವರಿಗೆ ಮತ ಚಲಾಯಿಸಿದರು. ಇದರೊಂದಿಗೆ ಬಿಜೆಪಿ ಸದಸ್ಯೆ ಸುಮನ ಜಿ ಭಟ್ ಅವರು ಆರೋಗ್ಯ–ಶಿಕ್ಷಣ ಸ್ಟ್ಯಾಂಡಿಂಗ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಡಂಕೋಡಿ ವಾರ್ಡ್‌ನಿಂದ ಗೆದ್ದಿರುವ ಮುಸ್ಲಿಂ ಲೀಗ್ ಸದಸ್ಯೆ ಮೈಮೂನತುಲ್ ಮಿಸ್ರಿಯಾ ಅವರು, ಕುರುಡಪದವು ವಾರ್ಡ್‌ನಿಂದ ಆಯ್ಕೆಯಾದ ಬಿಜೆಪಿ ಸದಸ್ಯೆ ಸುಮನ ಜಿ ಭಟ್ ಅವರಿಗೆ ಮತ ನೀಡಿದರು. ಈ ಮೂಲಕ…

Read More

ಜನವರಿ 15 ರಂದು ಅನುಪಮ ಮಹಿಳಾ ಮಾಸಿಕದ ಬೆಳ್ಳಿ ಹಬ್ಬ ಸಂಭ್ರಮ

ಮಂಗಳೂರು: ಅನುಪಮ ಮಹಿಳಾ ಮಾಸಿಕವು ತನ್ನ 25ನೇ ವರ್ಷಾಚರಣೆ ಆಚರಿಸುವ ಹೊಸ್ತಿನಲ್ಲಿದ್ದು ಈ ಪ್ರಯುಕ್ತ ಬೆಳ್ಳಿ ಹಬ್ಬವನ್ನು ಮಂಗಳೂರಿನ ಪುರಭವನದಲ್ಲಿ ಜನವರಿ 15 ರಂದು ಬೆಳಿಗ್ಗೆ 10 ರಿಂದ ಮಹಿಳೆಯರ ಬೃಹತ್ ಓದುಗರ ಸಮಾವೇಶವನ್ನಾಗಿ ಸಂಭ್ರಮಿಸಲಾಗುವುದೆಂದು ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಎಂ. ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 25ನೇ ವರ್ಷ ಪೂರ್ಣಗೊಳಿಸಿದ ಈ ಸುಸಂದರ್ಭದಲ್ಲಿ ಅನುಪಮ ಬಳಗವು ವಿಶೇಷಾಂಕವೊಂದನ್ನು ಹೊರ ತಂದಿದ್ದು . ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ…

Read More

ಪೈವಳಿಗೆ ಪಂಚಾಯತ್ ಚುನಾವಣೆ ಮತ್ತೆ ಕೈ ಜೋಡಿಸಿದ ಬಿಜೆಪಿ ಯುಡಿಎಫ್ ಮೈತ್ರಿ

ಪೈವಳಿಗೆ ಪಂಚಾಯತ್‌ನಲ್ಲಿ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಮತ್ತೆ ಬಿಜೆಪಿ–ಯುಡಿಎಫ್ ಮೈತ್ರಿ ಸ್ಪಷ್ಟವಾಗಿ ಹೊರಹೊಮ್ಮಿದೆ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ನಡೆದ ಮತದಾನದಲ್ಲಿ ಬಿಜೆಪಿ ಅಭ್ಯರ್ಥಿ ಸುಮನಾ ಜಿ. ಭಟ್ ಅವರು ಸಿಪಿಎಂ ಅಭ್ಯರ್ಥಿ ದಿನೇಶ್ವರಿ ನಾಗೇಶ್ ಅವರನ್ನು ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ಪ್ರಮುಖ ಬೆಳವಣಿಗೆಯಾಗಿ ಕಾಡಂಕೋಡಿ ವಾರ್ಡ್‌ನ ಮುಸ್ಲಿಂ ಲೀಗ್ ಸದಸ್ಯೆ ಮೈಮುನತುಲ್ ಮಿಸ್ರಿಯಾ ಅವರು ಬಿಜೆಪಿ ಸದಸ್ಯೆ ಸುಮನಾ ಜಿ. ಭಟ್ ಪರವಾಗಿ ಮತ ಚಲಾಯಿಸಿದ್ದು, ಬಿಜೆಪಿ–ಯುಡಿಎಫ್…

Read More

ಕೇರಳ ವಿರುದ್ದ ಕರ್ನಾಟಕ ಸಿಎಂ ಹೇಳಿಕೆ ವಾಸ್ತವಕ್ಕೆ ವಿರುದ್ಧ: ಕೆ. ಆರ್. ಜಯಾನಂದ

ಮಂಜೇಶ್ವರ : ಮಲಯಾಳಂ ಭಾಷಾ ಮಸೂದೆ ಹೆಸರಲ್ಲಿ ಕರ್ನಾಟಕ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಸಚಿವರು ಮಸೂದೆ ಯಲ್ಲೇನಿದೆ ಎಂಬುದರಿಯದೇ ಕೇರಳ ಮತ್ತು ಮಲಯಾಳಂ ಬಗ್ಗೆ ವಾಸ್ತವ ವಿರುದ್ಧ ಹೇಳಿಕೆ ನೀಡಿದ್ದು ಸರಿಯಲ್ಲ.ಇದು ಕೇರಳ ವಿರೋಧಿ ಧೋರಣೆ ತಳೆಯುತ್ತಿದ್ದಾರೆ ಎಂಬುವುದಕ್ಕೆ ಉತ್ತಮ ಉದಾಹರಣೆ ಯಾಗಿದೆ. ಈ ಹೇಳಿಕೆ ಎಂದು ಸಿಪಿಐ ಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ ಆರ್ ಜಯಾನಂದ ಆರೋಪಿಸಿದ್ದಾರೆ. ಮಲಯಾಳಂ ಭಾಷಾ ಮಸೂದೆಯನ್ನು ಕೇರಳ ಸರಕಾರ ವರ್ಷದ ಹಿಂದೆಯೇ ಮಂಡಿಸಿ ಅಂಗೀಕರಿಸಿತ್ತು.ಆದರೆ ಅಂದು ಇದಕ್ಕೆ ರಾಷ್ಟ್ರಪತಿ…

Read More

ಮಂಜೇಶ್ವರ: ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಗೆ 1994-95 ನೇ ಸಾಲಿನ ಪೂರ್ವ ವಿದ್ಯಾರ್ಥಿಗಳಿಂದ ಸಹಾಯ ಹಸ್ತ

ಮಂಜೇಶ್ವರ : ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯ ಅಡುಗೆ ಕೋಣೆಗೆ ಅಗತ್ಯವಿರುವ ಸಾಮಾಗ್ರಿಗಳ ಕೊರತೆ ಇರುವುದು ತಿಳಿದ ಹಿನ್ನೆಲೆಯಲ್ಲಿ, ಅದೇ ಶಾಲೆಯ 1994–95ನೇ ಸಾಲಿನ ಪೂರ್ವ ವಿದ್ಯಾರ್ಥಿಗಳು ಶಾಲೆಗೆ ಅಗತ್ಯವಿದ್ದ ಅಡುಗೆ ಕೋಣೆಯ ಸಾಮಾಗ್ರಿಗಳನ್ನು ದೇಣಿಗೆಯಾಗಿ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಪೂರ್ವ ವಿದ್ಯಾರ್ಥಿಗಳಾದ ಅಶ್ರಫ್ ಕುಂಜತ್ತೂರು, ಗಫೂರ್, ಚಂದ್ರಹಾಸ, ಅಶ್ರಫ್ ವಿ.ವಿ., ಗಣೇಶ ಹಾಗೂ ಲತೀಫ್ ಅವರುಗಳು ಅಗತ್ಯ ಸಾಮಾಗ್ರಿಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಪಿಟಿಎ ಅಧ್ಯಕ್ಷರಾದ ಮುಸ್ತಫ ಉದ್ಯಾವರ ಹಾಗೂ ಶಾಲೆಯ…

Read More

“ಪುತ್ತೂರು ಕ್ಷೇತ್ರಕ್ಕೆ ಮೂರು ವರ್ಷದಲ್ಲಿ ₹2709 ಕೋಟಿ ಅನುದಾನ: 629 ಕಾಮಗಾರಿಗಳಿಗೆ ಟೆಂಡರ್, 20 ದಿನದಲ್ಲಿ ಕೆಲಸ ಆರಂಭ – ಶಾಸಕ ಅಶೋಕ್ ರೈ”

ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 23-24ರಲ್ಲಿ ರೂ.1479.59 ಕೋಟಿ, 24-25ರಲ್ಲಿ 529 ಕೋಟಿ ಹಾಗೂ 25-26ರ ಜನವರಿ ತನಕ 251.06 ಕೋಟಿ ಸನುದಾನವೂ ಸೇರಿ ಒಟ್ಟು ರೂ.2259.56 ಕೋಟಿ ಅನುದಾನ ಮಂಜೂರುಗೊಂಡಿದೆ. ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಶಾಸಕರಿಗೆ ನೀಡಿದ ರೂ.50 ಕೋಟಿಯಲ್ಲಿ 550 ರಸ್ತೆ ಕಾಮಗಾರಿ, 79 ಶ್ರದ್ಧಾಕೇಂದ್ರಗಳು ಸೇರಿದಂತೆ ಒಟ್ಟು 629 ಕಾಮಗಾರಿ ಟೆಂಡರ್ ಹಂತದಲ್ಲಿದೆ. ಈ ಕಾಮಗಾರಿಗಳ ನಿರ್ವಹಣೆಗೆ 5 ಗುತ್ತಿಗೆದಾರರಿಗೆ ತಲಾ 10 ಕೋಟಿಯಂತೆ ವಿಭಾಗಿಸಿ ನೀಡಲಾಗಿದೆ. ಈಗಾಗಲೇ ಶೇ.13 ಅನುದಾನ ಮಂಜೂರುಗೊಂಡಿದೆ….

Read More

ಕಾವೂರಿನ ಟೆಕ್ಕಿ ಶರ್ಮಿಳಾ ಸಾವಿನ ರಹಸ್ಯ ಬಯಲು . ಉಸಿರುಗಟ್ಟಿಸಿ ಕೊಂದ ಕೇರಳ ಮೂಲದ 18ರ ಹರೆಯದ ವಿದ್ಯಾರ್ಥಿ ಬಂಧನ

ಮಂಗಳೂರು :ಕಾವೂರಿನ ಟೆಕ್ಕಿ ಶರ್ಮಿಳಾ ಸಾವಿನ ರಹಸ್ಯ ಬಯಲಾಗಿದ್ದು, ಉಸಿರುಗಟ್ಟಿಸಿ ಕೊಂದಿದ್ದ ಕೇರಳ ಮೂಲದ 18ರ ಹರೆಯದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.ಲೈಂಗಿಕವಾಗಿ ಸಹಕರಿಸಲು ನಿರಾಕರಿಸಿದ ಮಂಗಳೂರಿನ ಕಾವೂರು ನಿವಾಸಿ ಟೆಕ್ಕಿ ಶರ್ಮಿಳಾ (35) ಳನ್ನು ಕೊಂದಿದ್ದ 18 ವರ್ಷದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಶರ್ಮಿಳಾ ಕಳೆದ ವಾರ ಬೆಂಗಳೂರಿನ ತಮ್ಮ ಫ್ಲಾಟ್‌ನಲ್ಲಿ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ಮೊದಲು ಶಂಕಿಸಲಾಗಿತ್ತು. ಶರ್ಮಿಳಾ ಅವಿವಾಹಿತೆಯಾಗಿದ್ದು ಸುಬ್ರಹ್ಮಣ್ಯ ಲೇಔಟ್‌ನ ಸಂಕಲ್ಪ ನಿಲಯದಲ್ಲಿ ಎರಡು ಬೆಡ್ರೂಮ್ ಫ್ಲಾಟ್‌ನಲ್ಲಿ ವಾಸವಿದ್ದರು. ಬೆಂಗಳೂರಿನ ಪ್ರಮುಖ…

Read More
error: Content is protected !!